ಅತಿ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ Ather Energy
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆಗಳೊಂದಿಗೆ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ(Ather Energy) ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಳದ ಆಧಾರದ ಮೇಲೆ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದ್ದು, ಇತ್ತೀಚೆಗೆ ಕಂಪನಿಯು ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಂಪನಿಯು ತನ್ನ 16ನೇ ಮಾರಾಟ ಮಳಿಗೆ ಆರಂಭಿಸಿದೆ.

ಎನರ್ಜಿ ಎನರ್ಜಿ ಕಂಪನಿಯು ಈಗಾಗಲೇ ಚಾಲನೆ ನೀಡಿರುವ ಶೋರೂಂಗಳಲ್ಲಿಯೇ ಕೊಯಮತ್ತೂರಿನಲ್ಲಿ ತೆರೆದಿರುವ ಹೊಸ ಶೋರೂಂ ಅತಿ ಹೆಚ್ಚು ಸ್ಥಳಾವಕಾಶ ಹೊಂದಿದ್ದು, ಮಾರಾಟ ಮತ್ತು ಸೇವಾ ಕೇಂದ್ರ ಹೊಂದಿರುವ ಹೊಸ ಶೋರೂಂ ಉತ್ತಮ ಸ್ಥಳಾವಕಾಶದೊಂದಿಗೆ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಪ್ರದರ್ಶನದ ಸೌಲಭ್ಯ ಹೊಂದಿದೆ.

ನಮ್ಮ ಬೆಂಗಳೂರಿನಲ್ಲೂ ಇತ್ತೀಚೆಗೆ ಜೆಪಿ ನಗರದ 5ನೇ ಹಂತದಲ್ಲಿ ಎರಡನೇ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ್ದ ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರಂಗಳಿಗೆ ತೆರೆಯುತ್ತಿದ್ದು, ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿರುವುದಾಗಿ ಭರವಸೆ ನೀಡಿದೆ.

ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎಥರ್ ಕಂಪನಿಯು ಶೀಘ್ರದಲ್ಲೇ ಮೈಸೂರು ಮತ್ತು ಹುಬ್ಬಳ್ಳಿಯಲ್ಲೂ ಕೂಡಾ ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳೊಂದಿಗೆ ಬುಕ್ಕಿಂಗ್ ಆರಂಭವಾಗಲಿದೆ.

ಎಥರ್ ಅಧಿಕೃತ ವೆಬ್‌ಸೈಟ್‌ನಲ್ಲಿ ಹುಬ್ಬಳ್ಳಿ ಮತ್ತು ಮೈಸೂರಿನ ನಗರಗಳಲ್ಲಿ ಬೆಲೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಗಳ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಧಿಕೃತ ಖರೀದಿಗೆ ಪ್ರಕ್ರಿಯೆ ಆರಂಭವಾಗಲಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಾರ್ಷಿಕ 1 ಲಕ್ಷ ಸ್ಕೂಟರ್ ನಿರ್ಮಾಣ ಗುರಿಯೊಂದಿಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿರುವ ಎಥರ್ ಕಂಪನಿಯು ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುತ್ತಿದ್ದು, ಇತ್ತೀಚೆಗೆ ಘೋಷಣೆಯಾದ ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಯೋಜನೆಯಂತೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಕಡಿತಗೊಳಿಸಿ ಗ್ರಾಹಕರ ಸೆಳೆಯುತ್ತಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ಸ್ಟ್ಯಾಂಡರ್ಡ್ 450ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, ಹೊಸ ಸಬ್ಸಡಿ ನಂತರ 450ಎಕ್ಸ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.44 ಲಕ್ಷಕ್ಕೆ ಮತ್ತು 450 ಪ್ಲಸ್ ಬೆಲೆಯನ್ನು ರೂ. 1.25 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಥರ್ ಕಂಪನಿಯು ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೂ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸುತ್ತಿದ್ದು, ಬಳಕೆದಾರರ ಸ್ನೇಹಿಯಾಗಿರುವ ಹೊಸ ಸ್ಕೂಟರ್‌ಗಳು ಹೊಸ ಮಾರಾಟ ಮಳಿಗೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿವೆ.

ಎಥರ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಪ್ರಮಾಣದಲ್ಲಿ ಚಾರ್ಜಿಂಗ್ ನಿಲ್ದಾಣಗಳ ಲಭ್ಯವಾಗುವಂತೆ ನಗರದ ಪ್ರಮುಖ ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಿಸುತ್ತಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಹೆಚ್ಚಿದಂತೆ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆ ಕಂಡುಬರುತ್ತಿದೆ.

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಪ್ರೀಮಿಯಂ ಜೊತೆಗೆ ಬಜೆಟ್ ಬೆಲೆಯ ಸ್ಕೂಟರ್‌ಗಳನ್ನು ಸಹ ಪರಿಚಯಸಲು ಸಿದ್ದವಾಗಿರುವ ಎಥರ್ ಕಂಪನಿಯು ಹೊಸ ಹೊಸ ಸ್ಕೂಟರ್ ಮಾದರಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

ಹೊಸ ಎಥರ್ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆಯೆಂತೆ ಹೊಸ ಸ್ಕೂಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.


Click it and Unblock the Notifications








