Just In
- 3 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 4 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 5 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 5 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಏರಿಕೆ ಮಾಡಿದ ಬಜಾಜ್ ಆಟೋ
ದೇಶಾದ್ಯಂತವಿರುವ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳ ಬೆಲೆಯನ್ನು ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಬಜಾಜ್ ಆಟೋ ಕಂಪನಿಯು ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆಯನ್ನು ಹೆಚ್ಚಿಸಿದೆ. ಚೇತಕ್ ಸ್ಕೂಟರಿನ ಅರ್ಬನ್ ಮಾದರಿಯ ಬೆಲೆಯನ್ನು ರೂ.15 ಸಾವಿರಗಳಷ್ಟು ಹೆಚ್ಚಿಸಲಾಗಿದ್ದರೆ, ಪ್ರೀಮಿಯಂ ಮಾದರಿಯ ಬೆಲೆಯನ್ನು ರೂ.5000ಗಳಷ್ಟು ಹೆಚ್ಚಿಸಲಾಗಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪುಣೆ ಹಾಗೂ ಬೆಂಗಳೂರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಬಜಾಜ್ ಚೇತಕ್‌ನ ಅರ್ಬನ್ ಮಾದರಿಯ ಬೆಲೆ ರೂ.1 ಲಕ್ಷಗಳಿಂದ ರೂ.1.15 ಲಕ್ಷಗಳಿಗೆ ಏರಿಕೆಯಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಇನ್ನು ಪ್ರೀಮಿಯಂ ಮಾದರಿಯ ಬೆಲೆ ರೂ.1.15 ಲಕ್ಷಗಳಿಂದ ರೂ.1.20 ಲಕ್ಷಗಳಿಗೆ ಏರಿಕೆಯಾಗಿದೆ. ಕೋವಿಡ್ 19ನಿಂದಾಗಿ ಚೇತಕ್ ಸ್ಕೂಟರಿನ ಬಿಡಿಭಾಗಗಳ ಸರಬರಾಜಿಗೆ ಅಡಚಣೆಯುಂಟಾಗಿದೆ.

ಬಜಾಜ್ ಕಂಪನಿಗೆ ಚೀನಾದ ವುಹಾನ್ ನಗರದಿಂದ ಬಿಡಿಭಾಗಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚೇತಕ್ ಸ್ಕೂಟರಿನ ಉತ್ಪಾದನೆ ಹಾಗೂ ಬುಕ್ಕಿಂಗ್'ಗಳನ್ನು ಸ್ಥಗಿತಗೊಳಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಂಪನಿಯು ಮತ್ತೆ ಯಾವಾಗ ಬುಕ್ಕಿಂಗ್'ಗಳನ್ನು ಆರಂಭಿಸಲಿದೆ ಎಂದು ತಿಳಿದು ಬಂದಿಲ್ಲ. ಚೇತಕ್ ಸ್ಕೂಟರಿನ ಉತ್ಪಾದನೆಯಲ್ಲಿ ಸ್ಥಳೀಯ ಬಿಡಿಭಾಗಗಳ ಬಳಕೆಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಆದರೆ ಕಂಪನಿಯು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಬೆಲೆ ಏರಿಕೆಯ ನಂತರ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿಗಿಂತ ಹೆಚ್ಚಾಗಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇತ್ತೀಚೆಗೆ ಈ ಸ್ಕೂಟರ್ 50,000 ಯುನಿಟ್ ಬುಕ್ಕಿಂಗ್ ದಾಖಲಿಸಿದೆ. ಆದರೆ ಬಜಾಜ್ ಆಟೋ ಕಂಪನಿಯು ಇದುವರೆಗೂ 1000ಕ್ಕಿಂತಲೂ ಹೆಚ್ಚು ಯುನಿಟ್ ಸ್ಕೂಟರ್'ಗಳನ್ನು ಮಾತ್ರ ವಿತರಿಸಿದೆ. ಉತ್ಪಾದನೆ ಸರಿಯಾಗಿ ಆಗದೇ ಇರುವುದರಿಂದ ವಿತರಣೆ ಸಾಧ್ಯವಾಗುತ್ತಿಲ್ಲ.

ಮುಂದಿನ ದಿನಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಉತ್ಪಾದನೆಯಲ್ಲಿನ ಅಡಚಣೆಗಳು ಕೊನೆಯಾಗುತ್ತವೆ ಎಂದು ಹೇಳಲಾಗಿತ್ತು. ಆದರೆ ಈಗ ಈ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಜಾಜ್ ಆಟೋ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮುಂಬರುವ ದಿನಗಳಲ್ಲಿ ಹಲವು ಹೊಸ ನಗರಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಸದ್ಯಕ್ಕೆ ಈ ಸ್ಕೂಟರ್ ಅನ್ನು ಪುಣೆ ಹಾಗೂ ಬೆಂಗಳೂರಿನ 13 ಡೀಲರ್'ಗಳ ಮಾರಾಟ ಮಾಡಲಾಗುತ್ತಿದೆ.

ಕಂಪನಿಯು ಚೇತಕ್ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಸ್ಕೂಟರಿನತ್ತ ಆಕರ್ಷಿತರಾಗುತ್ತಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೆಲೆ ಹೆಚ್ಚಳದ ನಂತರ ಈ ಸ್ಕೂಟರ್ ಎಷ್ಟು ಸಂಖ್ಯೆಯಲ್ಲಿ ಬುಕ್ಕಿಂಗ್'ಗಳನ್ನು ಸ್ವೀಕರಿಸಲಿದೆ ಎಂಬುದನ್ನು ನೋಡಬೇಕಾಗಿದೆ. ಸರ್ಕಾರಗಳು ನೀಡುತ್ತಿರುವ ಸಬ್ಸಿಡಿ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.