ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ Bajaj Auto ಲಿಮಿಟೆಡ್ ತನ್ನ ಆಗಸ್ಟ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಈ ಅಂಕಿ ಅಂಶಗಳ ಪ್ರಕಾರ, Bajaj Auto ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 1,57,971 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ದ್ವಿಚಕ್ರ ವಾಹನ ಮಾರಾಟ ಪ್ರಮಾಣವು 11% ನಷ್ಟು ಇಳಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

2020ರ ಆಗಸ್ಟ್‌ ತಿಂಗಳಿನಲ್ಲಿ Bajaj Auto ಕಂಪನಿಯು 1,78,220 ಯುನಿಟ್ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತ್ತು. ರಫ್ತಿನ ಬಗ್ಗೆ ಹೇಳುವುದಾದರೆ ಕಂಪನಿಯ ರಫ್ತು ಪ್ರಮಾಣವು 26% ನಷ್ಟು ಹೆಚ್ಚಾಗಿದೆ. ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಕಂಪನಿಯು ಒಟ್ಟು 1,80,339 ಯುನಿಟ್ ದ್ವಿಚಕ್ರ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

ಕಳೆದ ವರ್ಷ ಕಂಪನಿಯು 1,42,838 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಒಟ್ಟು ದ್ವಿಚಕ್ರ ವಾಹನಗಳ ಮಾರಾಟವನ್ನು ನೋಡುವುದಾದರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ಒಟ್ಟು 3,38,310 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 3,21,058 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಕಂಪನಿಯ ಮಾರಾಟವು 5% ನಷ್ಟು ಏರಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

Bajaj Auto ಕಂಪನಿಯ ಕಮರ್ಷಿಯಲ್ ವಾಹನ ವಿಭಾಗದ ಬಗ್ಗೆ ಹೇಳುವುದಾದರೆ, ಕಂಪನಿಯು ಕಳೆದ ತಿಂಗಳು ಒಟ್ಟು 14,624 ಯುನಿಟ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. 2020ರ ಆಗಸ್ಟ್‌ ತಿಂಗಳಿನಲ್ಲಿ ಕಂಪನಿಯು 7,659 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಕಮರ್ಷಿಯಲ್ ವಾಹನ ಮಾರಾಟವು ಈ ವರ್ಷ 91% ನಷ್ಟು ಏರಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

ಕಮರ್ಷಿಯಲ್ ವಾಹನಗಳ ರಫ್ತು ಬಗ್ಗೆ ಹೇಳುವುದಾದರೆ, ಕಳೆದ ತಿಂಗಳು ಕಂಪನಿಯು ಭಾರತದಿಂದ ಒಟ್ಟು 20,336 ಯುನಿಟ್ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದ್ದರೆ, ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಕಂಪನಿಯು 27,482 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಮರ್ಷಿಯಲ್ ವಾಹನ ರಫ್ತು ಪ್ರಮಾಣವು ಈ ವರ್ಷ 26% ನಷ್ಟು ಕುಸಿದಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

Bajaj Auto ಕಂಪನಿಯ ಕಮರ್ಷಿಯಲ್ ವಾಹನಗಳ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು 34,960 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಒಟ್ಟು 35,141 ಯುನಿಟ್ ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಕಂಪನಿಯ ಕಮರ್ಷಿಯಲ್ ವಾಹನಗಳ ಒಟ್ಟು ಮಾರಾಟದಲ್ಲಿ 1% ನಷ್ಟು ಇಳಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

Bajaj Auto ಕಂಪನಿಯ ಆಗಸ್ಟ್ ತಿಂಗಳ ಒಟ್ಟು ಮಾರಾಟದ ಬಗ್ಗೆ ಹೇಳುವುದಾದರೆ, Bajaj Auto ಕಳೆದ ತಿಂಗಳು ದ್ವಿಚಕ್ರ ವಾಹನ ಹಾಗೂ ವಾಣಿಜ್ಯ ವಾಹನಗಳು ಸೇರಿದಂತೆ ಒಟ್ಟು 3,73,270 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಕಂಪನಿಯು 3,56,199 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಎರಡೂ ವಿಭಾಗಗಳ ಮಾರಾಟವು 5% ನಷ್ಟು ಏರಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

ಈ ಹಣಕಾಸು ವರ್ಷದ ಮೊದಲ ಐದು ತಿಂಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಒಟ್ಟು 17,48,400 ದ್ವಿಚಕ್ರ ವಾಹನ ಹಾಗೂ ಕಮರ್ಷಿಯಲ್ ವಾಹನಗಳನ್ನು ಏಪ್ರಿಲ್ - ಆಗಸ್ಟ್ 2021 ರವರೆಗೆ ಮಾರಾಟ ಮಾಡಿದೆ. ಏಪ್ರಿಲ್ - ಆಗಸ್ಟ್ 2020 ರ ನಡುವೆ ಕಂಪನಿಯು 10, 55,134 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಈ ಅವಧಿಯಲ್ಲಿ ಕಂಪನಿಯ ಮಾರಾಟ ಪ್ರಮಾಣವು 66% ನಷ್ಟು ಏರಿಕೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

ಕ್ಯೂಟ್, Bajaj Auto ಕಂಪನಿಯ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದು. ಕ್ಯೂಟ್ ಕ್ವಾಡ್ರೈಸಿಕಲ್ ವಾಹನವಾಗಿದೆ. ಕೆಲವು ಕಾರಣಗಳಿಗಾಗಿ Bajaj Auto ಕಂಪನಿಯು ಈ ವಾಹನದ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿತು.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

Bajaj Auto ಕಂಪನಿಯು ಈ ಕ್ವಾಡ್ರೈಸಿಕಲ್ ವಾಹನವನ್ನು ಇನ್ನೂ ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಕ್ಯೂಟ್ ಬಜೆಟ್ ಬೆಲೆಯ ವಾಹನವಾಗಿದೆ. ಕ್ಯೂಟ್ ವಾಹನವು ರೂ. 2.50 ಲಕ್ಷಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ಆಗಸ್ಟ್ ತಿಂಗಳಿನಲ್ಲಿ ಇಳಿಕೆ ಕಂಡ Bajaj Auto ದ್ವಿಚಕ್ರ ವಾಹನ ಮಾರಾಟ ಪ್ರಮಾಣ

Bajaj Auto ಕಂಪನಿಯು ಈ ವಾಹನವನ್ನು ಮತ್ತೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ವಾಹನವನ್ನು ಬಿಡುಗಡೆಗೊಳಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಈ ಬಾರಿ ಬಿಡುಗಡೆಯಾದ ನಂತರ ಈ ವಾಹನವು ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Bajaj auto two wheeler sales decreased during august 2021 details
Story first published: Wednesday, September 1, 2021, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X