ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಬಜಾಜ್ ಆಟೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಆಯ್ದ ಬೈಕ್‌ಗ ಬೆಲೆಯನ್ನು ಪರಿಷ್ಕರಿಸಿದೆ. ಇದರಲ್ಲಿ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ಕೂಡ ಸೇರಿಕೊಂಡಿದೆ. ಇದರಿಂದ ಈ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಬಜಾಜ್ ಆಟೋ ಕಂಪನಿಯು ಈ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ಬೆಲೆಯನ್ನು ರೂ.3,456 ವರೆಗೂ ಹೆಚ್ಚಿಸಲಾಗಿದೆ. ಇದೀಗ ಈ ಹೊಸ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ಬೆಲೆಯು ರೂ.1,13,363 ಗಳಾಗಿದೆ. ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ವಾಲ್ಕನೊ ರೆಡ್, ಸ್ಪಾರ್ಕಲ್ ಬ್ಲ್ಯಾಕ್, ಸ್ಯಾಪರ್ ಬ್ಲೂ ಮತ್ತು ಪರ್ಲ್ ವೈಟ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ವಾಲ್ಕನೊ ರೆಡ್ ಬಣ್ಣವು ವೈಟ್-ಬ್ಲ್ಯಾಕ್ ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ, ಆದರೆ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣವು ರೆಡ್ ಗ್ರಾಫಿಕ್ಸ್ ಮತ್ತು ಮುಖ್ಯಾಂಶಗಳನ್ನು ಪಡೆಯುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಈ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ನಲ್ಲಿ ಹೆಡ್‌ಲ್ಯಾಂಪ್ ಕೌಲ್, ಎಂಜಿನ್ ಕೌಲ್, ಇಂಧನ ಟ್ಯಾಂಕ್, ಸೈಡ್ ಪ್ಯಾನೆಲ್‌ಗಳು ಮತ್ತು ಹಿಂಭಾಗದ ಟೈಲ್ ವಿಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣಗಳನ್ನು ಕಾಣಬಹುದು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ ಹೊಸ ಗ್ರಾಫಿಕ್ಸ್ ಉತ್ತಮವಾಗಿ ಕಾಣುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಮತ್ತೊಂದು ಕಾಸ್ಮೆಟಿಕ್ ಅಪ್‌ಡೇಟ್ ಮುಂಭಾಗದ ಮಡ್‌ಗಾರ್ಡ್‌ನಲ್ಲಿ ಆಕರ್ಷಕ ಸ್ಟಿಕ್ಕರ್ ಆಗಿದೆ. ಒಟ್ಟಾರೆ ಥೀಮ್‌ಗೆ ಅನುಗುಣವದ ಅಲಾಯ್ ವ್ಹೀಲ್ ಡೆಕಲ್‌ಗಳನ್ನು ಸಹ ಪಡೆದಿದೆ. ಈ ಬಜಾಜ್ ಪಲ್ಸರ್ ಬೈಕಿನಲ್ಲಿ ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಇನ್ನು ಈ ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಬೈಕಿನ ವೇಗ, ಇಂಧನ ದಕ್ಷತೆ, ಇಂಧನ ಎಷ್ಟೂ ದೂರ ಸಾಗಲು ಇದೆ, ಸೈಡ್-ಸ್ಟ್ಯಾಂಡ್ ಅಲರ್ಟ್, ಓಡೋಮೀಟರ್ ಸರ್ವಿಸ್ ರಿಮೈಂಡರ್ ಮತ್ತು ಅನೇಕ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಇನ್ನು ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ನಲ್ಲಿ 178.6 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 16.8 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 14.52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಹೊಸ ಬಜಾಜ್ ಪಲ್ಸರ್ 180 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ ಗಳ ಸೆಟಪ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದ 280 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಎಬಿಎಸ್ ಸಿಸ್ಟಂ ಅನ್ನು ನೀಡಿದೆ.

ಬೆಲೆ ಏರಿಕೆ ಪಡೆದುಕೊಂಡ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್

ಈ ಬಜಾಜ್ ಪಲ್ಸರ್ 180 ಡೆಗರ್ ಎಡ್ಜ್ ಎಡಿಷನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಬಜಾಜ್ ಪಲ್ಸರ್ 180 ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍‍ಟಿಆರ್ 180 ಮತ್ತು ಹೋಂಡಾ ಹಾರ್ನೆಟ್ 2.0 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bajaj Pulsar 180 Dagger Edge Edition Gets Expensive. Read In Kannada.
Story first published: Tuesday, July 13, 2021, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X