ಬಜಾಜ್ ಹೊಸ ಪಲ್ಸರ್ ಎನ್250, ಎಫ್250 ಬಿಡುಗಡೆಯ ವಾಕರೌಂಡ್ ವಿಡಿಯೋ

ಬಜಾಜ್ ಆಟೋ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಪಲ್ಸರ್ ಸರಣಿಯಲ್ಲಿ ಹೊಸ ಎನ್250 ಮತ್ತು ಎಫ್250 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ಪಲ್ಸರ್ ಎನ್250 ಮತ್ತು ಎಫ್250 ಬೈಕ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 1.38 ಲಕ್ಷ ಮತ್ತು ರೂ. 1.40 ಲಕ್ಷಕ್ಕೆ ಬಿಡುಗಡೆಯಾಗಿದ್ದು, ಹೊಸ ಬೈಕ್ ಮಾದರಿಗಳು 250 ಸಿಸಿ ಆಯಿಲ್ ಕೂಲ್ಡ್ ಎಂಜಿನ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಪಡೆದುಕೊಂಡಿವೆ. ಹೊಸ ಪಲ್ಸರ್ ಎನ್250 ಮತ್ತು ಎಫ್250 ಮಾದರಿಗಳು ಎಲ್ಇಡಿ ಹೆಡ್‌ಲೈಟ್ ಮತ್ತು ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಹೊಂದಿದ್ದು, ಎರಡೂ ಬೈಕ್ ಆವೃತ್ತಿಗಳಲ್ಲೂ ಸ್ಪ್ಲಿಟ್ ಸೀಟ್‌ಗಳು ಮತ್ತು ಡಿಜಿ-ಅನಲಾಗ್ ಇನ್‌ಸ್ಟ್ರುಮೆಂಟೇಶನ್ ಪಡೆದುಕೊಂಡಿವೆ.

ಎಫ್250 ಮಾದರಿಯಲ್ಲಿ ಮಡಿಕೆ ಮಾಡಬಹುದಾದ ಕನ್ನಡಿಗಳನ್ನು ತೀಕ್ಷ್ಣವಾಗಿರುವ ಸೆಮಿ-ಫೇರಿಂಗ್‌ನಲ್ಲಿ ಜೋಡಣೆ ಹೊಂದಿದ್ದು, ಫೇರಿಂಗ್‌ ಹಿಂದೆ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ಎತ್ತರಿಸಲಾಗಿದೆ. ನೇಕೆಡ್ ಮಾದರಿಯ ಪಲ್ಸರ್ ಎನ್250 ಮಾದರಿಯಲ್ಲಿ ಎಲ್ಇಡಿ ಹೆಡ್‌ಲೈಟ್‌, ಆಕ್ರಮಣಕಾರಿ ಮುಂಭಾಗದ ವಿನ್ಯಾಸ ಹೊಂದಿದೆ.

ಪಲ್ಸರ್ ಸರಣಿಯ ಇತರೆ ಮಾದರಿಗಳಲ್ಲಿ ಕಂಡುಬರುವ ಟ್ವಿನ್ ಎಲ್ಇಡಿ ಟೈಲ್-ಲೈಟ್‌ಗಳೊಂದಿಗೆ ಎರಡೂ ಬೈಕ್‌ಗಳ ಹಿಂಭಾಗವು ಸಾಕಷ್ಟು ತೀಕ್ಷ್ಣವಾಗಿದ್ದು, ಆದಾಗ್ಯೂ, ಮಿಶ್ರಲೋಹದ ಚಕ್ರ ವಿನ್ಯಾಸವು NS/RS ಮಾದರಿಗಳಂತೆಯೇ ಇರುತ್ತದೆ.

ಹೊಸ ಬೈಕ್‌ಗಳ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಚಾನೆಲ್ ಎಬಿಎಸ್‌ನೊಂದಿಗೆ 230 ಎಂಎಂ ಡಿಸ್ಕ್ ಅನ್ನು ಹೊಂದಿದ್ದು, ಹೊಸ ಪಲ್ಸರ್‌ಗಳು 14 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ 162 ಕೆಜಿ ತೂಕ ಹೊಂದಿವೆ.

Most Read Articles

Kannada
English summary
Bajaj pulsar n250 f250 launched first look video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X