ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ವಾಹನಗಳ ಪ್ರಮುಖ ಬಿಡಿಭಾಗಗಳಲ್ಲಿ ಟಯರ್‌ಗಳು ಸಹ ಸೇರಿವೆ. ತಂತ್ರಜ್ಞಾನ ಬೆಳೆದಂತೆಲ್ಲಾ ಟಯರ್ ತಯಾರಕ ಕಂಪನಿಗಳು ಸಹ ಹೊಸ ಹೊಸ ತಂತ್ರಜ್ಞಾನಗಳಿಗೆ ಆದ್ಯತೆ ನೀಡುತ್ತಿವೆ.

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಯಾವುದಾದರೂ ಸ್ಥಳಗಳಿಗೆ ತೆರಳಿದ ಸಂದರ್ಭಗಳಲ್ಲಿ ಹಠಾತ್ತನೇ ಟಯರ್‌ಗಳ ಪಂಕ್ಚರ್ ಆದಾಗ ಜನರಿಗೆ ತೊಂದರೆಯಾಗುವುದು ಸಹಜ. ಎಷ್ಟೋ ಸಂದರ್ಭಗಳಲ್ಲಿ ಜನರಿಗೆ ಪಂಕ್ಚರ್ ಪ್ರೂಫ್ ಟಯರ್ ಇದ್ದರೆ ಎಷ್ಟು ಚಂದ ಎಂದು ಅನಿಸಿರುವುದು ಸುಳ್ಳಲ್ಲ. ಭಾರತದಲ್ಲಿ ಹಲವು ಕಂಪನಿಗಳು ಟಯರ್‌ಗಳನ್ನು ಉತ್ಪಾದಿಸುತ್ತವೆ. ಅವುಗಳಲ್ಲಿ ಸಿಯೆಟ್ ಕಂಪನಿಯು ಸಹ ಸೇರಿದೆ.

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಸಿಯೆಟ್ ಕಂಪನಿಯು ಭಾರತದಲ್ಲಿ ಬೈಕ್, ಆಟೋ, ಕಾರ್‌ ಸೇರಿದಂತೆ ಹಲವಾರು ವಾಹನಗಳಿಗೆ ಟಯರ್‌ಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಕಂಪನಿಯು ಭಾರತದಲ್ಲಿ ಪಂಕ್ಚರ್ ಸೇಫ್ ಸಾಮರ್ಥ್ಯದ ಟಯರ್‌ಗಳನ್ನು ಸಹ ಮಾರಾಟ ಮಾಡುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಈಗ ಸಿಯೆಟ್ ಕಂಪನಿಯು ತನ್ನ ಪಂಕ್ಚರ್ ಸೇಫ್ ಸಾಮರ್ಥ್ಯದ ಟಯರ್‌ಗಳ ಬಗೆಗಿನ ಹೊಸ ಜಾಹೀರಾತಿನ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ಜಾಹೀರಾತಿನ ವೀಡಿಯೊದಲ್ಲಿ ಖ್ಯಾತ ಚಿತ್ರ ನಟ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿರುವುದು ವಿಶೇಷ.

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಈ ವೀಡಿಯೊದಲ್ಲಿ ಸಿಯೆಟ್ ಟಯರ್‌ಗಳ ಪಂಕ್ಚರ್ ಸೇಫ್ ಸಾಮರ್ಥ್ಯದ ಬಗ್ಗೆ ಹೇಳಲಾಗಿದೆ. ಕಂಪನಿಯು ಇತ್ತೀಚೆಗಷ್ಟೇ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ರಾಣಾ ದಗ್ಗುಬಾಟಿಯವರನ್ನು ನೇಮಿಸಿಕೊಂಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಈಗ ಅವರ ಮೂಲಕ ಹೊಸ ಪ್ರಚಾರ ವೀಡಿಯೊವನ್ನು ನಿರ್ಮಿಸಿ ಬಿಡುಗಡೆಗೊಳಿಸಿದೆ. ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳಲ್ಲಿ ಈ ಜಾಹೀರಾತನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು.

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಈ ಪ್ರಚಾರದ ವಿಡಿಯೋವನ್ನು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈಗ ಭಾರತ-ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಈ ಜಾಹೀರಾತನ್ನು ಪ್ರದರ್ಶಿಸಲಾಗುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ಈ ವೀಡಿಯೊದಲ್ಲಿ ರಾಣಾ ದಗ್ಗುಬಾಟಿ ಮೊಳೆ ಬಾಬಾ ಎಂಬ ಹೆಸರಿನಿಂದ ಖ್ಯಾತರಾಗಿರುತ್ತಾರೆ. ಈ ಜಾಹೀರಾತಿನಲ್ಲಿ ಅವರು ಮೊಳೆಗಳಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದನ್ನು ಕಾಣಬಹುದು.

ದ್ವಿಚಕ್ರ ವಾಹನಗಳಿಗಾಗಿಯೇ ಪ್ರತ್ಯೇಕವಾಗಿ ತಯಾರಿಸಲಾಗಿರುವ ಸಿಯೆಟ್ ಕಂಪನಿಯ ಟಯರ್‌ಗಳಲ್ಲಿ ಮೊಳೆಗಳು ಸೇರಿಕೊಂಡರೂ ಅವುಗಳಿಂದ ಉಂಟಾಗುವ ರಂಧ್ರಗಳು ಆಟೋಮ್ಯಾಟಿಕ್ ಆಗಿ ಮುಚ್ಚಿಕೊಳ್ಳುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೊಳೆ ಚುಚ್ಚಿಕೊಂಡರೂ ಸರಾಗವಾಗಿ ಚಲಿಸುತ್ತವೆ ಈ ಟಯರ್‌ಗಳು

ತನ್ನ ಟಯರ್‌ಗಳಲ್ಲಿರುವ ಪಂಕ್ಚರ್ ಸೇಫ್ ಸಾಮರ್ಥ್ಯವನ್ನು ತೋರಿಸುವ ಉದ್ದೇಶದಿಂದ ಸಿಯೆಟ್ ಕಂಪನಿಯು ಈ ಹೊಸ ಜಾಹೀರಾತನ್ನು ಬಿಡುಗಡೆಗೊಳಿಸಿದೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ceat tyre company releases new TVC about puncture safe bike tyres. Read in Kannada.
Story first published: Monday, February 15, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X