ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ತಯಾರಿಸುವುದರಲ್ಲಿ ಅವರು ನಿಸ್ಸಿಮರು. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಥೇಟ್ ಅದೇ ರೀತಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆ.

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಇನ್ನು ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನೇ ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇಟಿಲಿಯ ಮೂಲದ ಡುಕಾಟಿ ಕಂಪನಿಯ ಪಾನಿಗಲೆ 959 ಬೈಕಿನ ಡಿಸೈನ್ ಕಾಪಿ ಮಾಡಿ ಥೇಟ್ ಅದೇ ರೀತಿಯ ಹೊಸ ಬೈಕನ್ನು ತಯಾರಿಸಿದ್ದಾರೆ. ಜನಪ್ರಿಯ ಡುಕಾಟಿ ಪಾನಿಗಲೆ 959 ಬೈಕಿನ ಡಿಸೈನ್ ಕದ್ದು ಚೀನಾದ ಮೋಕ್ಸಿಯಾವ್ ಮೋಟಾರ್ ಮ್ಯಾಕ್ಸಿಯಾವ್ 500ಆರ್‌ಆರ್ ಎಂಬ ಹೆಸರಿನಲ್ಲಿ ಬೈಕನ್ನು ಪರಿಚಯಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಬೈಕನ್ನು ಸೂಕ್ಷವಾಗಿ ಗಮನಿಸಿದರೆ ಮಾತ್ರ ಇದು ಕಾಪಿ ಕ್ಯಾಟ್ ಬೈಕ್ ಎಂದು ತಿಳಿಯುತ್ತದೆ. ಚೀನೀ ತಯಾರಕರು ಡುಕಾಟಿಯ ಐಕಾನಿಕ್ ಕೆಂಪು ಬಣ್ಣ ಮತ್ತು ಬಿಳಿ ಬ್ಯಾಡ್ಜಿಂಗ್ ಅನ್ನು ಸಹ ಕಾಪಿ ಮಾಡಿದ್ದಾರೆ.

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮ್ಯಾಕ್ಸಿಯಾವ್ 500ಆರ್‌ಆರ್ ಬೈಕಿನಲ್ಲಿ 471 ಸಿಸಿ, ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47.5 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 43 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಬೈಕ್ 165 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು 6.1 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಫೀಡ್ ಅನ್ನು ಪಡೆದುಕೊಳ್ಳುತ್ತದೆ. ಈ ಅಂಕಿಅಂಶಗಳು ಸಾಕಷ್ಟು ಆಕರ್ಷಕವಾಗಿವೆ.

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ತಯಾರಿಸಿದ ಸೂಪರ್ ಬೈಕ್ ಗಿಂತ ಭಾರತದಲ್ಲಿ ಮಾರಾಟವಾಗುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಹೆಚ್ಚು ಪವರ್ ಫುಲ್ ಆಗಿದೆ. ಇಂಟರ್‌ಸೆಪ್ಟರ್ 650 ಬೈಕಿನಲ್ಲಿ 648 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 47.65 ಬಿಹೆಚ್‍ಪಿ ಪವರ್ ಮತ್ತು 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಮ್ಯಾಕ್ಸಿಯಾವ್ 500ಆರ್‌ಆರ್ ಬೈಕಿನ ಮುಂಭಾಗದಲ್ಲಿ ಡಿಯಲ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಡಿಸ್ ಬ್ರೇಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಲಾಗಿದೆ.

ಜನಪ್ರಿಯ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಈ ಬೈಕಿನಲ್ಲಿ 22 ಲೀಟರ್ ಸಾಮರ್ಥ್ಯದ ಬೃಹತ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಈ ಬೈಕ್ 22.2 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಈ ಬೈಕಿನ ಎಲ್ಇಡಿ ಹೆಡ್ ಲೈಟ್, ಫೇರಿಂಗ್ ಮತ್ತು ಹಿಂಭಾಗದ ಟೈಲ್ ಲ್ಯಾಂಪ್ ಮೂಲ ಡುಕಾಟಿ ಪಾನಿಗಲೆ ಸೂಪರ್‍‍ಬೈಕ್ ಮಾದರಿಗೆ ಹೋಲುತ್ತವೆ.

Most Read Articles

Kannada
English summary
China’s Ducati Panigale copycat Superbike. Read In Kananda.
Story first published: Wednesday, April 21, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X