Just In
Don't Miss!
- News
ಮತ್ತೊಂದು ದಾಖಲೆಯ ಮಟ್ಟವನ್ನ ತಲುಪಿದ ಪೆಟ್ರೋಲ್, ಡೀಸೆಲ್ ದರ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪರಿಸರ ಸ್ನೇಹಿ ಚಾರ್ಜಿಂಗ್ ಸಿಸ್ಟಂಗಳನ್ನು ಸ್ಥಾಪಿಸಲಿದೆ ಈ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇ-ಬೈಕ್ ಗೋ 100%ನಷ್ಟು ಪರಿಸರ ಸ್ನೇಹಿ ಚಾರ್ಜಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿದೆ. ಈ ಕಾರಣಕ್ಕೆ ಕಂಪನಿಯು ಸೋಲಾರ್ ಪ್ಯಾನೆಲ್ ಹಾಗೂ ಎಕ್ವಿಪ್ ಮೆಂಟ್ ಗಳ ತಯಾರಕರ ಕಂಪನಿಯಾದ ಎಸ್‌ಕೆಎಸ್ ಕ್ಲಿಯಾಂಟೆಕ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಎಸ್‌ಕೆಎಸ್ ಕ್ಲಿಯಾಂಟೆಕ್ ಇ-ಬೈಕ್ ಗೋ ಎಲೆಕ್ಟ್ರಿಕ್ ವಾಹನಗಳಿಗಾಗಿ ಸೋಲಾರ್ ಪ್ಯಾನೆಲ್ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಈ ನಿಲ್ದಾಣಗಳಲ್ಲಿ ವಾಹನಗಳ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಸೌರ ಶಕ್ತಿಯಿಂದ ಪಡೆದ ವಿದ್ಯುತ್ ಅನ್ನು ಬಳಸಲಾಗುತ್ತದೆ. ಚಾರ್ಜಿಂಗ್ ಸ್ಟೇಷನ್‌ನ ರೂಫ್ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿರುವ ಮುಖ್ಯ ಬ್ಯಾಟರಿಯು ಚಾರ್ಜ್ ಆಗುತ್ತದೆ.

ಈ ಬ್ಯಾಟರಿಯಲ್ಲಿ ಸಂಗ್ರಹವಾಗಿರುವ ವಿದ್ಯುತ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾರ್ಜ್ ಮಾಡುತ್ತದೆ. ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿಗಳನ್ನು ತಯಾರಿಸುವುದರಿಂದ ಪೆಟ್ರೋಲ್, ಡೀಸೆಲ್ ವಾಹನಗಳಿಗಿಂತ 74%ನಷ್ಟು ಕಾರ್ಬನ್ ಡೈ ಆಕ್ಸೈಡ್ ಹೊರ ಹೊಮ್ಮುತ್ತದೆ ಎಂದು ಎಸ್‌ಕೆಎಸ್ ಕ್ಲೀನ್‌ಟೆಕ್ ತಜ್ಞರು ಹೇಳಿದ್ದಾರೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ಮನೆ, ಕಚೇರಿ ಅಥವಾ ಪಾರ್ಕಿಂಗ್‌ಗಳಲ್ಲಿ ಚಾರ್ಜ್ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಎಲೆಕ್ಟ್ರಿಕ್ ಹೊರ ಹೊಮ್ಮುತ್ತದೆ. ಇದರಿಂದ ಮತ್ತಷ್ಟು ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗುತ್ತದೆ.

ಸೌರ ಆಧಾರಿತ ಚಾರ್ಜಿಂಗ್ ಕೇಂದ್ರಗಳು ಡೈರೆಕ್ಟ್ ಕರೆಂಟ್ ಅನ್ನು ಬಳಸುತ್ತವೆ ಎಂದು ಇ-ಬೈಕ್ ಗೋ ಹೇಳುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು 30%ನಷ್ಟು ಹೆಚ್ಚಿನ ವೇಗದಲ್ಲಿ ಚಾರ್ಜ್ ಮಾಡಬಹುದು. ಈ ತಂತ್ರಜ್ಞಾನವು ವಾಹನವನ್ನು ಚಾರ್ಜ್ ಮಾಡುವ ಸಮಯವನ್ನು ಉಳಿಸುತ್ತದೆ. ಜೊತೆಗೆ 100%ನಷ್ಟು ಪರಿಸರ ಸ್ನೇಹಿಯಾಗಿರುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವರದಿಗಳ ಪ್ರಕಾರ 2 ಕಿ.ವ್ಯಾ ಬ್ಯಾಟರಿಯನ್ನು ಚಾರ್ಜ್ ಮಾಡಲು ಎರಡು ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಈ ಎರಡು ಯೂನಿಟ್ ಉತ್ಪಾದಿಸುವಾಗ 2 ಕೆ.ಜಿಯಷ್ಟು ಕಾರ್ಬನ್ ಡೈಆಕ್ಸೈಡ್ ಹೊರಹೊಮ್ಮುತ್ತದೆ. ಆದರೆ ಸೋಲಾರ್ ಚಾರ್ಜಿಂಗ್ ಸಂಪೂರ್ಣವಾಗಿ ಪ್ಯೂರ್ ಟೆಕ್ನಾಲಜಿಯನ್ನು ಆಧರಿಸಿದ್ದು, ಕಡಿಮೆ ವೆಚ್ಚವಾಗುತ್ತದೆ.

ಇ ಬೈಕ್ ಗೋ ದೇಶದ ಐದು ನಗರಗಳಲ್ಲಿ 3,000 ಫಾಸ್ಟ್ ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸುತ್ತಿದೆ. ಈ ಚಾರ್ಜಿಂಗ್ ಸ್ಟೇಷನ್'ಗಳಲ್ಲಿ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಚಾಲಿತ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯು ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರು, ದೆಹಲಿ / ಎನ್‌ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್'ಗಳನ್ನು ಆರಂಭಿಸಲಿದೆ. ಮುಂದಿನ ಒಂದು ವರ್ಷದಲ್ಲಿ 15,000ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.

ಎಲ್ಲಾ ಚಾರ್ಜಿಂಗ್ ಕೇಂದ್ರಗಳಲ್ಲಿ ನಗದುರಹಿತ ಪಾವತಿ ಹಾಗೂ ಕ್ಯೂಆರ್ ಕೋಡ್ ಪಾವತಿಗಳನ್ನು ಆರಂಭಿಸಲಾಗುವುದು. ಕಂಪನಿಯು ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಹ ಬಿಡುಗಡೆಗೊಳಿಸಲಿದೆ. ಈ ಅಪ್ಲಿಕೇಶನ್ ನೆರವಿನಿಂದ ಹತ್ತಿರದಲ್ಲಿರುವ ಚಾರ್ಜಿಂಗ್ ಸ್ಟೇಷನ್‌ಗಳನ್ನು ತಲುಪಬಹುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕೆಲ ತಿಂಗಳ ಹಿಂದಷ್ಟೇ ಇ ಬೈಕ್ ಗೋ ಚಂದಾದಾರಿಕೆ ಆಧಾರಿತ ಎನ್ವಿಯರ್ಸ್ ಇ-ಸೈಕಲ್ ಅನ್ನು ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಡೆಲಿವರಿ ಏಜೆಂಟ್'ಗಳಿಗಾಗಿಯೇ ಬಿಡುಗಡೆಗೊಳಿಸಲಾಗಿದೆ. ಈ ಇ-ಸೈಕಲ್ ಅನ್ನು ದೈನಂದಿನ ಅಥವಾ ಮಾಸಿಕ ಚಂದಾದಾರಿಕೆ ಆಧಾರದ ಮೇಲೆ ಬುಕ್ಕಿಂಗ್ ಮಾಡಬಹುದು.

ಇ-ಸೈಕಲ್ ಬಾಡಿಗೆ ಒಂದು ದಿನಕ್ಕೆ ರೂ.80ಗಳಾಗಿದೆ. ಈ ಇ-ಸೈಕಲ್ ಅನ್ನು 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಸೈಕಲ್ 60-70 ಕಿ.ಮೀಗಳವರೆಗೆ ಚಲಿಸುತ್ತದೆ.