ಅರ್ಥ್ ಎನರ್ಜಿ ನಿರ್ಮಾಣದ ಹೊಸ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಂಪ್ರಾದಾಯಿಕ ವಾಹನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳ ಉತ್ಪನ್ನಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಮುಂಬೈ ಮೂಲದ ಅರ್ಥ್ ಎನರ್ಜಿ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿ ರೂ. 1 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಅರ್ಥ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಂದು ಸ್ಕೂಟರ್ ಮತ್ತು ಎರಡು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಇವಿ ವಾಹನಗಳನ್ನು ಶೀಘ್ರದಲ್ಲೇ ಗ್ರಾಹಕರ ಕೈಸೇರಲಿವೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಅರ್ಥ್ ಎನರ್ಜಿ ಕಂಪನಿಯು ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಪ್ರೀಮಿಯಂ ಸೌಲಭ್ಯ ಹೊಂದಿರುವ ಎರಡು ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಪರಿಚಯಿಸಲಾಗಿದ್ದು, ಹೊಸ ವಾಹನಗಳ ಉತ್ಪಾದನೆಗಾಗಿ ಗರಿಷ್ಠ ಶೇ.96 ರಷ್ಟು ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಗೊಂಡ ಬಿಡಿಭಾಗಗಳನ್ನೇ ಬಳಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಅರ್ಥ್ ಎನರ್ಜಿ ಕಂಪನಿಯು ಗ್ಲೆಡೆ ಪ್ಲಸ್ ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮತ್ತು ಇವೊಲ್ವೆ ಎನ್ನುವ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ್ದು, ಇವೊಲ್ವೆ ಮೋಟಾರ್‌ಸೈಕಲ್ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಇವೊಲ್ವೆ ಜೆಡ್ ಮತ್ತು ಇವೊಲ್ವೆ ಆರ್ ಎನ್ನುವ ಎರಡು ಮಾದರಿಗಳನ್ನು ಹೊಂದಿದೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಗ್ಲೆಡೆ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.4 W ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 60 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 92 ಸಾವಿರ ಬೆಲೆ ಹೊಂದಿರುವ ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್ ಆದಲ್ಲಿ ಗರಿಷ್ಠ 100 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಇವೊಲ್ವೆ ಜೆಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯು ಸ್ಟೋರ್ಟಿ ವಿನ್ಯಾಸದೊಂದಿಗೆ 96 ಎಹೆಚ್ ಲೀ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 1.30 ಲಕ್ಷ ಬೆಲೆ ಹೊಂದಿರುವ ಈ ಬೈಕ್ 95 ಕಿಮಿ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 100 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಟಾಪ್ ಎಂಡ್ ಮಾದರಿಯಾದ ಇವೊಲ್ವೆ ಆರ್ ಮೋಟಾರ್‌ಸೈಕಲ್ ಆವೃತ್ತಿಯು ಪ್ರೀಮಿಯಂ ಸೌಲಭ್ಯಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ.1.42 ಲಕ್ಷ ಬೆಲೆ ಹೊಂದಿದ್ದು, 105 ಕಿಮಿ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 100 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ.

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಸದ್ಯಕ್ಕೆ ಮೂರು ಹೊಸ ಇವಿ ವಾಹನಗಳನ್ನು ಬಿಡುಗಡೆ ಮಾಡಿರುವ ಅರ್ಥ್ ಎನರ್ಜಿಯು ಈ ವರ್ಷಾಂತ್ಯಕ್ಕೆ ಒಟ್ಟು ಆರು ದ್ವಿಚಕ್ರ ವಾಹನಗಳ ಮಾರಾಟ ಹೊಂದಿರಲಿದ್ದು, 4,500 ಯುನಿಟ್ ಇವಿ ವಾಹನ ಮಾರಾಟ ಗುರಿಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅರ್ಥ್ ಎನರ್ಜಿ ಇವಿ ದ್ವಿಚಕ್ರ ವಾಹನ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ವಾಹನಗಳಲ್ಲಿ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಬಿ ಟು ಬಿ ಉದ್ದೇಶಗಳಿಗೆ ಪೂರೈಕೆ ಮಾಡುವ ಯೋಜನೆ ಹೊಂದಿರುವ ಅರ್ಥ್ ಎನರ್ಜಿ ಕಂಪನಿಯು ಸದ್ಯಕ್ಕೆ ಮುಂಬೈನಲ್ಲಿ ಮಾತ್ರ ವಾಹನ ಮಾರಾಟ ಪ್ರಕ್ರಿಯೆ ಆರಂಭಿಸಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಜಾಲ ವಿಸ್ತರಿಸುವ ಯೋಜನೆ ಹೊಂದಿದ್ದು, ಹೊಸ ಯೋಜನೆಗಾಗಿ ಹೂಡಿಕೆದಾರರನ್ನು ಎದುರು ನೋಡುತ್ತಿದೆ.

Article Published On: Tuesday, February 23, 2021, 18:52 [IST]
English summary
Earth EV Electric Two-Wheelers Bookings Open. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+