ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಾಹನಗಳ ಎಂಜಿನ್'ಗಳನ್ನು ಬಿಎಸ್ 6ಗೆ ಅಪ್ ಡೇಟ್ ಮಾಡುವುದರಿಂದ ಹಿಡಿದು ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಆಕರ್ಷಕ ಕೊಡುಗೆಗಳನ್ನು ನೀಡುವವರೆಗೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದು ಕೊಳ್ಳುತ್ತಿದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ವಾಹನ ಉದ್ಯಮವು ಇನ್ನು ಕೆಲವು ತಿಂಗಳುಗಳಲ್ಲಿ ಕೆಫೆ ಮಾನದಂಡಗಳಿಗೆ ಬದಲಾಗಲಿದೆ. ಕೆಫೆ ಮಾನದಂಡಗಳು ಬಿಎಸ್ 6 ಮಾನದಂಡಗಳಿಗಿಂತ ಹೆಚ್ಚು ಕಠಿಣವಾಗಲಿರಲಿವೆ. ಅಲೈಯನ್ಸ್ ಫಾರ್ ಎನರ್ಜಿ ಎಫಿಶಿಯಂಟ್ ಎಕಾನಮಿ (ಎಇಇಇ) ಗ್ರಾಹಕ ಮಾಹಿತಿ ಸಾಧನವೊಂದನ್ನು ವಿನ್ಯಾಸಗೊಳಿಸಿದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಈ ಸಾಧನವು ವಾಹನಗಳಿಗೆ ಅವುಗಳ ಪರಿಸರ ಕಾರ್ಯಕ್ಷಮತೆಯ ಆಧಾರದ ಮೇಲೆ ರೇಟಿಂಗ್ ನೀಡುತ್ತದೆ. ಅಂದ ಹಾಗೆ ಎಇಇಇ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಸಂಪನ್ಮೂಲ ಶಕ್ತಿಯ ದಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಎಇಇಇ ಈ ರೇಟಿಂಗ್ ನೀಡಲು ಗ್ರೀನ್ ವೆಹಿಕಲ್ ರೇಟಿಂಗ್ ಅಂದರೆ ಜಿವಿಆರ್ ಉಪಕರಣವನ್ನು ಬಳಸುತ್ತದೆ. ಈ ಉಪಕರಣವು ಗ್ರೀನ್ ಹೌಸ್ ಗ್ಯಾಸ್ ಹಾಗೂ ಮಾಲಿನ್ಯಕಾರಕಗಳನ್ನು ಹೊರಸೂಸುವ ವಾಹನಗಳನ್ನು ಗುರುತಿಸುವ ಭಾರತದ ಮೊದಲ ಹಾಗೂ ಸದ್ಯದ ಏಕೈಕ ಸಾಧನವಾಗಿದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ವಾಹನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವುದು ಈ ಸಾಧನದ ಉದ್ದೇಶ. ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗುವ ನಿರ್ದಿಷ್ಟ ಪ್ರಮಾಣದ ಅಪಾಯವನ್ನು ಲೆಕ್ಕಹಾಕಲು ವಾಹನ ಮಾಲೀಕರಿಗೆ ಈ ಸಾಧನವು ನೆರವಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಸದ್ಯಕ್ಕೆ ಈ ಜಿವಿಆರ್ ಉಪಕರಣದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾಹಿತಿಯನ್ನು ಮಾತ್ರ ದಾಖಲಿಸಬಹುದು. ಈ ಸಾಧನವು ಭಾರತದ ಹೆಚ್ಚು ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಕರೆದೊಯ್ಯಲು ನೆರವಾಗಲಿದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಹೆಚ್ಚು ಪರ್ಫಾಮೆನ್ಸ್ ಹೊಂದಿರುವ ವಾಹನಗಳನ್ನು ಗುರುತಿಸಲು ಹಾಗೂ ವೆಬ್ ಆಧಾರಿತ ರೇಟಿಂಗ್ ಸಿಸ್ಟಂ ಆಧರಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲುಖರೀದಿದಾರರಿಗೆ ಜಿವಿಆರ್ ಸಹಾಯ ಮಾಡುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಫಾರಂ 22ರಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಆಟೋ ಮೊಬೈಲ್ ಡೀಲರ್'ಗಳು ಹಾಗೂ ಆನ್‌ಲೈನ್ ಆಟೋ ಮಾರುಕಟ್ಟೆಗಳು ವರದಿ ಮಾಡಿದ ಮಾಲಿನ್ಯ ಹೊರಸೂಸುವಿಕೆ ದತ್ತಾಂಶ ಹಾಗೂ ಇಂಧನ ದಕ್ಷತೆಯ ದತ್ತಾಂಶಗಳಿಗೆ ಜಿವಿಆರ್ ಸಂಯೋಜಿತ ವಿಧಾನವನ್ನು ತೆಗೆದುಕೊಳ್ಳುತ್ತದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಎಇಇಇ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಈ ಸಾಧನದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರೀನ್ ವೆಹಿಕಲ್ ರೇಟಿಂಗ್ (ಜಿವಿಆರ್) ಫಾರಂ 22 ರಲ್ಲಿ ಸ್ವಯಂ ವರದಿ ಮಾಡಿದ ಹೊರಸೂಸುವಿಕೆ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ವಾಹನಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗದೇ ರಸ್ತೆಯ ಮೇಲೆ ಚಲಿಸುವ ವಾಹನಗಳ ನಿಜವಾದ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ಈ ಸಾಧನಕ್ಕೆ ಸುಲಭವಾಗುತ್ತದೆ ಎಂದು ಅವರು ಹೇಳಿದರು. ಜಿವಿಆರ್ ವೆಬ್‌ಸೈಟ್ (www.aeee.in) ವಾಹನ ಖರೀದಿದಾರರಿಗೆ ವಿಭಿನ್ನ ಮಾದರಿಗಳನ್ನು ಹೋಲಿಕೆ ಮಾಡಿ ನೋಡಲು ನೆರವಾಗುತ್ತದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೇಟಿಂಗ್ ನೀಡುತ್ತದೆ ಈ ಸಾಧನ

ಮಾಲಿನ್ಯ ಹೊರಸೂಸುವಿಕೆ ಪ್ರಮಾಣ, ಹಾನಿಯ ವೆಚ್ಚ, ಎಂಜಿನ್ ಬದಲಿಸುವಿಕೆ, ವಿದ್ಯುತ್ ಉತ್ಪಾದನೆ, ಮೈಲೇಜ್ ಹಾಗೂ ಇತರ ಸಂಗತಿಗಳನ್ನು ಅಂದಾಜು ಮಾಡಲು ಜಿವಿಆರ್ ನೆರವಾಗುತ್ತದೆ. ಈ ವೆಚ್ಚಗಳನ್ನು ಪ್ರತಿ ಕಿ.ಮೀಗೆ ರೂಪಾಯಿಗಳ ಲೆಕ್ಕದಲ್ಲಿ ಸೂಚಿಸಲಾಗುತ್ತದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
GVR device gives rating for two wheelers and three wheelers. Read in Kannada.
Story first published: Tuesday, April 20, 2021, 13:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X