ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಭಾರತದ ಆಟೋ ಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸುತ್ತಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ತಯಾರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಭಾರತೀಯ ಗ್ರಾಹಕರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಖ್ಯಾತ ಸೈಕಲ್ ತಯಾರಕ ಕಂಪನಿಯಾದ ಹೀರೋ ತನ್ನ ಎಲೆಕ್ಟ್ರಿಕ್ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ ಪೋರ್ಟ್‌ಫೋಲಿಯೊದಲ್ಲಿ ಹಲವು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈಗ ಕಂಪನಿಯು ತನ್ನ ಎರಡು ಹೊಸ ಎಲೆಕ್ಟ್ರಿಕ್ ಸೈಕಲ್‌ಗಳಾದ ಹೀರೋ ಎಫ್2ಐ ಹಾಗೂ ಹೀರೋ ಎಫ್3ಐ ಎಲೆಕ್ಟ್ರಿಕ್ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಎರಡೂ ಸೈಕಲ್‌ಗಳನ್ನು ಮೌಂಟೇನ್ ಬೈಕ್‌ಗಳಾಗಿ ಬಿಡುಗಡೆ ಮಾಡಲಾಗಿದೆ. ಹೀರೋ ಎಫ್2ಐ ಬೆಲೆ ರೂ. 39,999 ಗಳಾಗಿದ್ದರೆ, ಹೀರೋ ಎಫ್3ಐ ಬೆಲೆ ರೂ. 40,999 ಗಳಾಗಿದೆ. ಈ ಸೈಕಲ್ ಗಳನ್ನು ನಗರದ ಟ್ರ್ಯಾಕ್‌ಗಳು ಹಾಗೂ ಆಫ್ ರೋಡ್ ಟ್ರ್ಯಾಕ್‌ಗಳಲ್ಲಿ ಆರಾಮದಾಯಕ ಸವಾರಿ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಗಳು ಸಾಹಸ ಬಯಸುವ ಯುವಕರಿಗೆ ಉತ್ತಮ ಆಯ್ಕೆಯಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಮೌಂಟೇನ್ ಬೈಕಿಂಗ್ ವಿಭಾಗದಲ್ಲಿ ಹೀರೋ ಲೆಕ್ಟ್ರೋದ ಇ-ಎಂಟಿಬಿ ದೇಶದ ಮೊದಲ ಕನೆಕ್ಟೆಡ್ ಇ-ಸೈಕಲ್ ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್‌ಗಳು ಬ್ಲೂಟೂತ್ ಹಾಗೂ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಕನೆಕ್ಟಿವಿಟಿಯೊಂದಿಗೆ ಸಜ್ಜುಗೊಂಡಿವೆ. ಈ ಫೀಚರ್ ಗಳು ಸವಾರರು ತಮ್ಮ ಸವಾರಿಯಂತಹ ಒಳನೋಟಗಳನ್ನು ಕಾಲಾನಂತರದಲ್ಲಿ ಟ್ರ್ಯಾಕ್ ಮಾಡಲು ಅವಕಾಶ ನೀಡುತ್ತವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಇದರ ಜೊತೆಗೆ ಆರ್‌ಎಫ್‌ಐ‌ಡಿ ಬೈಕ್ ಲಾಕ್ ಈ ಎಲೆಕ್ಟ್ರಿಕ್ ಸೈಕಲ್ ಗಳಿಗೆ ಭದ್ರತೆಯನ್ನು ಒದಗಿಸುತ್ತದೆ. ಹೀರೋ ಎಫ್2ಐ ಹಾಗೂ ಹೀರೋ ಎಫ್3ಐ ಎರಡೂ ಸೈಕಲ್ ಗಳು ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ 35 ಕಿ.ಮೀಗಳವರೆಗೆ ಚಲಿಸುತ್ತವೆ. ಈ ಎಲೆಕ್ಟ್ರಿಕ್ ಸೈಕಲ್'ಗಳು 7 ಸ್ಪೀಡ್ ಗೇರ್‌ಗಳು, 100 ಎಂಎಂ ಸಸ್ಪೆಂಷನ್, 27.5 ಇಂಚು ಹಾಗೂ 29 ಇಂಚಿನ ಡಬಲ್ ಅಲಾಯ್ ರಿಮ್‌ಗಳು ಹಾಗೂ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಇದು ಎಲ್ಲಾ ರೀತಿಯ ಸವಾರರನ್ನು ಪೂರೈಸುತ್ತದೆ. ಈ ಎಲೆಕ್ಟ್ರಿಕ್ ಸೈಕಲ್‌ಗಳ ಬಿಡುಗಡೆಯ ಬಗ್ಗೆ ಪ್ರತಿಕ್ರಿಯೆ ಹೀರೋ ಲೆಕ್ಟ್ರೋದ ಸಿಇಒ ಆದಿತ್ಯ ಮುಂಜಾಲ್, ಹೀರೋ ಎಫ್2ಐ ಹಾಗೂ ಎಫ್3ಐ ಭಾರತದ ಮೊದಲ ಸಂಪರ್ಕಿತ ಎಲೆಕ್ಟ್ರಿಕ್ ಸೈಕಲ್‌ಗಳಾಗಿವೆ. ಎಂಟಿಬಿ ವಿಭಾಗದಲ್ಲಿ ಹೀರೋ ಲೆಕ್ಟ್ರೋ ಮೂಲಕ ನಾವು ಹೊಸ ಹೊಸತನವನ್ನು ಮುನ್ನಡೆಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಎಲೆಕ್ಟ್ರಿಕ್ ಸೈಕಲ್ ಗಳಲ್ಲಿ ಬಳಸಲಾದ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಎರಡೂ ಮೌಂಟೆನ್ ಇ-ಸೈಕಲ್ ಗಳಲ್ಲಿ ಹೆಚ್ಚಿನ ಸಾಮರ್ಥ್ಯದ 6.4 ಎಹೆಚ್ ಐಪಿ 67 ರೇಟೆಡ್ ವಾಟರ್ ಹಾಗೂ ಡಸ್ಟ್ ಪ್ರೂಫ್ ಬ್ಯಾಟರಿಗಳನ್ನು ಅಳವಡಿಸಿದೆ. 250ವ್ಯಾ ಬಿ‌ಎಲ್‌ಡಿ‌ಸಿ ಮೋಟರ್‌ ಹೊಂದಿರುವ ಈ ಬ್ಯಾಟರಿಯು ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಎಲೆಕ್ಟ್ರಿಕ್ ಸೈಕಲ್ ಗಳಲ್ಲಿ ನಾಲ್ಕು ವಿಧದ ರೈಡಿಂಗ್ ಮೋಡ್ ಗಳನ್ನು ನೀಡಲಾಗುತ್ತದೆ. ಈ ಮೋಡ್ ಗಳು 27 ಕಿ.ಮೀ ಥ್ರೊಟಲ್ ವ್ಯಾಪ್ತಿ ಹಾಗೂ 35 ಕಿ.ಮೀ ಪೆಡೆಲೆಕ್ ವ್ಯಾಪ್ತಿ ನೀಡಲು ನೆರವಾಗುತ್ತವೆ. ಜೊತೆಗೆ ಕ್ರೂಸ್ ಕಂಟ್ರೋಲ್ ಅನ್ನು ಒದಗಿಸುತ್ತವೆ. ಈ ಎರಡೂ ಎಲೆಕ್ಟ್ರಿಕ್ ಸೈಕಲ್‌ಗಳು ಮ್ಯಾನ್ಯುಯಲ್ ಮೋಡ್ ಅನ್ನು ಸಹ ಹೊಂದಿವೆ. ಈ ಸೈಕಲ್ ಗಳಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಎಲ್‌ಇಡಿ ಡಿಸ್ಪ್ಲೇ ಬಳಸಿ ಈ ಮೋಡ್‌ಗಳನ್ನು ಒಂದು ಮೋಡ್‌ನಿಂದ ಮತ್ತೊಂದು ಮೋಡ್'ಗೆ ಬದಲಾಯಿಸಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಹೊಸ ಹೀರೋ ಎಫ್2ಐ ಹಾಗೂ ಹೀರೋ ಎಫ್3ಐ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಹೀರೋ ಲೆಕ್ಟ್ರೊದ ಡೀಲರ್‌ಗಳ ಬಳಿ ಮಾರಾಟ ಮಾಡಲಾಗುತ್ತದೆ. ಹೆಚ್ಚುವರಿಯಾಗಿ ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿರುವ ಕಂಪನಿಯ ಎಕ್ಸ್ ಕ್ಲೂಸಿವ್ ಎಕ್ಸ್ ಪಿರಿಯನ್ಸ್ ಸೆಂಟರ್ ಹಾಗೂ ಕಂಪನಿಯ ಇ-ಕಾಮರ್ಸ್ ಪಾಲುದಾರರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಇನ್ನು ಭಾರತೀಯ ಮೂಲದ ಹೀರೋ ಮೋಟಾರ್ಸ್ ಹಾಗೂ ಜಪಾನ್ ಮೂಲದ Yamaha Motor ಕಂಪನಿಗಳು ಹೊಸ ಸಹಭಾಗಿತ್ವ ಮಾಡಿಕೊಂಡಿವೆ. ಹೀರೋ ಮೋಟಾರ್ಸ್ ವಾಹನಗಳ ಬಿಡಿ ಭಾಗಗಳ ತಯಾರಕ ಕಂಪನಿಯಾಗಿದೆ. ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಭಿವೃದ್ಧಿಪಡಿಸಲು ಕಂಪನಿಯು ಯಮಹಾ ಮೋಟಾರ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಕಂಪನಿಗಳು ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್'ಗಳಿಗಾಗಿ ಮೋಟರ್'ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದಕ್ಕಾಗಿ ಎರಡು ಕಂಪನಿಗಳು ಮೈತ್ರಿ ಮಾಡಿಕೊಂಡಿವೆ. ಇದನ್ನು ಅನುಸರಿಸಿ ಎರಡು ಕಂಪನಿಗಳು ಶೀಘ್ರದಲ್ಲೇ ಭಾರತದಲ್ಲಿ ಜಂಟಿ ಉದ್ಯಮ ಘಟಕವನ್ನು ಆರಂಭಿಸಲು ಸಜ್ಜಾಗಿವೆ. ಕಂಪನಿಗಳು ಮುಂದಿನ ದಿನಗಳಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಹಾಗೂ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಉತ್ಪಾದಿಸುವ ಕೆಲಸವನ್ನು ಆರಂಭಿಸುವ ನಿರೀಕ್ಷೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೀರೋ ಮೋಟಾರ್ಸ್ ಕಂಪನಿ, ಇದು ಎಲೆಕ್ಟ್ರಿಕ್ ಸೈಕಲ್ ವಿಭಾಗದಲ್ಲಿ ಒಟ್ಟಾಗಿ ಕೆಲಸ ಮಾಡಲು 2019 ರಲ್ಲಿ ರೂಪುಗೊಂಡ ಹೀರೋ - ಯಮಹಾ ಸಹಭಾಗಿತ್ವದ ಮುಂದಿನ ಹಂತವಾಗಿದೆ ಎಂದು ಹೇಳಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಈ ಹಿಂದೆ ಕಡಿಮೆ ಸಂಖ್ಯೆಯಲ್ಲಿದ್ದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಈಗ ಹೆಚ್ಚಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಾಹನ ತಯಾರಕ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ದೇಶದಲ್ಲಿ ಬಿಡುಗಡೆಗೊಳಿಸುತ್ತಿವೆ. ಈಗ ಹೀರೋ ಮೋಟಾರ್ಸ್ ಹಾಗೂ ಯಮಹಾ ಮೋಟಾರ್ ಕಂಪನಿಗಳು ಇ ಸೈಕಲ್‌ಗಳಿಗಾಗಿ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಉತ್ಪಾದಿಸಲು ಕೈಜೋಡಿಸಿವೆ. ಕೇಂದ್ರ ಸರ್ಕಾರವು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತಿರುವುದರಿಂದ ಹೀರೋ ಮೋಟಾರ್ಸ್ ಈ ಕ್ರಮಕ್ಕೆ ಮುಂದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು ಮತ್ತೆರಡು ಹೀರೋ ಎಲೆಕ್ಟ್ರಿಕ್ ಸೈಕಲ್‌ಗಳು

ಈ ಉತ್ಪಾದನಾ ಘಟಕವು ಪಂಜಾಬ್ ರಾಜ್ಯದಲ್ಲಿ ಸ್ಥಾಪನೆಯಾಗುವ ನಿರೀಕ್ಷೆಗಳಿವೆ. ವರದಿಗಳ ಪ್ರಕಾರ ಈ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯು 2022ರ ನವೆಂಬರ್ ವೇಳೆಗೆ ಆರಂಭವಾಗಲಿದೆ. ಈ ಉತ್ಪಾದನಾ ಘಟಕವು ವಾರ್ಷಿಕ ಒಂದು ಮಿಲಿಯನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಇಲ್ಲಿ ತಯಾರಾಗುವ ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುವುದರ ಜೊತೆಗೆ ವಿಶ್ವದ ಇತರ ದೇಶಗಳಿಗೂ ರಫ್ತಾಗಲಿವೆ ಎಂಬುದು ಗಮನಾರ್ಹ.

Most Read Articles

Kannada
English summary
Hero f2i and hero f3i electric bicycles launched in domestic market details
Story first published: Tuesday, December 28, 2021, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X