ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ್ ಬೈಕ್‍ಗಳ ಬೆಲೆ ಪರಿಷ್ಕರಣೆಯನ್ನು ಘೋಷಿಸಿದೆ. ಈ ಇತ್ತೀಚಿನ ಹೆಚ್ಚಳವು ಸಂಪೂರ್ಣ ಪೋರ್ಟ್ಫೋಲಿಯೊ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಪ್ಲೆಂಡರ್ ಬೈಕ್‍ಗಳ ಬೆಲೆ ಏರಿಕೆಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಹೀರೋ ಮೋಟೊಕಾರ್ಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಾಹನದ ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ.3,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಬೆಲೆ ಏರಿಕೆಯ ಬಳಿಕ, ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಡ್ರಮ್/ಅಲಾಯ್ ರೂಪಾಂತರದ ಬೆಲೆಯು ರೂ.69,650 ಗಳಾದರೆ ಸ್ಪ್ಲೆಂಡರ್ ಐಸ್ಮಾರ್ಟ್ ಡಿಸ್ಕ್/ಅಲಾಯ್ ವ್ಹೀಲ್ ರೂಪಾಂತರದ ಬೆಲೆಯು ರೂ.72,350 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಇನ್ನು ಉಳಿದಂತೆ ಸ್ಪ್ಲೆಂಡರ್ ಪ್ಲಸ್ ಕಿಕ್/ಡ್ರಮ್/ಅಲಾಯ್ ರೂಪಾಂತರದ ಬೆಲೆಯು ರೂ.64,850, ಸ್ಪ್ಲೆಂಡರ್ ಪ್ಲಸ್ ಸೆಲ್ಫ್/ಡ್ರಮ್/ಅಲಾಯ್ ರೂಪಾಂತರದ ಬೆಲೆಯು ರೂ.67,160 ಮತ್ತು ಸ್ಪ್ಲೆಂಡರ್ ಪ್ಲಸ್ ಸೆಲ್ಫ್/ಡ್ರಮ್/ಅಲಾಯ್/ಐ3ಎಸ್ ರೂಪಾಂತರದ ಬೆಲೆಯು ರೂ.68,360ಗಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಇನ್ನು ಇತ್ತೀಚೆಗೆ ಬಿಡುಗಡೆಗೊಂಡ ಸ್ಪ್ಲೆಂಡರ್ ಪ್ಲಸ್ 100 ಮಿಲಿಯನ್ ಎಡಿಷನ್ ಬೆಲೆಯು ರೂ.70,710, ಸ್ಪ್ಲೆಂಡರ್ ಪ್ಲಸ್ ಬ್ಲ್ಯಾಕ್ ಅಂಡ್ ಆಕ್ಸೆಂಟ್ ಸೆಲ್ಫ್/ಡ್ರಮ್/ಅಲಾಯ್ ರೂಪಾಂತರದ ಬೆಲೆಯು ರೂ.70,710 ಗಳಾದರೆ ಸೂಪರ್ ಸ್ಪ್ಲೆಂಡರ್ ಡ್ರಮ್/ಅಲಾಯ್ ರೂಪಾಂತರದ ಬೆಲೆಯು ರೂ.73,900 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಹೀರೋ ಸ್ಪ್ಲೆಂಡರ್ ದಶಕಗಳಿಂದ ಸಾಮಾನ್ಯ ವರ್ಗದ ಜನರ ಮೆಚ್ಚಿನ ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕ್ ಸರಳವಾದ ವಿನ್ಯಾಸ ಮತ್ತು ಉತ್ತಮ ಮೈಲೇಜ್‍‍ನಿಂದ ಈ ಬೈಕ್ ಗ್ರಾಹಕರ ಗಮನಸೆಳೆದಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಬಿಎಸ್-6 100 ಸಿಸಿ ಏರ್-ಕೂಲ್ಡ್, ಫೋರ್-ಸ್ಟ್ರೋಕ್, ಕಾರ್ಬ್ಯುರೇಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಈ ಎಂಜಿನ್ 8,000 ಆರ್‌ಪಿಎಂನಲ್ಲಿ 7.91 ಬಿ‍‍ಹೆಚ್‍‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 8.05 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‍‍ನೊಂದಿಗೆ 4 ಸ್ಫೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ. ಈ ಬೈಕಿನ 11 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಹೊಸ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ನೀಡಿದೆ.ಇನ್ನು ಈ ಬೈಕಿನ ಎರಡು ಟಯರುಗಳಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಿದೆ. ಮಾಲಿನ್ಯ ಉಂಟುಮಾಡುವುದನ್ನು ಕಡಿಮೆ ಮಾಡಲು ಹೆಚ್ಚುವರಿಯಾಗಿ ಕಟಲ್ಯಾಟಿಕ್ ಕರ್ನ್‍ವಾಟರ್ ಸಿಸ್ಟಂ ಅನ್ನು ಕೂಡ ಅಳವಡಿಸಿದ್ದಾರೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕ್ ರೆಡ್ ಮತ್ತು ಬ್ಲ್ಯಾಕ್ ಸೇರಿದಂತೆ ವಿವಿಧ ರೀತಿಯ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಬಿಎಸ್-6 ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಭಾರತದಲ್ಲಿ ಬಜಾಜ್ ಪ್ಲಾಟಿನಾ ಮತ್ತು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‍‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕ್ ಹೊಸ ಬಣ್ಣಗಳ ಆಯ್ಕೆಯೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಇನ್ನು ಇತ್ತೀಚೀಗೆ ಬಿಡುಗಡೆಗೊಂಡ ಹೊಸ ಸ್ಪ್ಲೆಂಡರ್ ಪ್ಲಸ್ ಸ್ಪೆಷಲ್ ಎಡಿಷನ್ ಆಕರ್ಷಕ ಗ್ರಾಫಿಕ್‌ನೊಂದಿಗೆ ಹೊಸ ಮೈಲಿಗಲ್ಲು ಸಾಧನೆಯ 100 ಮಿಲಿಯನ್ ಬ್ಯಾಡ್ಜ್ ಪಡೆದುಕೊಂಡಿದೆ. ಇ ಹೊಸ ಪೇಟಿಂಗ್ ಮತ್ತು ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಬ್ಯಾಡ್ಜ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯಯಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯೆಂತೆ ಬೆಲೆ ಪಡೆದುಕೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸಿದ ದಾಖಲೆಯನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಹೀರೋ ಮೋಟೊಕಾರ್ಪ್ ಕಂಪನಿಯ ಪ್ರಕಾರ ಹಬ್ಬದ ಸಂದರ್ಭದಲ್ಲಿ ವಾಹನಗಳ ಮಾರಾಟ ಉತ್ತಮವಾಗಿರಲಿದೆ. ಕಂಪನಿಯ ಕಳೆದ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ, ಆಗಸ್ಟ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯ ಮಾರಾಟದಲ್ಲಿ 22% ನಷ್ಟು ಇಳಿಕೆ ಕಂಡುಬಂದಿದೆ. ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಮಾರಾಟದಲ್ಲಿ ಹಿನ್ನಡೆಯನ್ನು ಅನುಭವಿಸಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಹಲವು ವಾಹನ ತಯಾರಕ ಕಂಪನಿಗಳು ಇತ್ತೀಚೆಗೆ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ Hero Splendor ಬೈಕ್‍ಗಳು

ಉತ್ಪಾದನಾ ವೆಚ್ಚ ಹೆಚ್ಚಾಗಿರುವುದೇ ಬೆಲೆ ಏರಿಸಲು ಕಾರಣವೆಂದು ಕಂಪನಿಗಳು ತಿಳಿಸಿವೆ. ವಾಹನ ತಯಾರಕ ಕಂಪನಿಗಳು ತಮ್ಮ ಪ್ಯಾಸೆಂಜರ್ ವಾಹನ ಹಾಗೂ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಇನ್ನು ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ ನಂತರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದರೂ ಈಗ ಬರುವ ಹಬ್ಬಗಳ ಸಂದರ್ಭದಲ್ಲಿ ಬೇಡಿಕೆ ಹಿಂದಿನಂತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ, ಇದರ ಜೊತೆಗೆ ಆಟೋ ಮೊಬೈಲ್ ಉದ್ಯಮಕ್ಕೆ ಅತಿ ಅವಶ್ಯಕವಾದ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಮೂಲ ಸಲಕರಣೆ ತಯಾರಕರಿಗೆ (OEM) ಸವಾಲಾಗಿ ಪರಿಣಮಿಸಿದೆ.

Most Read Articles

Kannada
English summary
Hero motocorp hiked splendor range prices in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X