ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

Hero Motocorp ಮತ್ತೊಮ್ಮೆ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ಕಂಪನಿಯು ತನ್ನ ಎಲ್ಲಾ ಬೈಕ್ ಹಾಗೂ ಸ್ಕೂಟರ್ ಗಳ ಬೆಲೆಯನ್ನು ಸೆಪ್ಟೆಂಬರ್ 20 ರಿಂದ ಹೆಚ್ಚಿಸುವುದಾಗಿ ತಿಳಿಸಿದೆ. ವಾಹನದ ಮಾದರಿಗಳ ಆಧಾರದ ಮೇಲೆ ಬೆಲೆಯನ್ನು ರೂ. 3,000 ಗಳವರೆಗೆ ಹೆಚ್ಚಿಸಲಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

Hero Motocorp ಕಂಪನಿಯ ಪ್ರಕಾರ ಹಬ್ಬದ ಸಂದರ್ಭದಲ್ಲಿ ವಾಹನಗಳ ಮಾರಾಟ ಉತ್ತಮವಾಗಿರಲಿದೆ. ಕಂಪನಿಯ ಕಳೆದ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ, ಆಗಸ್ಟ್ ತಿಂಗಳಲ್ಲಿ Hero Motocorp ಕಂಪನಿಯ ಮಾರಾಟದಲ್ಲಿ 22% ನಷ್ಟು ಇಳಿಕೆ ಕಂಡುಬಂದಿದೆ. ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ Hero Motocorp ಕಂಪನಿಯು ಮಾರಾಟದಲ್ಲಿ ಹಿನ್ನಡೆಯನ್ನು ಅನುಭವಿಸಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ದೇಶಿಯ ಮಾರುಕಟ್ಟೆಯಲ್ಲಿರುವ ಹಲವು ವಾಹನ ತಯಾರಕ ಕಂಪನಿಗಳು ಇತ್ತೀಚೆಗೆ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವುದೇ ಬೆಲೆ ಏರಿಸಲು ಕಾರಣವೆಂದು ಕಂಪನಿಗಳು ತಿಳಿಸಿವೆ. ವಾಹನ ತಯಾರಕ ಕಂಪನಿಗಳು ತಮ್ಮ ಪ್ಯಾಸೆಂಜರ್ ವಾಹನ ಹಾಗೂ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ ನಂತರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದರೂ ಈಗ ಬರುವ ಹಬ್ಬಗಳ ಸಂದರ್ಭದಲ್ಲಿ ಬೇಡಿಕೆ ಹಿಂದಿನಂತೆಯೇ ಇರುವುದಿಲ್ಲ ಎಂಬುದು ಕೆಲವು ವಾಹನ ತಯಾರಕ ಕಂಪನಿಗಳ ಅಭಿಪ್ರಾಯ. ಇದರ ಜೊತೆಗೆ ಆಟೋ ಮೊಬೈಲ್ ಉದ್ಯಮಕ್ಕೆ ಅತಿ ಅವಶ್ಯಕವಾದ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಮೂಲ ಸಲಕರಣೆ ತಯಾರಕರಿಗೆ (OEM) ಸವಾಲಾಗಿ ಪರಿಣಮಿಸಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು Hero Motocorp ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಕಂಪನಿಯ ಚೇರ್ಮನ್ ಪವನ್ ಮುಂಜಾಲ್ ರವರು ಇತ್ತೀಚೆಗೆ ಕಂಪನಿಯ ಹತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ Hero Motocorp ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದರು.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದರು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ Hero Motocorp ತೈವಾನ್ ಮೂಲದ ಗೊಗೊರೊ ಕಂಪನಿಯ ಜೊತೆಗೆ ಬ್ಯಾಟರಿ ವಿನಿಮಯ ಹಾಗೂ ತಾಂತ್ರಿಕ ವೈಶಿಷ್ಟ್ಯಗಳ ಹಂಚಿಕೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಆದರೆ Hero Motocorp ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಈ ಪಾಲುದಾರಿಕೆಯನ್ನು ಮಾಡಿ ಕೊಂಡಿಲ್ಲ ಎಂಬುದು ಗಮನಾರ್ಹ. ಮಾಹಿತಿಗಳ ಪ್ರಕಾರ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

Hero Motocorp ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 4,53,879 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಮಾರಾಟ ಪ್ರಮಾಣವು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಮಾರಾಟವಾದ 5,84,456 ಯುನಿಟ್ ಗಳಿಗಿಂತ 22% ನಷ್ಟು ಕಡಿಮೆಯಾಗಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

Hero Motocorp ಕಂಪನಿಯು ಕಳೆದ ವರ್ಷದ ಆಗಸ್ಟ್ ತಿಂಗಳಿಗಿಂತ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 1,30,577 ಯುನಿಟ್ ಕಡಿಮೆ ವಾಹನಗಳನ್ನು ಮಾರಾಟ ಮಾಡಿದೆ. Hero Motocorp ನ ಮೋಟಾರ್ ಸೈಕಲ್ ಗಳು ಕಂಪನಿಯ ಒಟ್ಟು ಮಾರಾಟದಲ್ಲಿ 90% ನಷ್ಟು ಪಾಲನ್ನು ಹೊಂದಿವೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

Hero Motocorp ಕಂಪನಿಯು Honda Motorcycle ಕಂಪನಿಯಿಂದ ಬೇರ್ಪಟ್ಟು 10 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ Hero Motocorp ಕಂಪನಿಯು ಇದರ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಮುಂಬರುವ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಇರುವುದರಿಂದ ಜನರು ಹೊಸ ವಾಹನಗಳನ್ನು ಖರೀದಿಸಲು ಮುಂದೆ ಬರುತ್ತಾರೆ ಎಂದು ಕಂಪನಿ ನಂಬಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ ಕಾರಣದಿಂದ ವಿಧಿಸಲಾದ ನಿರ್ಬಂಧಗಳಿಂದಾಗಿ, ಭಾರತದಲ್ಲಿ ವಾಹನ ಮಾರುಕಟ್ಟೆಯು ಅಸ್ತವ್ಯಸ್ತವಾಗಿದೆ. ಇದು ಬಹುತೇಕ ಎಲ್ಲಾ ಕಂಪನಿಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ವಾಹನ ತಯಾರಕ ಕಂಪನಿಗಳು ಹಬ್ಬಗಳ ಸಂದರ್ಭದಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿವೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಕೆಲವು ದಿನಗಳ ಹಿಂದಷ್ಟೇ ವಿಶ್ವದ ಅತಿ ದೊಡ್ಡ ದ್ವಿ ಚಕ್ರ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ Hero MotoCorp ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗಾಗಿ 70 ದ್ವಿಚಕ್ರ ವಾಹನಗಳನ್ನು ಕೊಡುಗೆಯಾಗಿ ನೀಡಿತ್ತು. ಕಂಪನಿಯು ಈ ದ್ವಿಚಕ್ರ ವಾಹನಗಳನ್ನು ಹರಿಯಾಣ ಸರ್ಕಾರಕ್ಕೆ ಹಸ್ತಾಂತರಿಸಿತ್ತು. ಕಂಪನಿಯು ಈ ಯೋಜನೆಗೆ ಕರೋನಾ ವಾರಿಯರ್ಸ್ ಆನ್ ವೀಲ್ಸ್ ಎಂಬ ಹೆಸರನ್ನಿಟ್ಟಿದೆ.

ಮತ್ತೊಮ್ಮೆ ತನ್ನ ವಾಹನಗಳ ಬೆಲೆ ಏರಿಕೆ ಮಾಡಿದ Hero Motocorp

ಕರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರು ನೀಡಿದ ಸೇವೆಗಾಗಿ ಹರಿಯಾಣ ರಾಜ್ಯದಾದ್ಯಂತವಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಈ ವಾಹನಗಳನ್ನು ನೀಡಲಾಗುವುದು ಎಂದು Hero Motocorp ಹೇಳಿದೆ.

Most Read Articles

Kannada
English summary
Hero motocorp increases its vehicles price again details
Story first published: Friday, September 17, 2021, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X