ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೊಟೊಕಾರ್ಪ್ ತನ್ನ ಸರಣಿಯಲ್ಲಿರುವ ಮಾದರಿಗಳ ಬೆಲೆ ಏರಿಕೆಯನ್ನು ಘೋಷಿಸಿದೆ. ಹೀರೋ ದ್ವಿಚಕ್ರ ವಾಹನಗಳ ಹೊಸ ಬೆಲೆಯು ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ದೇಶಿಯ ಮಾರುಕಟ್ಟೆಯಲ್ಲಿ ಹೀರೋ ದ್ವಿಚಕ್ರ ವಾಹನಗಳು ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ. ಹೀರೋ ಮೊಟೊಕಾರ್ಪ್ ತನ್ನ ಬೈಕ್‌ಗಳ ಮತ್ತು ಸ್ಕೂಟರ್‌ಗಳ ಬೆಲೆಯನ್ನು ಈ ವರ್ಷ ಎರಡನೇ ಬಾರಿಗೆ ಹೆಚ್ಚಿಸಿದೆ. ಹೀರೋ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಈ ವರ್ಷದ ಆರಂಭದಲ್ಲಿ ಬೆಲೆಯನು ಏರಿಸಲಾಗಿತ್ತು. ಜನವರಿಯಲ್ಲಿ ಹೀರೋ ಮೊಟೊಕಾರ್ಪ್ ಬೆಲೆ ಸುಮಾರು ರೂ.1,500 ಗಳವರೆಗೆ ಹೆಚ್ಚಿಸಲಾಗಿತ್ತು.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಈ ಬಾರಿ ಹೀರೋ ಮೊಟೊಕಾರ್ಪ್ ರೂ.2,500 ಗಳವರೆಗೆ ಬೆಲೆ ಏರಿಕೆ ಘೋಷಿಸಿದೆ. ಪ್ರತಿ ಮಾದರಿಯಲ್ಲಿನ ಹೆಚ್ಚಳವು ರೂಪಾಂತರ ಮತ್ತು ಮಾರುಕಟ್ಟೆ ಪ್ರದೇಶದೊಂದಿಗೆ ಬದಲಾಗುತ್ತದೆ. ಪ್ರತಿ ಮಾದರಿಯ ನಿಖರವಾದ ಬೆಲೆ ಹೆಚ್ಚಳವು ಮುಂದಿನ ತಿಂಗಳ ಆರಂಭದಲ್ಲಿ ತಿಳಿಯುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಕಂಪನಿಯ ಪ್ರಕಾರ, ಸರಕು ವೆಚ್ಚಗಳ ಹೆಚ್ಚಳವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಇದರಿಂದ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರದಿರಲು ಕಂಪನಿಯು ವೆಚ್ಚ-ಉಳಿತಾಯ ಕಾರ್ಯಕ್ರಮವನ್ನು ಕೈಗೊಳ್ಳಲಿದೆ. ಬೆಲೆ ಏರಿಕೆಯು ಪ್ರಮಾಣವು ಮಾದರಿ ಮತ್ತು ನಿರ್ದಿಷ್ಟ ಮಾರುಕಟ್ಟೆಯ ಆಧಾರದ ಮೇಲೆ ಬದಲಾಗುತ್ತದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಉತ್ಪಾದನೆಗೆ ಹೆಚ್ಚುತ್ತಿರುವ ಇನ್ ಫುಟ್ ವೆಚ್ಚಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ವಾಹನ ಉತ್ಪಾದನಾ ಕಂಪನಿಗಳಿಗೆ ದೊದ್ದ ಸವಾಲುಗಳು ಎದಾರಿಗಿದೆ. ಇದರಿಂದ ವಾಹನಗಳ ಬೆಲೆ ಏರಿಕೆ ಮಾಡುವುದು ಅನಿರ್ವಾಯವಾಗಿದೆ ಎಂದು ವಾಹನ ತಯಾರಕ ಕಂಪನಿಗಳು ಹೇಳುತ್ತಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಹೀರೋ ಮೋಟೊಕಾರ್ಪ್ ಇತ್ತೀಚೆಗೆ 100 ಮಿಲಿಯನ್(10 ಕೋಟಿ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ವಾಹನ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಯುಮಿಟ್ ಗಳನ್ನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಈ 100 ಮಿಲಿಯನ್ ಉತ್ಪಾದನಾ ಮೈಲಿಗಲ್ಲಿನ ಸಂಭ್ರಮಕ್ಕಾಗಿ 100 ಮಿಲಿಯನ್ ಎಡಿಷನ್ ಬಣ್ಣದಲ್ಲಿ ಇತರ 5 ಮಾದರಿಗಳನ್ನು ಕೂಡ ಬಿಡುಗಡೆಗೊಳಿಸಿದೆ. ಇದರಲ್ಲಿ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.08 ಲಕ್ಷಗಳಾಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಬಿಡುಗಡೆಗೊಂಡ ಸ್ಪೆಷಲ್ ಎಢಿಷನ್ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಮಾದರಿಯು ಕೆಂಪು ಮತ್ತು ಬಿಳಿ ಬಣ್ಣದ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಇನ್ನು ಕೇರಳದಲ್ಲಿ ಈ ಹೀರೋ ಎಕ್ಸ್‌ಪಲ್ಸ್ 200 ಮಾದರಿಯು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಹೀರೋ ಎಕ್ಸ್‌ಪಲ್ಸ್ 200 ಮಾದರಿಯು ಕೇರಳದಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ದಾಖಲಿಸಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಇದರೊಂದಿಗೆ ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ತನ್ನ ಬಿಎಸ್-6 ಎಕ್ಸ್‌ಪಲ್ಸ್ 200 ಬೈಕಿನ ಮೇಲೆ ಒಟ್ಟು ರೂ,16 ಸಾವಿರಗಳವರೆಗೂ ಆಫರ್ ಅನ್ನು ನೀಡಿದ್ದಾರೆ. ಹೀರೋ ಎಕ್ಸ್‌ಪಲ್ಸ್ 200ಟಿ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಾಗಿಲ್ಲ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಹೀರೋ ದ್ವಿಚಕ್ರ ವಾಹನಗಳು

ಹೀರೋ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಮುಂದಿನ ತಿಂಗಳಿಂದ ದುಬಾರಿಯಾಗಲಿವೆ. ಆದರೆ ಬೆಲೆ ಏರಿಕೆಯು ಮಾರಾಟದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಇದರೊಂದಿಗೆ ಇತರ ಕೆಲವು ವಾಹನ ತಯಾರಕ ಕಂಪನಿಗಳು ಕೂಡ ತಮ್ಮ ಸರಣಿಯಲ್ಲಿರುವ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದೆ.

Most Read Articles

Kannada
English summary
Hero Motorcycles & Scooters Second Price Hike Announced. Read In Kananda.
Story first published: Wednesday, March 24, 2021, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X