ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಭಾರತೀಯ ಮೂಲದ Hero Motors ಹಾಗೂ ಜಪಾನ್ ಮೂಲದ Yamaha Motor ಕಂಪನಿಗಳು ಹೊಸ ಸಹಭಾಗಿತ್ವ ಮಾಡಿಕೊಂಡಿವೆ. ಹೀರೋ ಮೋಟಾರ್ಸ್ ವಾಹನಗಳ ಬಿಡಿ ಭಾಗಗಳ ತಯಾರಕ ಕಂಪನಿಯಾಗಿದೆ. ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಅಭಿವೃದ್ಧಿಪಡಿಸಲು ಕಂಪನಿಯು ಯಮಹಾ ಮೋಟಾರ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಕಂಪನಿಗಳು ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್'ಗಳಿಗಾಗಿ ಮೋಟರ್'ಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಇದಕ್ಕಾಗಿ ಎರಡು ಕಂಪನಿಗಳು ಮೈತ್ರಿ ಮಾಡಿಕೊಂಡಿವೆ. ಇದನ್ನು ಅನುಸರಿಸಿ ಎರಡು ಕಂಪನಿಗಳು ಶೀಘ್ರದಲ್ಲೇ ಭಾರತದಲ್ಲಿ ಜಂಟಿ ಉದ್ಯಮ ಘಟಕವನ್ನು ಆರಂಭಿಸಲು ಸಜ್ಜಾಗಿವೆ. ಕಂಪನಿಗಳು ಮುಂದಿನ ದಿನಗಳಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಹಾಗೂ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಉತ್ಪಾದಿಸುವ ಕೆಲಸವನ್ನು ಆರಂಭಿಸುವ ನಿರೀಕ್ಷೆಗಳಿವೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೀರೋ ಮೋಟಾರ್ಸ್ ಕಂಪನಿ, ಇದು ಎಲೆಕ್ಟ್ರಿಕ್ ಸೈಕಲ್ ವಿಭಾಗದಲ್ಲಿ ಒಟ್ಟಾಗಿ ಕೆಲಸ ಮಾಡಲು 2019 ರಲ್ಲಿ ರೂಪುಗೊಂಡ ಹೀರೋ - ಯಮಹಾ ಸಹಭಾಗಿತ್ವದ ಮುಂದಿನ ಹಂತವಾಗಿದೆ ಎಂದು ಹೇಳಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಈ ಹಿಂದೆ ಕಡಿಮೆ ಸಂಖ್ಯೆಯಲ್ಲಿದ್ದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಈಗ ಹೆಚ್ಚಾಗುತ್ತಿದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಾಹನ ತಯಾರಕ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ದೇಶದಲ್ಲಿ ಬಿಡುಗಡೆಗೊಳಿಸುತ್ತಿವೆ. ಈಗ ಹೀರೋ ಮೋಟಾರ್ಸ್ ಹಾಗೂ ಯಮಹಾ ಮೋಟಾರ್ ಕಂಪನಿಗಳು ಇ ಸೈಕಲ್‌ಗಳಿಗಾಗಿ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಉತ್ಪಾದಿಸಲು ಕೈಜೋಡಿಸಿವೆ. ಕೇಂದ್ರ ಸರ್ಕಾರವು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತಿರುವುದರಿಂದ ಹೀರೋ ಮೋಟಾರ್ಸ್ ಈ ಕ್ರಮಕ್ಕೆ ಮುಂದಾಗಿದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಈ ಉತ್ಪಾದನಾ ಘಟಕವು ಪಂಜಾಬ್ ರಾಜ್ಯದಲ್ಲಿ ಸ್ಥಾಪನೆಯಾಗುವ ನಿರೀಕ್ಷೆಗಳಿವೆ. ವರದಿಗಳ ಪ್ರಕಾರ ಈ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯು 2022ರ ನವೆಂಬರ್ ವೇಳೆಗೆ ಆರಂಭವಾಗಲಿದೆ. ಈ ಉತ್ಪಾದನಾ ಘಟಕವು ವಾರ್ಷಿಕ ಒಂದು ಮಿಲಿಯನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಇಲ್ಲಿ ತಯಾರಾಗುವ ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುವುದರ ಜೊತೆಗೆ ವಿಶ್ವದ ಇತರ ದೇಶಗಳಿಗೂ ರಫ್ತಾಗಲಿವೆ ಎಂಬುದು ಗಮನಾರ್ಹ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಹೀರೋ - ಯಮಹಾ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವ ಎಲೆಕ್ಟ್ರಿಕ್ ಮೋಟಾರ್‌ಗಳು ಹೀರೋ ಮೋಟಾರ್ಸ್ ಬ್ರಾಂಡ್‌ನ ಅಡಿಯಲ್ಲಿ ಮಾರಾಟವಾಗುವ ವಾಹನಗಳಲ್ಲಿ ಮಾತ್ರವಲ್ಲದೆ ಇತರ ಕಂಪನಿಗಳ ಉತ್ಪನ್ನಗಳಲ್ಲಿಯೂ ಬಳಕೆಯಾಗುವ ನಿರೀಕ್ಷೆಗಳಿವೆ. ಈ ಬಗ್ಗೆ ಮಾತನಾಡಿರುವ ಹೀರೋ ಮೋಟಾರ್ಸ್ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಮುಂಜಾಲ್, ಹೀರೋ - ಯಮಹಾ ಸಹಭಾಗಿತ್ವವು ಉತ್ಪಾದನೆ ಹಾಗೂ ತಾಂತ್ರಿಕ ಪರಿಣತಿಯನ್ನು ಒದಗಿಸುತ್ತದೆ. ವಿಶ್ವ ದರ್ಜೆಯ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಅಂದ ಹಾಗೆ ಹೀರೋ ಸೈಕಲ್ಸ್ ಮೂರು ವರ್ಷಗಳ ಹಿಂದೆ ಎಲೆಕ್ಟ್ರಿಕ್ ಸೈಕಲ್ ಗಳ ಉತ್ಪಾದನೆಯನ್ನು ಆರಂಭಿಸಿತು. ಕಂಪನಿಯು ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ಇ ಸೈಕಲ್‌ಗಳ ಉತ್ಪಾದನೆಗೆ ಹೊಸ ಘಟಕದಲ್ಲಿ ರೂ. 300 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಇದಲ್ಲದೇ, ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಬಲಪಡಿಸಲು ಇಂಗ್ಲೆಂಡಿನಲ್ಲಿ ರಫ್ತು ಹಬ್ ಸ್ಥಾಪಿಸಲು ಹಾಗೂ ಮಾರಾಟಗಾರರಿಗೆ ನೆಲೆಯನ್ನು ನಿರ್ಮಿಸಲು ಕಂಪನಿಯು ಕ್ರಮವಾಗಿ ರೂ. 400 ಕೋಟಿ ಹಾಗೂ ರೂ. 300 ಕೋಟಿ ಹೂಡಿಕೆ ಮಾಡಿದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಆಮದು ಸುಂಕ ಕಡಿಮೆ ಮಾಡಲು ಬೇಡಿಕೆ

ಕೆಲವು ದಿನಗಳ ಹಿಂದೆ ಈ ಬಗ್ಗೆ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದ ಪಂಕಜ್ ಮುಂಜಾಲ್, ಯುರೋಪಿಯನ್ ಒಕ್ಕೂಟದಲ್ಲಿ ಇ ಸೈಕಲ್ ವ್ಯವಹಾರವು ವರ್ಷಕ್ಕೆ 5 ಬಿಲಿಯನ್ ಯೂರೋಗಳಾಗಿದ್ದು, ಇದು ಭಾರತಕ್ಕಿಂತ 50 ಪಟ್ಟು ಹೆಚ್ಚು ಎಂದು ಹೇಳಿದ್ದರು. ಮುಂದಿನ 10 ವರ್ಷಗಳಲ್ಲಿ ಯುರೋಪಿನಲ್ಲಿ ಇ ಸೈಕಲ್ ಮಾರುಕಟ್ಟೆ 5 ಪಟ್ಟು ಬೆಳೆಯುತ್ತದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಸೈಕಲ್ ಉತ್ಪಾದಕ ರಾಷ್ಟ್ರವಾಗಿದೆ. ನಾವು ಆಮದು ಸುಂಕವನ್ನು ಕಡಿಮೆ ಮಾಡಿದರೆ, ಯುರೋಪಿನಲ್ಲಿ ಸೈಕಲ್ ಗಳ ರಫ್ತು ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೇಳಿದ್ದರು. ಹೀರೋ ಸೈಕಲ್ಸ್ ಕಂಪನಿಯು ಕೆಲ ತಿಂಗಳ ಹಿಂದಷ್ಟೇ ತನ್ನ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸೈಕಲ್‌ಗಳ ಮೊದಲ ಬ್ಯಾಚ್ ಅನ್ನು ಜರ್ಮನಿಗೆ ಕಳುಹಿಸಿತ್ತು.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಮೊದಲ ಬ್ಯಾಚ್'ನಲ್ಲಿ 200 ಯುನಿಟ್ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಕಳುಹಿಸಲಾಗಿತ್ತು. ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ಸೈಕಲ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಭವಿಷ್ಯದಲ್ಲಿ ಯುರೋಪ್ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ಗಳನ್ನು ರವಾನಿಸುವ ಮೂಲಕ ಯುರೋಪಿಯನ್ ಯೂನಿಯನ್ (ಇಯು) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಕಂಪನಿ ಉದ್ದೇಶಿಸಿದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

2025ರ ವೇಳೆಗೆ ಯುರೋಪಿಯನ್ ಮಾರುಕಟ್ಟೆಯಿಂದ 300 ಮಿಲಿಯನ್ ಯುರೋ ಅಂದರೆ ಸುಮಾರು ರೂ. 2,600 ಕೋಟಿ ಗಳಿಸಲು ಹೀರೋ ಸೈಕಲ್ಸ್ ಮುಂದಾಗಿದೆ. ಹೀರೋ ತನ್ನ ಅಂತರರಾಷ್ಟ್ರೀಯ ಬ್ರಾಂಡ್ ಹೆಚ್‌ಎನ್‌ಎಫ್ ಅಡಿಯಲ್ಲಿ ಯುರೋಪಿನಲ್ಲಿ ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ. ಹೀರೋ ಸೈಕಲ್ಸ್ ಈ ಸಾಗಣೆಯು ಹೆಚ್‌ಎಂಸಿಯನ್ನು ಯುರೋಪಿನ ಅತಿದೊಡ್ಡ ಸಂಪೂರ್ಣ ಸಂಯೋಜಿತ ಇ-ಸೈಕಲ್ ಕಂಪನಿಯಾಗಿ ಸ್ಥಾಪಿಸುವ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

2030ರ ವೇಳೆಗೆ ಯುರೋಪಿನಲ್ಲಿ ಇ-ಸೈಕಲ್ ಮಾರಾಟವು ಸುಮಾರು 15 ಮಿಲಿಯನ್ ಯೂನಿಟ್‌ಗಳನ್ನು ತಲುಪಲಿದೆ ಎಂದು ಕಂಪನಿ ನಿರೀಕ್ಷಿಸುತ್ತಿದೆ. ಈ ರೀತಿ ರಫ್ತು ಹಾಗೂ ಇ ಸೈಕಲ್‌ಗಳ ಮಾರಾಟವನ್ನು ಹೆಚ್ಚಿಸುವ ಮೂಲಕ ಈ ವಿಭಾಗದಲ್ಲಿ ಮಾರುಕಟ್ಟೆ ಪ್ರಾಬಲ್ಯ ಸಾಧಿಸಬಹುದು. ಉತ್ತಮ ಗುಣಮಟ್ಟದ ಇ-ಸೈಕಲ್‌ಗಳನ್ನು ಉತ್ಪಾದಿಸಲು ಹೀರೋ ಉತ್ಪಾದನಾ ಸಾಮರ್ಥ್ಯವನ್ನು ಹೆಚ್‌ಎನ್‌ಎಫ್‌ನ ಎಂಜಿನಿಯರಿಂಗ್ ಹಾಗೂ ವಿನ್ಯಾಸ ಪರಿಣತಿ ವಿಭಾಗ ಮುಂದಾಗಿದೆ.

ಜೊತೆಗೂಡಿ ಎಲೆಕ್ಟ್ರಿಕ್ ಸೈಕಲ್ ಮೋಟರ್ ಅಭಿವೃದ್ಧಿಪಡಿಸಲಿವೆ ಹೀರೋ - ಯಮಹಾ ಕಂಪನಿಗಳು

ಲುಧಿಯಾನದಲ್ಲಿರುವ 100 ಎಕರೆ ಸೈಕಲ್ ವ್ಯಾಲಿ ಇದಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ. ಕರೋನಾ ಸಾಂಕ್ರಾಮಿಕದಿಂದಾಗಿ ಸರಬರಾಜು ಸರಪಳಿಯು ಅಸ್ತವ್ಯಸ್ತಗೊಂಡಿದೆ ಎಂದು ಹೀರೋ ಸೈಕಲ್ಸ್ ಕಂಪನಿ ಹೇಳಿದೆ.

Most Read Articles

Kannada
English summary
Hero yamaha companies to manufacture electric drive motors details
Story first published: Friday, October 29, 2021, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X