ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಸಿಬಿ350 ಆರ್‌‌ಎಸ್ ಬೈಕ್ ಮೇಲೆ ಆಕರ್ಷಕ ಫೈನಾನ್ಸ್ ಆಫರ್ ಅನ್ನು ಘೋಷಿಸಿದೆ. ಈ ಪ್ರೀಮಿಯಂ ಹೋಂಡಾ ಸಿಬಿ350 ಆರ್‌‌ಎಸ್ ಕೆಫೆ ರೇಸರ್ ಬೈಕನ್ನು ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಶೇ.100 ರಷ್ಟು ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಆಫರ್ ಅರವತ್ತು ತಿಂಗಳವರೆಗೆ ಸಾಲದ ಅವಧಿಯೊಂದಿಗೆ ಲಭ್ಯವಿದೆ. ಈ ಆಫರ್ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ಇದು ಈ ಆಫರ್ ಹಿಂದಿನ ಟ್ರ್ಯಾಕ್‌ಗಳನ್ನು ಹೊಂದಿರುವ ಗ್ರಾಹಕರಿಗೆ ಮತ್ತು ನಗರ ಕಾರ್ಯಾಚರಣಾ ಸ್ಥಳಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಗ್ರಾಹಕರಿಗೆ ತ್ವರಿತ ಹಣಕಾಸು ಸೌಲ್ಯಭ್ಯವನ್ನು ಒದಗಿಸಲು ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಈ ಬ್ಯಾಂಕುಗಳು ಮೂವತ್ತಾರು ತಿಂಗಳ ವರೆಗಿನ ಫ್ಲಾಟ್ ದರದ ಆಧಾರದ ಮೇಲೆ ಶೇಕಡಾ 5.95 ರವರೆಗೆ ಬಡ್ಡಿದರವನ್ನು ನೀಡುತ್ತಿವೆ. ಹೋಂಡಾ ಸಿಬಿ350 ಆರ್‌‌ಎಸ್ ಬೈಕ್ ವಿಶಿಷ್ಟವಾದ ಆಧುನಿಕ ರೋಡ್ಸ್ಟರ್ ಲುಕ್ ಅನ್ನು ಹೊಂದಿರುವ ಮಾದರಿಯಾಗಿದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

2021ರ ಹೋಂಡಾ ಸಿಬಿ350 ಆರ್‌ಎಸ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಬೃಹತ್ ಇಂಧನ ಟ್ಯಾಂಕ್ 7-ವೈ ಆಕಾರದ ಅಲಾಯ್ ವ್ಹೀಲ್ ಗಳ ಮೇಲೆ ಹೋಂಡಾ ಬ್ಯಾಡ್ಜ್ ಅನ್ನು ಹೊಂದಿದೆ, ಇದರೊಂದಿಗೆ ದುಂಡಗಿನ ಆಕಾರದ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ವಿಂಕರ್‌ಗಳು ಮತ್ತು ಅಂಡರ್ ಸೀಟ್ ನಯವಾದ ಎಲ್‌ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಇನ್ನು ಹೊಸ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಹಗುರವಾದ ಬ್ಲ್ಯಾಕ್ ಫೆಂಡರ್ ಅನ್ನು ಸಹ ಪಡೆಯುತ್ತದೆ, ಇದು ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಸ್ಪೋರ್ಟಿ ಲುಕಿಂಗ್ ಗ್ರಾಬ್ ರೈಲ್ ಅನ್ನು ಹೊಂದಿದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಹೋಂಡಾ ಹೈನೆಸ್ ಸಿಬಿ350 ಬೈಕಿನಲ್ಲಿ ಇರುವ ಅದೇ 348.6ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 5,500 ಆರ್‌ಪಿಎಂನಲ್ಲಿ 20.78 ಬಿಹೆಚ್‌ಪಿ ಮತ್ತು 3,000 ಆರ್‌ಪಿಎಂನಲ್ಲಿ 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ, ಇದು ಕ್ಲಚ್ ಲಿವರ್ ಕಾರ್ಯಾಚರಣೆಯ ಹೊರೆ ಕಡಿಮೆಮಾಡಿ ಗೇರ್ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಈ ಬೈಕಿನಲ್ಲಿ ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಅನಲಾಗ್ ಕೌಂಟರ್ ಮತ್ತು ಸಣ್ಣ ಡಿಜಿಟಲ್ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದು ಕನ್ಸೋಲ್ ಎಚ್‌ಎಸ್‌ಟಿಸಿ, ಎಬಿಎಸ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಇಕೋ ಇಂಡಿಕೇಟರ್, ರಿಯಲ್-ಟೈಮ್ ಮೈಲೇಜ್, ಸರಾಸರಿ ಮೈಲೇಜ್ ಮತ್ತು ಗೇರ್ ಪೋಷಿಸನ್ ವಿವರಗಳನ್ನು ನೀಡುತ್ತದೆ. ಇದು ಎಚ್‌ಎಸ್‌ವಿಸಿಎಸ್ ಸಿಸ್ಸಂ ಅನ್ನು ಒಳಗೊಂಡಿದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಹೊಸ ಹೋಂಡಾ ಸಿಬಿ350 ಆರ್‌ಎಸ್ ಬೈಕ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಚಾಸಿಸ್ ಅನ್ನು ಆಧರಿಸಿದೆ. ಇನ್ನು ಇದರ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್--ಹೈಡ್ರಾಲಿಕ್ ಅನ್ನು ಪಡೆಯುತ್ತದೆ.

ಹೋಂಡಾ ಸಿಬಿ350 ಆರ್‌‌ಎಸ್ ಬೈಕಿನ ಮೇಲೆ ಆಕರ್ಷಕ ಆಫರ್

ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದರೆ, ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿಗೆ ಎಬಿಎಸ್(ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
English summary
Honda CB350 RS Available With Finance Up To 100%. Read In Kannada.
Story first published: Monday, July 12, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X