ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಗ್ರಾಜಿಯಾ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಹೋಂಡಾ ಕಂಪನಿಯು ಗ್ರಾಜಿಯಾ ಸ್ಕೂಟರ್ ಮೂರು ರೂಪಾಂತರಗಳ ಬೆಲೆಯನ್ನು ರೂ.964 ಗಳವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.76,823 ಗಳಾದರೆ, ಡಿಎಲ್ಎಕ್ಸ್ ರೂಪಾಂತರದ ಬೆಲೆಯು ರೂ.84,148 ಗಳಾಗಿದೆ. ಇನ್ನು ಈ ಸ್ಕೂಟರ್ ಸ್ಪೋರ್ಟ್ಸ್ ಎಡಿಶನ್ ಬೆಲೆಯು ರೂ.85,148 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಇದರಲ್ಲಿ ಹೊಸ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ನಲ್ಲಿ ಹೊಸ ಬಾಡಿ ಗ್ರಾಫಿಕ್ಸ್‌ನೊಂದಿಗೆ ಎರಡು ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ ಪರ್ಲ್ ನೈಟ್‌ಸ್ಟಾರ್ ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್ ಸೇರಿವೆ. ಈ ಹೋಂಡಾ ಗ್ರಾಜಿಯಾ 125 ಸ್ಪೋರ್ಟ್ಸ್ ಎಡಿಷನ್ ತಾಜಾ ಗ್ರಾಫಿಕ್ಸ್ ನೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಈ ಹೊಸ ಕಾಸ್ಮೆಟಿಕ್ ಅಪ್‌ಡೇಟ್‌ನ ಹೊರತಾಗಿ, ಸ್ಕೂಟರ್ ಇತರ ಎಲ್ಲ ಅಂಶಗಳು ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಈ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಉಳಿದ ಎರಡು ರೂಪಾಂತರಗಳು, ಮ್ಯಾಟ್ ಸೈಬರ್ ಯೆಲ್ಲೊ, ಪರ್ಲ್ ಸ್ಪಾರ್ಟನ್ ರೆಡ್, ಪರ್ಲ್ ಸೈರನ್ ಬ್ಲೂ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಗ್ರಾಜಿಯಾ 125 ಸ್ಕೂಟರ್‌ನಲ್ಲಿ 125 ಸಿಸಿ ಹೆಚ್‌ಇಟಿ(ಹೋಂಡಾ ಇಕೋ ಟೆಕ್ನಾಲಜಿ) ಬಿಎಸ್‌ವಿಐ ಪಿಜಿಎಂ-ಎಫ್‌ಐ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಪೇಟೆಂಟ್ ಪಡೆದ ಎಸಿಜಿ ಸ್ಟಾರ್ಟರ್ ಮೋಟರ್ ಹೊಂದಿದೆ.ಇನು ಪಾಸ್-ಸ್ವಿಚ್, ಹೊಸ ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಸೀಟ್‌ಗಾಗಿ ಮಲ್ಟಿ-ಫಂಕ್ಷನಲ್ ಸ್ವಿಚ್ ಮತ್ತು ಫ್ಯೂಯಲ್ ಲಿಡ್ ನಂತಹ ಫೀಚರ್ಸ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಈ ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‌ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವಿ-ಟೈಪ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಈ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಿದ್ದಾರೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಈ ಸ್ಕೂಟರ್‌ನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 190 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬ್ರ್ಯಾಂಡ್‌ನ ಪ್ರೀಮಿಯಂ 125 ಸಿಸಿ ವಿಭಾಗದಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಗ್ರಾಜಿಯಾ 125 ಸ್ಕೂಟರ್

ಹೋಂಡಾ ಗ್ರಾಜಿಯಾ 125 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಫ್ಯಾಸಿನೊ 125, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಸುಜುಕಿ ಬರ್ಗ್‌ಮ್ಯಾನ್‌ ಸ್ಟ್ರೀಟ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Article Published On: Thursday, July 15, 2021, 10:02 [IST]
English summary
Honda Grazia Prices Increased. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+