ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿರುವ ಮಾದರಿಗಳ ಬೆಲೆಗಳನ್ನು ಪರಿಷ್ಕರಿಸಿದೆ. ಈ ಹೊಸ ಬೆಲೆಗಳು ಈ ತಿಂಗಳ ಆರಂಭದಿಂದಲೇ ಜಾರಿಯಾಗಿದೆ. ಈ ಪಟ್ಟಿಯಲ್ಲಿ ಹೋಂಡಾ ಯುನಿಕಾರ್ನ್ ಮತ್ತು ಎಕ್ಸ್-ಬ್ಲೇಡ್ ಬೈಕ್‌ಗಳು ಕೂಡ ಒಳಗೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಯುನಿಕಾರ್ನ್ ಮತ್ತು ಎಕ್ಸ್-ಬ್ಲೇಡ್ ಬೈಕ್‌ಗಳು ತುಸು ದುಬಾರಿಯಾಗಿದೆ. ಯುನಿಕಾರ್ನ್ ಸ್ಟ್ಯಾಂಡರ್ಡ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿದೆ, ಆದರೆ ಎಕ್ಸ್-ಬ್ಲೇಡ್ ಸಿಂಗಲ್ ಡಿಸ್ಕ್ ಮತ್ತು ಡ್ಯುಯಲ್ ಡಿಸ್ಕ್ ಎಂಬ ಎರಡು ರೂಪಾಂತರಗಳನ್ನು ಹೊಂದಿದೆ. ಇದರ ಆಯಾ ರೂಪಾಂತರಗಳ ಮೇಲೆ ರೂ.1,575 ಗಳವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಬೆಲೆ ಏರಿಕೆಯ ಬಳಿಕ ಹೋಂಡಾ ಯುನಿಕಾರ್ನ್ ಬೈಕಿನ ಬೆಲೆಯು ರೂ,100,605 ಗಳಾಗಿದೆ. ಇನ್ನು ಹೋಂಡಾ ಎಕ್ಸ್-ಬ್ಲೇಡ್ ಬೈಕಿನ ಸಿಂಗಲ್ ಡಿಸ್ಕ್ ರೂಪಾಂತರದ ಬೆಲೆಯು ರೂ,112,513 ಗಳಾದರೆ, ಡ್ಯುಯಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.116,903 ಗಳಾಗಿದೆ. ಈ ಎಲ್ಲಾ ಬೆಲೆಗಳು ಹೈದರಾಬಾದ್ ಎಕ್ಸ್ ಶೋರೂಂ ಪ್ರಕಾರವಾಗಿದೆ,

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಹೋಂಡಾ ಯುನಿಕಾರ್ನ್ ಮತ್ತು ಎಕ್ಸ್-ಬ್ಲೇಡ್ ಬೈಕ್‌ಗಳ ಬೆಲೆಯ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ. ಇದರಲ್ಲಿ ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ,

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಈ ಹೊಸ ಹೋಂಡಾ ಯುನಿಕಾರ್ನ್ ಬೈಕಿನಲ್ಲಿ 162.7 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.5 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಹೋಂಡಾ ಯೂನಿಕಾರ್ನ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ. ಇದರ ಬ್ರೇಕಿಂಗ್ ಸಿಸ್ಟಂಗಾಗಿ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಇನ್ನು ಹೋಂಡಾ ಎಕ್ಸ್-ಬ್ಲೇಡ್ ಬೈಕ್ ಬಗ್ಗೆ ಹೇಳುವುದಾದರೆ, ಇದರಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ನವೀಕರಿಸಿದ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8000 ಆರ್‌ಪಿಎಂನಲ್ಲಿ 13.67 ಬಿಹೆಚ್‌ಪಿ ಪವರ್ ಮತ್ತು 5500 ಆರ್‌ಪಿಎಂನಲ್ಲಿ 14.7 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಈ ಹೋಂಡಾ ಎಕ್ಸ್-ಬ್ಲೇಡ್ ಬೈಕಿನಲ್ಲಿರುವ ಎಂಜಿನ್ ಬ್ರ್ಯಾಂಡ್‌ನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಇದರಿಂದಾಗಿ ಈ ಬೈಕಿಗೆ ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಯುನಿಕಾರ್ನ್, ಎಕ್ಸ್-ಬ್ಲೇಡ್ ಬೈಕ್‌ಗಳು

ಹೋಂಡಾ ಎಕ್ಸ್-ಬ್ಲೇಡ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಎಕ್ಸ್‌ಟ್ರಿಮ್ 160 ಆರ್, ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160 4 ವಿ, ಸುಜುಕಿ ಜಿಕ್ಸರ್ 155 ಮತ್ತು ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Honda Unicorn And X-Blade Price Hiked. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X