Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 5 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- News
ಊಹಾಪೋಹಗಳಿಗೆ ತೆರೆ: ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ
- Movies
'ಕೋಟಿಗೊಬ್ಬ' ಸುದೀಪ್ ನೋಡಿ ಅಭಿಮಾನಿಗಳು ಫುಲ್ ಖುಷ್
- Finance
ಕ್ರಿಪ್ಟೋಕರೆನ್ಸಿ ಬಗ್ಗೆ ಕುತೂಹಲದ ಹೇಳಿಕೆ ಕೊಟ್ಟ ಸಚಿವ ಠಾಕೂರ್
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನಪ್ರಿಯ ಹೋಂಡಾ ಎಸ್‌ಪಿ 125 ಬೈಕಿನ ಮೇಲೆ ಭರ್ಜರಿ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಹೊಸ ಎಸ್‌ಪಿ 125 ಬೈಕಿನ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಹೊಸ ಹೋಂಡಾ ಎಸ್‌ಪಿ 125 ಬೈಕನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಹೋಂಡಾ ಕಂಪನಿಯು ಸಿಹಿ ಸುದ್ದಿ ನೀಡಿದೆ.

ಹೊಸ ಹೋಂಡಾ ಎಸ್‌ಪಿ 125 ಬೈಕಿನ ಖರೀದಿಯ ಮೇಲೆ ರೂ.5000 ವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ಕೊಡುಗೆ ಕ್ರೆಡಿಟ್/ಡೆಬಿಟ್ ಕಾರ್ಡ್ ಇಎಂಐಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಹೊಸ ಹೋಂಡಾ ಎಸ್ಪಿ 125 ಬೈಕ್ ಶೇ.100 ರಷ್ಟು ಫೈನಾನ್ಸ್ ಮತ್ತು ಆರ್‌ಒಐ ಶೇ.6.5 ರಷ್ಟು ಲಭ್ಯವಿದೆ. ಲೋ ಡೌನ್ ಪೇಮೆಂಟ್ ಯೋಜನೆಯಿಂದ ಖರೀದಿದಾರರು ರೂ.2499 ಗಳ ಲಾಭ ಪಡೆಯಬಹುದು. ಈ ಎಲ್ಲಾ ಆಫರ್ ಗಳಿಗೂ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ.

ಅದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಿಮ್ಮ ಹತ್ತಿರದ ಹೋಂಡಾ ಡೀಲರ್ ಅನ್ನು ಸಂಪರ್ಕಿಸಬಹುದು. ಇನ್ನು ಹೊಸ ಹೋಂಡಾ ಎಸ್ಪಿ 125 ಬೈಕ್ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಎಸ್‌ಪಿ 125 ಬೈಕಿನಲ್ಲಿರುವ ಸ್ಟಾಂಡರ್ಡ್ ಫೀಚರ್‍ಗಳೆಂದರೆ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍ಗಳ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಹೋಂಡಾ ಎಸ್ಪಿ 125 ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಂಜಿನ್ ಸ್ಟಾರ್ಟ್ / ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍ಗಳನ್ನು ಸಹ ಹೊಂದಿದೆ.
MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಎಸ್‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸದೊಂದಿಗೆ ಬರುತ್ತದೆ. ಹೊಸ ಬೈಕ್ ಅನ್ನು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಸೇರಿವೆ.

ಇನ್ನು ಹೋಂಡಾ ಎಸ್‌ಪಿ 125 ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಎಂಜಿನ್ ನಲ್ಲಿ ಐದು ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್‍ಗಳಿವೆ. ಹೋಂಡಾ ಎಸ್‌ಪಿ 125 ಬೈಕಿನಲ್ಲಿ ಬ್ರೇಕಿಂಗ್‍ಗಳಿಗಾಗಿ ಬೈಕಿನ ಎರಡೂ ತುದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳಿವೆ.

ಟಾಪ್ ಎಂಡ್ ಮಾದರಿಯ ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ. ಈ ಬೈಕಿನಲ್ಲಿ 18 ಇಂಚಿನ ವ್ಹೀಲ್‍ಗಳಿದ್ದು, ಎರಡೂ ಬದಿಯಲ್ಲಿ 80/100 ಟಯರ್ ಪ್ರೊಫೈಲ್‌ಗಳಿವೆ. ಇದರಲ್ಲಿ ಟೆಕ್ನಾಲಜಿ ಪೇಟೆಂಟ್‌ಗಳಿದ್ದು, ಇವುಗಳಲ್ಲಿ ಬೈಕಿನ ಶೈಲಿ, ಆರಾಮದಾಯಕ ಹಾಗೂ ಕಂಫರ್ಟ್‍ಗಳು ಸೇರಿವೆ. ಎಸ್‌ಪಿ 125 ಬೈಕ್ ಕಂಪನಿಯ ಹೆಚ್‌ಇಟಿ (ಹೋಂಡಾ ಇಕೋ ಟೆಕ್ನಾಲಜಿ) ಯನ್ನು ಹೊಂದಿದೆ.

ಇದನ್ನು ಇಎಸ್‌ಪಿ (ಎನ್‍ಹ್ಯಾನ್ಸ್ಡ್ ಸ್ಮಾರ್ಟ್ ಪವರ್) ನಿಂದ ನಿಯಂತ್ರಿಸಲಾಗುತ್ತದೆ. ಹೋಂಡಾ ಎಸ್‌ಪಿ 125 ಬೈಕಿನಲ್ಲಿರುವ ಈ ಹೊಸ ಫೀಚರ್ ಹೆಚ್ಚಿನ ಮೈಲೇಜ್, ಎಂಜಿನ್ ರಿಫೈನ್‍ಮೆಂಟ್ ಹಾಗೂ ಎಂಜಿನ್ ಅನ್ನು ಶಾಂತವಾಗಿ ಇರುಸುತ್ತದೆ.