ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ವರ್ಷಾಂತ್ಯದಲ್ಲಿ ತನ್ನ ಆಯ್ದ ಕೆಲವು ಮಾದರಿಗಳ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಘೋಷಿಸಿದೆ. ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆಯು ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಒಳಗೊಂಡಿದೆ.

ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ರೂ.5,000 ಗಳವರೆಗಿನ ಕ್ಯಾಶ್‌ಬ್ಯಾಕ್ ಅನ್ನು ಹೋಂಡಾ ನೀಡುತ್ತಿದೆ. ಆದರೆ ಹೋಂಡಾ ಕಂಪನಿಯ ಪಾಲುದಾರ ಬ್ಯಾಂಕುಗಳ ಮೂಲಕ ನೀವು ಹಣ ಪಾವತಿಸಿದರೆ ಮಾತ್ರ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಕ್ಯಾಶ್‌ಬ್ಯಾಕ್ ನಿಮಗೆ ಲಭಿಸುತ್ತದೆ. ಅವುಗಳೆಂದರೆ ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಯೆಸ್ ಬ್ಯಾಂಕ್ ಗಳಾಗಿವೆ.

ಹೋಂಡಾ ತನ್ನ ಬಿಎಸ್-6 ಗ್ರಾಜಿಯಾ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ವರ್ಷಾಂತ್ಯದಲ್ಲಿ ಹೋಂಡಾ ಬಿಎಸ್-6 ಗ್ರಾಜಿಯಾ 125 ಸ್ಕೂಟರ್ ಮೇಲೆ ಆಫರ್ ಘೋಷಿಸಿರುವುದಕ್ಕೆ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಬಹುದು.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮ್ಯಾಟ್ ಸೈಬರ್ ಯೆಲ್ಲೊ, ಪರ್ಲ್ ಸ್ಪಾರ್ಟನ್ ರೆಡ್, ಪರ್ಲ್ ಸೈರನ್ ಬ್ಲೂ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಬಿಎಸ್-6 ಗ್ರಾಜಿಯಾ 125 ಸ್ಕೂಟರ್‌ನಲ್ಲಿ 125 ಸಿಸಿ ಹೆಚ್‌ಇಟಿ(ಹೋಂಡಾ ಇಕೋ ಟೆಕ್ನಾಲಜಿ) ಬಿಎಸ್‌ವಿಐ ಪಿಜಿಎಂ-ಎಫ್‌ಐ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಪೇಟೆಂಟ್ ಪಡೆದ ಎಸಿಜಿ ಸ್ಟಾರ್ಟರ್ ಮೋಟರ್ ಇದೆ. ಇದು ಪ್ರತಿ ಬಾರಿಯೂ ತ್ವರಿತ, ಮತ್ತು ಜೋಲ್ಟ್-ಫ್ರೀ ಸ್ಟಾರ್ಟ್ ಆಗುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ ಪಾಸ್-ಸ್ವಿಚ್, ಹೊಸ ಎಂಜಿನ್ ಸ್ಟಾರ್ಟ್/ ಸ್ಟಾಪ್ ಸ್ವಿಚ್, ಸೀಟ್‌ಗಾಗಿ ಮಲ್ಟಿ-ಫಂಕ್ಷನಲ್ ಸ್ವಿಚ್ ಮತ್ತು ಫ್ಯೂಯಲ್ ಲಿಡ್ ಅನ್ನು ಒಳಗೊಂಡಿದೆ.

ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‍ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5000 ಆರ್‍ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವಿ-ಟೈಪ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಎಸ್ 6 ಹೋಂಡಾ ಗ್ರಾಜಿಯಾ 125 ಸ್ಕೂಟರ್‌ನಲ್ಲಿ ಸಸ್ಪೆಂಕ್ಷನ್ ಗಾಗಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಿದ್ದಾರೆ.

ಇನ್ನು ಈ ಸ್ಕೂಟರ್‌ನಲ್ಲಿ ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ 190 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬ್ರ್ಯಾಂಡ್‌ನ ಪ್ರೀಮಿಯಂ 125 ಸಿಸಿ ವಿಭಾಗದಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ.

ಈ ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಫ್ಯಾಸಿನೊ 125, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








