ಹೊಸ ಹೋಂಡಾ ಲಿವೊ ಬೈಕ್ ಖರೀದಿ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಆಯ್ದ ಸ್ಕೂಟರ್ ಮತ್ತು ಬೈಕ್ ಮಾದರಿಗಳ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಮತ್ತಷ್ಟು ವಿಸ್ತರಿಸಿದೆ. ಇದೀಗ ಹೋಂಡಾ ಕಂಪನಿಯು ತನ್ನ ಲಿವೊ ಬೈಕಿನ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಘೊಷಿಸಿದೆ.

ಹೊಸ ಹೋಂಡಾ ಲಿವೊ ಬೈಕ್ ಖರೀದಿಸುವಾಗ ರೂ.3500 ವರೆಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಅನ್ನು ಗ್ರಾಹಕರು ಪಡೆಯಬಹುದಾಗಿದೆ. ಆದರೆ ಇದಕ್ಕೆ ತನ್ನದೇ ಆದ ಕೆಲವು ನಿಯಮಗಳು ಮತ್ತು ಕೆಲವು ಷರತ್ತುಗಳಿವೆ. ಈ ಕೊಡುಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ವಹಿವಾಟಿನಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಕನಿಷ್ಠ ವಹಿವಾಟು ಮೌಲ್ಯವು ರೂ.40,000 ಗಳಾಗಿರಬೇಕು ಎಂದು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೇಳಿದೆ.

ಈ ಕ್ಯಾಶ್‌ಬ್ಯಾಕ್ ಆಫರ್ ಈ ತಿಂಗಳ 30ರವರೆಗೂ ಲಭ್ಯವಿರುತ್ತದೆ. ಈ ಹೊಸ ಹೋಂಡಾ ಯೂನಿಕಾರ್ನ್ ಬೈಕ್ ಮೇಲೆ ನೀಡಿರುವ ಕ್ಯಾಶ್‌ಬ್ಯಾಕ್ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೋಂಡಾ ಲಿವೊ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಹೋಂಡಾ ಲಿವೊ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.71,460 ಗಳಾಗಿದರೆ ಡಿಸ್ಕ್ ರೂಪಾಂತರದ ಬೆಲೆಯು ರೂ.75,661 ಗಳಾಗಿದೆ. ಈ ಎಲ್ಲಾ ಬೆಲೆಗಳು ಮುಂಬೈ ಎಕ್ಸ್ ಶೋರೂಂ ಪ್ರಕಾರ

ಹೊಂಡಾ ಕಂಪನಿಯು ಲಿವೊ ಬೈಕನ್ನು ಹಲವಾರು ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಿದ್ದರು. ಹೊಸ ಲಿವೊ ಬೈಕಿನಲ್ಲಿ ಪಿಜಿಎಂ-ಫೈ(ಫ್ಯೂಯಲ್-ಇಂಜೆಕ್ಷನ್) ಸಿಸ್ಟಂಗಳೊಂದಿಗೆ ನವೀಕರಿಸಿದ ಬಿಎಸ್-6 ಪ್ರೇರಿತ 110 ಸಿಸಿ ಎಂಜಿನ್ ಅನ್ನು ಅಳವಡಿಸಿದ್ದಾರೆ. ಇನ್ನು ಈ ಬೈಕಿನಲ್ಲಿ ಬ್ರ್ಯಾಂಡ್‌ನ ಇಎಸ್‌ಪಿ ತಂತ್ರಜ್ಞಾನ ಸಹ ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೋಂಡಾ ಲಿವೊ ಬೈಕನ್ನು ಕೆಲವು ಸೂಕ್ಷ್ಮ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿತು. ಇದರಲ್ಲಿ ಚಿಸೆಲ್ಡ್ ಟ್ಯಾಂಕ್, ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಿದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಹೊಸ ಹೋಂಡಾ ಲಿವೊ ಸ್ಪೂರ್ಟಿ ಲುಕ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಸಿಜಿ ಸ್ಟಾರ್ಟರ್ ಮೋಟರ್, ಪಾಸಿಂಗ್ ಸ್ವಿಚ್ ನೊಂದಿಗೆ ಹೊಸ ಡಿಸಿ ಹೆಡ್ ಲ್ಯಾಂಪ್ ಮತ್ತು ಸ್ಟಾರ್ಟ್/ಸ್ಟಾಪ್ ಎಂಜಿನ್ ಸ್ವಿಚ್ ನೊಂದಿಗೆ ಹಲವಾರು ಫೀಚರ್ಸ್ ಗಳನ್ನು ಹೊಂದಿವೆ.
MOST READ: ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಈ ಹೊಸ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆಯ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಗಾಗಿ ಡ್ರಮ್ ಅಥವಾ ಡಿಸ್ಕ್ ಬ್ರೇಕ್‌ಗಳ ಆಯ್ಕೆಗಳನ್ನು ನೀಡಲಾಗಿದೆ. ಇದರೊಂದಿಗೆ ಕಾಂಬಿ-ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಹೋಂಡಾ ಲಿವೊ ಬೈಕ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಹೋಂಡಾ ಲಿವೊ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಟಿವಿಎಸ್ ರೇಡಿಯಾನ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications