ಆಕ್ಟಿವಾ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಿದ ಹೋಂಡಾ
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಟಿವಾ 125 ಆವೃತ್ತಿಯ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಮಾರ್ಚ್ ಅವಧಿಯಲ್ಲಿ ಆಕ್ಟಿವಾ 125 ಖರೀದಿಸುವ ಗ್ರಾಹಕರು ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ಆಕ್ಟಿವಾ 125 ಸ್ಕೂಟರ್ ಆವೃತ್ತಿಯ ಖರೀದಿ ಮೇಲೆ ಹೋಂಡಾ ಕಂಪನಿಯು ಆಕರ್ಷಕ ಬಡ್ಡಿದರದಲ್ಲಿ ಗರಿಷ್ಠ ಸಾಲಸೌಲಭ್ಯ, ಕ್ಯಾಶ್‌ಬ್ಯಾಕ್ ಆಫರ್ ಮತ್ತು ಜಿರೋ ಡೌನ್‌ಪೇಮೆಂಟ್ ಆಯ್ಕೆಗಳನ್ನು ನೀಡುತ್ತಿದ್ದು, ಹೊಸ ಆಕ್ಟಿವಾ 125 ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಆಯ್ದ ಡೀಲರ್ಸ್‌ಗಳಲ್ಲಿ ಹೊಸ ಸ್ಕೂಟರ್ ಮೇಲೆ ಹಲವಾರು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಕಂಪನಿಯ ಹೊಸ ಆಫರ್‌ನಲ್ಲಿ ಆಕ್ಟಿವಾ 125 ಸ್ಕೂಟರ್ ಖರೀದಿ ಮೇಲೆ ಆಕರ್ಷಕ ಬಡ್ಡಿದರದಲ್ಲಿ ಶೇ. 100ರಷ್ಟು ಸಾಲ ಸೌಲಭ್ಯ ನೀಡುತ್ತಿದ್ದು, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಕ್ ಕಾರ್ಡ್ ಬಳಕೆ ಮಾಡುವ ಗ್ರಾಹಕರಿಗೆ ರೂ.5 ಸಾವಿರ ಕ್ಯಾಶ್‌ಬ್ಯಾಕ್ ಕೂಡಾ ಲಭ್ಯವಿದೆ.

ಹಾಗೆಯೇ ಹೊಸ ಸ್ಕೂಟರ್ ಖರೀದಿಗಾಗಿ ಹೋಂಡಾ ಕಂಪನಿಯು ಶೂನ್ಯ ಮೊತ್ತದೊಂದಿಗೆ ಡೌನ್‌ಪೆಮೆಂಟ್ ನಿಗದಿಪಡಿಸಿದ್ದು, ಕ್ಯಾಶ್‌ಬ್ಯಾಕ್ ಪಡೆದುಕೊಳ್ಳುವ ಗ್ರಾಹಕರು ಕಡ್ಡಾಯವಾಗಿ ಇಂಡಸ್ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೆಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟಟೆಡ್ ಅಥವಾ ಫೆಡರಲ್ ಬ್ಯಾಂಕ್ ಕಾರ್ಡ್‌ಗಳನ್ನೇ ಬಳಕೆ ಮಾಡಬೇಕಾಗುತ್ತದೆ.

ಇನ್ನು ದೇಶಿಯ ಮಾರುಕಟ್ಟೆಯಲ್ಲಿನ ಸ್ಕೂಟರ್ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಹೋಂಡಾ ಮೋಟಾರ್‌ಸೈಕಲ್ ವಿಭಾಗವು ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಬದಲಾವಣೆಗೊಳ್ಳುತ್ತಲೇ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಬೆಲೆ, ತಾಂತ್ರಿಕ ಅಂಶಗಳಲ್ಲಿ ಪ್ರತಿ ಸ್ಪರ್ಧಿ ಸ್ಕೂಟರ್ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಆಕ್ಟಿವಾ ಸ್ಕೂಟರ್ ಮಾದರಿಗಳು ಕೋವಿಡ್ ನಂತರ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಯುಗಾದಿ ಸಂಭ್ರಮಕ್ಕಾಗಿ ಮತ್ತಷ್ಟು ಮಾರಾಟ ಪ್ರಮಾಣವನ್ನು ಹೆಚ್ಚಿಸುವ ಸಿದ್ದತೆಯಲ್ಲಿದೆ.

ಇನ್ನು ಬಿಎಸ್-6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 125 ಎಫ್ಐ ಸ್ಕೂಟರ್ ಮಾದರಿಯು ಫ್ಯೂಲ್ ಇಂಜೆಕ್ಟೆಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 70,629ರಿಂದ ಟಾಪ್ ಎಂಡ್ ಮಾದರಿಯು ರೂ.77,752ಕ್ಕೆ ನಿಗದಿಪಡಿಸಲಾಗಿದೆ.

ಹೊಸ ಎಂಜಿನ್ ಆಯ್ಕೆಯಿಂದಾಗಿ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುತ್ತಿರುವ ಹೊಸ ಸ್ಕೂಟರ್ ಮಾದರಿಯು ಬಿಎಸ್-6 ಎಂಜಿನ್ ಜೋಡಣೆ ನಂತರ ಇದುವರೆಗೆ ಸುಮಾರು 3 ಲಕ್ಷಕ್ಕೂ ಅಧಿಕ ಯುನಿಟ್ ಮಾರಾಟಗೊಂಡಿದ್ದು, ಗ್ರಾಹಕರು ಆಕ್ಟಿವಾ ಮಾದರಿಯನ್ನು ಡ್ರಮ್, ಡ್ರಮ್ ಅಲಾಯ್ ಮತ್ತು ಡಿಸ್ಕ್ ಮಾದರಿಗಳನ್ನು ಪಡೆದುಕೊಂಡಿದೆ.

ಬಿಎಸ್-6 ಜಾರಿ ನಂತರ ಹೊಸ ಸ್ಕೂಟರ್‌ನಲ್ಲಿ ಎಂಜಿನ್ ಜೊತೆಗೆ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿರುವ ಹೋಂಡಾ ಕಂಪನಿಯು ಹೊಸ ಡಿಸೈನ್ ಪ್ರೇರಿತ ಫ್ರಂಟ್ ಅಪಾರ್ನ್, ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ನೀಡಿದ್ದು, ಕ್ರೋಮ್ ಡಿಸೈನ್‌ನಿಂದಾಗಿ ಹೊಸ ಸ್ಕೂಟರಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸವನ್ನು ಒದಗಿಸಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇದರೊಂದಿಗೆ ಬಿಎಸ್-6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ ಎನ್ನಬಹುದು.

ಬಿಎಸ್-6 ಪ್ರೇರಿತ 124-ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್-ಇಂಜೆಕ್ಷಡ್ ಯುನಿಟ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು 8.4-ಬಿಎಚ್‌ಪಿ ಮತ್ತು 10.54-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಅಂದ್ರೆ ಅದು ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯ. ಹೌದು, ಹೋಂಡಾ ಸಂಸ್ಥೆಯು ಮೊದಲ ಬಾರಿಗೆ ಆಕ್ಟಿವಾ 125 ಸ್ಕೂಟರ್‌ನಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಬಳಕೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಇಂಧನ ವ್ಯರ್ಥವನ್ನು ತಪ್ಪಿಸಲಿದೆ.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ 30 ಸೆಕೆಂಡ್‌ಗಿಂತಲೂ ಹೆಚ್ಚು ನಿಲುಗಡೆಯಾದಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯವು ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಲಿದ್ದು, ಸ್ಕೂಟರ್ ತನ್ನಷ್ಟೇ ತಾನೇ ಬಂದ್ ಆಗುತ್ತೆ. ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಆಗುವ ಇಂಧನ ವ್ಯರ್ಥವಾಗುವುದಕ್ಕೆ ಬ್ರೇಕ್ ಹಾಕಲಿದ್ದು, ಎಂಜಿನ್ ಆಫ್ ಮಾಡುವ ಮತ್ತು ಆನ್ ಮಾಡುವ ಅವಶ್ಯಕತೆಯಿರುವುದಿಲ್ಲ.


Click it and Unblock the Notifications