ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಸಾಧಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ದ್ವಿಚಕ್ರಗಳ ಮಾರಾಟದ ಜೊತೆಗೆ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲೂ ಸಹ ಮುಂಚೂಣಿ ಸಾಧಿಸುತ್ತಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟಕ್ಕಾಗಿ ಪ್ರತ್ಯೇಕ ಶೋರೂಂಗಳ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಎರಡು ಮಾದರಿಯ ಬೈಕ್ ಮಾರಾಟ ಮಳಿಗೆಗಳ ಸೌಲಭ್ಯ ಹೊಂದಿದ್ದು, 350 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಸಾಮಾನ್ಯ ಬೈಕ್ ಶೋರೂಂಗಳಲ್ಲಿ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಶೋರೂಂಗಳ ಮೂಲಕ ಮಾರಾಟಗೊಳಿಸುತ್ತಿದೆ. ಹೋಂಡಾ ಸಾಮಾನ್ಯ ಶೋರೂಂ ಈಗಾಗಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಜಾಲ ಹೊಂದಿದ್ದು, ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಸಹ ಗ್ರಾಹಕರ ಬೇಡಿಕೆಯೆಂತೆ ಹೆಚ್ಚಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಹೈನೆಸ್ ಸಿಬಿ 350 ಕ್ಲಾಸಿಕ್ ಬೈಕ್ ಬಿಡುಗಡೆಯೊಂದಿಗೆ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್‌ನಲ್ಲಿ ಬಿಗ್‌ವಿಂಗ್ ಶೋರೂಂಗೆ ಚಾಲನೆ ನೀಡುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಕಳೆದ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಎರಡು ಹೊಸ ಬಿಗ್‌ವಿಂಗ್ ಶೋರೂಂಗಳನ್ನು ತೆರೆದಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇದೀಗ ಚೆನ್ನೈ ದಕ್ಷಿಣ ವಿಭಾಗದಲ್ಲೂ ಬಿಗ್‌ವಿಂಗ್ ಶೋರೂಂ ತೆರೆದಿದ್ದು, ಹೊಸ ಮಾರಾಟ ಮಳಿಗೆಯ ಮೂಲಕ ಕ್ಲಾಸಿಕ್ ಬೈಕ್ ಮಾದರಿಯಾದ ಹೈನೆಸ್ ಸಿಬಿ350 ಮಾರಾಟವನ್ನು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲೂ ಎರಡು ಮಾದರಿಯ ಮಾರಾಟ ಸೌಲಭ್ಯಗಳನ್ನು ಪರಿಚಯಿಸಿದ್ದು, ಬಿಗ್‌ವಿಂಗ್ ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ 350 ಸಿಸಿಯಿಂದ 500 ಸಿಸಿ ಬೈಕ್ ಮಾದರಿಗಳನ್ನು ಮತ್ತು ಬಿಗ್‌ವಿಂಗ್ ಟಾಪ್‌ಲೈನ್ ಮಾರಾಟ ಮಳಿಗೆಗಳಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಸಾಮಾನ್ಯ ಬಿಗ್‌ವಿಂಗ್ ಶೋರೂಂನಲ್ಲಿ ಕಡಿಮೆ ಸಿಸಿ ಸಾಮರ್ಥ್ಯದ ಪ್ರೀಮಿಯಂ ಬೈಕ್ ಖರೀದಿಗೆ ಲಭ್ಯವಿದ್ದಲ್ಲಿ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂನಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಸೂಪರ್ ಬೈಕ್‌ಗಳು ಕೂಡಾ ಖರೀದಿಗೆ ಲಭ್ಯವಿರಲಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ದೇಶದ ಪ್ರಮುಖ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಬಿಗ್‌ವಿಂಗ್ ಟಾಪ್‌ಲೈನ್ ಶೋರೂಂ ತೆರೆದಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ಪ್ರೀಮಿಯಂ ಬೈಕ್ ಮಾರಾಟ ಮಾಡುವ ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ದೇಶಾದ್ಯಂತ ಈ ವರ್ಷಾಂತ್ಯಕ್ಕೆ 50 ಹೊಸ ಬಿಗ್‌ವಿಂಗ್ ಶೋರೂಂಗಳು ಆರಂಭಗೊಳ್ಳುತ್ತಿವೆ.

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಸಾಮಾನ್ಯ ಬಿಗ್‌ವಿಂಗ್ ಶೋರೂಂಗಳು ಟೈರ್ 1, ಟೈರ್ 2 ನಗರಗಳಲ್ಲೂ ಕೂಡಾ ಕಾರ್ಯಾಚರಣೆ ಆರಂಭಿಸುವ ಸಿದ್ದತೆಯಲ್ಲಿದ್ದು, ಹೊಸ ಶೋರೂಂಗಳ ಮೂಲಕ ಇತ್ತೀಚೆಗೆ ಬಿಡುಗಡೆಯಾದ ಹೈನೆಸ್ ಸಿಬಿ 350 ಮತ್ತು ಸಿಬಿ350 ಆರ್‌ಎಸ್ ಬೈಕ್ ಮಾದರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಯೋಜನೆಯಲ್ಲಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ದಕ್ಷಿಣ ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ ಹೋಂಡಾ ಮೋಟಾರ್‌ಸೈಕಲ್

ಕ್ಲಾಸಿಕ್ ಬೈಕ್ ಮಾದರಿಗಳಲ್ಲಿ ಹೈನೆಸ್ ಸಿಬಿ 350 ಮತ್ತು ಸ್ಟ್ರೀಟ್ ಫೈಟರ್ ಬೈಕ್ ಮಾದರಿಗಳಲ್ಲಿ ಕೆಫೆ ರೇಸರ್ ವೈಶಿಷ್ಟ್ಯತೆಯ ಹೊಸ ಸಿಬಿ350 ಆರ್‌‌ಎಸ್ ಆವೃತ್ತಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಹೈನೆಸ್ ಸಿಬಿ 350 ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.87 ಲಕ್ಷ ಮತ್ತು ಸಿಬಿ350 ಆರ್‌‌ಎಸ್ ಬೈಕ್ ಮಾದರಿಯು ರೂ.1.96 ಲಕ್ಷ ಬೆಲೆ ಹೊಂದಿವೆ.

More from DriveSpark

Article Published On: Friday, March 19, 2021, 19:20 [IST]
English summary
Honda 2Wheelers Inaugurates New BigWing Outlet In Chennai. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+