ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಆಕ್ಟಿವಾ 6ಜಿ ತನ್ನ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಎಸ್‌ಟಿಡಿ ಮತ್ತು ಡಿಎಲ್‌ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಇದೀಗ ಆಕ್ಟಿವಾ 6ಜಿ ಸ್ಕೂಟರ್ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಘೋಷಿಸಿದೆ .ಗ್ರಾಹಕರು ಹೊಚ್ಚ ಹೊಸ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿಸುವಾಗ ರೂ.3500 ವರೆಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಲಭಿಸುತ್ತದೆ. ಆದರೆ ಇದಕ್ಕೆ ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿದೆ. ಈ ಕೊಡುಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ವಹಿವಾಟಿನಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಕನಿಷ್ಠ ವಹಿವಾಟು ಮೌಲ್ಯವು ರೂ.40,000 ರೂಪಾಯಿಗಳಾಗಿರಬೇಕು ಎಂದು ಹೋಂಡಾ ಕಂಪನಿ ಹೇಳಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಹೊಸ ಕ್ಯಾಶ್‌ಬ್ಯಾಕ್ ಆಫರ್ ಜೂನ್ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಈ ಹೋಂಡಾ ಡಿಯೋ ಸ್ಕೂಟರ್ ಮೇಲೆ ನೀಡಿರುವ ಕ್ಯಾಶ್‌ಬ್ಯಾಕ್ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಕಂಪನಿಯು ಬಿಎಸ್-6 ಆಕ್ಟಿವಾ 6ಜಿ ಸ್ಕೂಟರನ್ನು ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿದ್ದರು. ಈ ಬಿಎಸ್-6 ಆಕ್ಟಿವಾ 6ಜಿ ಸ್ಕೂಟರನ್ನು ಹೊಸ ಫೀಚರ್ ಗಳು ಮತ್ತು ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉದ್ದವಾದ ವೀಲ್‌ಬೇಸ್‌ನೊಂದಿಗೆ ಬಿಡುಗಡೆಗೊಳಿಸಿದ್ದರು.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

2020ರ ಹೋಂಡಾ ಆಕ್ಟಿವಾ 6ಜಿ ಡಿಲಕ್ಸ್ ರೂಪಾಂತರದಲ್ಲಿ ಎಸಿಜಿ ಸ್ಟಾರ್ಟರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇನ್ನು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಫ್ಯುಯಲ್ ಫಿಲ್ಲರ್ ಕ್ಯಾಪ್ ಅನ್ನು ಕೂಡ ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಇನ್ನು ಈ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು ಹಂತದ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಅಂಡರ್-ಸೀಟ್ 18-ಲೀಟರ್ ಸಾಮರ್ಥ್ಯದ ಸ್ಟ್ರೋರೇಜ್ ಸ್ಪೇಸ್ ಅನ್ನು ಹೊಂದಿದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಸ್ಕೂಟರ್ ಕಂಪನಿಯ ಪಿಜಿಎಂ-ಫೈ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಇದರಿಂದಾಗಿ ಈ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಜನಪ್ರಿಯ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಬ್ಲ್ಯಾಕ್, ಡ್ಯಾಝಲ್ ಯೆಲ್ಲೊ, ಗ್ಲಿಟರ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಪ್ರೆಷಿಯಸ್ ವೈಟ್ ಮತ್ತು ಪರ್ಲ್ ಸ್ಪಾರ್ಟನ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

More from DriveSpark

Article Published On: Thursday, May 6, 2021, 19:23 [IST]
English summary
New Honda Activa 6G Cashback Offer Announced. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+