ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಅಡ್ವೆಂಚರ್ ಬೈಕ್ ಮಾದರಿಯಾದ ಸಿಬಿ500ಎಕ್ಸ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಎಕ್ಸ್ ಶೋರೂಂ ಪ್ರಕಾರ ರೂ.6.87 ಲಕ್ಷ ಹೊಂದಿರುವ ಹೊಸ ಬೈಕ್ ಶೀಘ್ರದಲ್ಲೇ ಗ್ರಾಹಕರ ಕೈಸೇರಲಿದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಮಾದರಿಯನ್ನು ಸಿಕೆಡಿ(ಕಂಪ್ಲಿಟ್ಲಿ ನಾಕ್ ಡೌನ್) ಆಮದು ನೀತಿ ಅಡಿ ಭಾರತದಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಬೈಕಿನ ಮೊದಲ ಬ್ಯಾಚ್ ಡೀಲರ್ಸ್ ಯಾರ್ಡ್ ತಲುಪಿದೆ. ಈಗಾಗಲೇ ಹೊಸ ಬೈಕಿಗೆ ನೀರಿಕ್ಷೆಗೂ ಮೀರಿ ಬುಕ್ಕಿಂಗ್ ಪಡೆದುಕೊಂಡಿರುವ ಹೋಂಡಾ ಕಂಪನಿಯು ಶೀಘ್ರದಲ್ಲೇ ಹೊಸ ಬೈಕ್ ವಿತರಣೆ ಆರಂಭಿಸಲಿದ್ದು, ಬಿಗ್‌ವಿಂಗ್ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಭಾರತದಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ಹೊಂದಿದ್ದು, 300 ಸಿಸಿ ಗಿಂತಲೂ ಕೆಳಮಟ್ಟದ ಸಾಮಾನ್ಯ ಬೈಕ್ ಮಾದರಿಗಳನ್ನು ಸ್ಟ್ಯಾಂಡರ್ಡ್ ಶೋರೂಂನಲ್ಲಿ ಮತ್ತು 300 ಸಿಸಿ ಮೇಲ್ಪಟ್ಟ ಪ್ರೀಮಿಯಂ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಶೋರೂಂಗಳಲ್ಲಿ ಮಾರಾಟ ಮಾಡುತ್ತಿದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಮಾದರಿಯು ಇದೀಗ ಬಿಗ್‌ವಿಂಗ್ ಶೋರೂಂ ಮೂಲಕ ಮಾತ್ರ ಮಾರಾಟಗೊಳ್ಳಲಿದ್ದು, ಹೊಸ ಬೈಕ್ 471ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿರಲಿದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌‌ನೊಂದಿಗೆ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಹೊಸ ಬೈಕ್ ಮಾದರಿಯು ಅಡ್ವೆಂಚರ್ ಟೂರರ್ ಮತ್ತು ಸಿಟಿ ರೈಡ್ ಎರಡು ಮಾದರಿಯಲ್ಲೂ ಅತ್ಯುತ್ತಮ ಬೈಕ್ ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಸಸ್ಷೆಷನ್ ಸೆಟಪ್ ಬಗ್ಗೆ ಹೇಳುವುದಾದರೆ, 150ಎಂಎಂ ಟ್ರ್ಯಾವಲ್ ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 135 ಎಂಎಂ ಟ್ರಾವೆಲ್ ಯುನಿಟ್ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಹೊಸ ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 19 ಇಂಚಿನ (110/80 ಆಲ್-ಟೆರೈನ್) ಟೈರ್ ಮತ್ತು ಹಿಂಭಾಗದಲ್ಲಿ 17 ಇಂಚಿನ (160/60 ಆಲ್-ಟೆರೈನ್) ಟೈರ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದ್ದು, ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಕೂಡಾ ನೀಡಲಾಗಿದೆ.

ಗ್ರಾಹಕರ ಕೈಸೇರಲು ಸಿದ್ದವಾದ ಹೋಂಡಾ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್

ಹಾಗೆಯೇ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಸ್ಟೆಪ್ ಅಪ್ ಸೀಟ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಸಿಸ್ಟಂನಂತಹ ಫೀಚರ್ ಗಳೊಂದಿಗೆ ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‌ಲೈಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಕೂಡಾ ಇದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

Most Read Articles

Kannada
English summary
Honda CB500X Starts Arriving At Dealerships. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X