ಬಿಡುಗಡೆಗೆ ಸಜ್ಜಾದ Honda H’ness CB350 ಆನಿವರ್ಸರಿ ಎಡಿಷನ್
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಹೊಸ ಹೈನೆಸ್ ಸಿಬಿ350 ಆನಿವರ್ಸರಿ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹೋಂಡಾ ಹೈನೆಸ್ ಸಿಬಿ350 ಆನಿವರ್ಸರಿ ಎಡಿಷನ್ ನಾಳೆ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆಯಾಗಲಿದೆ.

ಸದ್ಯ ಹೊಸ ಹೋಂಡಾ ಹೈನೆಸ್ ಸಿಬಿ350 ಆನಿವರ್ಸರಿ ಎಡಿಷನ್ ಬಗ್ಗೆ ಹೋಂಡಾ ಮೋಟಾರ್‌ಸೈಕಲ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು ರೆಟ್ರೊ ಫ್ಲೇವರ್‌ನಲ್ಲಿರುವ ವಿಶಿಷ್ಟವಾದ ಬಣ್ಣದ ಸ್ಕೀಮ್‌ನೊಂದಿಗೆ ಬರುತ್ತದೆ ಎಂದು ನಾವು ನಿರೀಕ್ಷಿಸಬಹುದು. ಇದಲ್ಲದೆ, ವಾರ್ಷಿಕೋತ್ಸವದ ಆವೃತ್ತಿಯಾಗಿರುವುದರಿಂದ, ಸಿಬಿ350 ಅದೇ ರೀತಿ ಸೂಚಿಸಲು ಗ್ರಾಫಿಕ್ಸ್ ಅನ್ನು ಸಹ ಮಾಡಬಹುದು.ಈ ಬದಲಾವಣೆಗಳನ್ನು ಹೊರತುಪಡಿಸಿ, ಯಾವುದೇ ಇತರ ಬದಲಾವಣೆಗಳನ್ನು ಒಳಗೊಂಡಿರುವ ಸಾಧ್ಯತೆಗಳು ಕಡಿಮೆಯಾಗಿದೆ.

ಸ್ಟ್ಯಾಂಡರ್ಡ್ ಹೋಂಡಾ ಹೈನೆಸ್ ಸಿಬಿ350 ಬೈಕಿನಲ್ಲಿರುವ ಅದೇ 348.6ಸಿಸಿ, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಆನಿವರ್ಸರಿ ಎಡಿಷನ್ ನಲ್ಲಿ ನೀಡಬಹುದು. ಈ ಎಂಜಿನ್ 5,500 ಆರ್‌ಪಿಎಂನಲ್ಲಿ 20.78 ಬಿಹೆಚ್‌ಪಿ ಮತ್ತು 3,000 ಆರ್‌ಪಿಎಂನಲ್ಲಿ 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ, ಇದು ಕ್ಲಚ್ ಲಿವರ್ ಕಾರ್ಯಾಚರಣೆಯ ಹೊರೆ ಕಡಿಮೆಮಾಡಿ ಗೇರ್ ವರ್ಗಾವಣೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಈ ಹೋಂಡಾ ಹೈನೆಸ್ ಸಿಬಿ350 ಬೈಕ್ ಬಗ್ಗೆ ಹೇಳುವುದಾದರೆ, ಇದು ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೋಂಡಾ ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸುತ್ತದೆ. ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್ ಹಾಗೂ ಫೋರ್ಕ್‌ಗಳನ್ನು ಹೊಂದಿದೆ.

ಹೈನೆಸ್ ಸಿಬಿ350 ಬೈಕಿನಲ್ಲಿ 15-ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಣೆಯೊಂದಿಗೆ ಹೊಂಡಾ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ. ಇನ್ನು ಇದರಲ್ಲಿ ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದೆ. ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಈ ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದೆ.

ಹೋಂಡಾ ಹೈನೆಸ್ ಸಿಬಿ350 ಬೈಕಿನಲ್ಲಿ 350ಸಿಸಿ ಸೆಗ್ಮೆಂಟಿನಲ್ಲಿ ಮೊದಲ ಬಾರಿಗೆ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದ್ದು, ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ಓಳಗೊಂಡಿವೆ.

ಹೋಂಡಾ ಹೈನೆಸ್ ಸಿಬಿ350 ಬೈಕ್ ಬೇಸ್ ಮಾದರಿಯನ್ನು ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಹಾಗೂ ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುತ್ತಿದ್ದರೆ, ಟಾಪ್-ಎಂಡ್ ಡಿಎಲ್ಎಕ್ಸ್ ಪ್ರೊ ಮಾದರಿಯನ್ನು ಮ್ಯಾಟ್ ಗ್ರೇ ಮೆಟಾಲಿಕ್, ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್, ವರ್ಚುವಸ್ ವೈಟ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹಾಗೂ ಸ್ಪಿಯರ್ ಸಿಲ್ವರ್ ಮೆಟಾಲಿಕ್ ಪರ್ಲ್ ನೈಟ್ ಸ್ಟಾರ್ ಮೆಟಾಲಿಕ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ,

ಹೊಸ ಹೋಂಡಾ ಸಿಬಿ350 ಆರ್‌ಎಸ್ ಬೈಕ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಚಾಸಿಸ್ ಅನ್ನು ಆಧರಿಸಿದೆ. ಇನ್ನು ಇದರ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್--ಹೈಡ್ರಾಲಿಕ್ ಅನ್ನು ಪಡೆಯುತ್ತದೆ.

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದರೆ, ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಎಬಿಎಸ್(ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 2,80,381 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 2,56,170 ಯುನಿಟ್‌ಗಳನ್ನು ಮಾರಾಟಗೊಳಿಸಿದರೆ, ಉಳಿದ 24,211 ಯುನಿಟ್‌ಗಳನ್ನು ರಪ್ತು ಮಾಡಿದ್ದಾರೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,12,641 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.38 ರಷ್ಟು ಕುಸಿತವಾಗಿದೆ. ಇನ್ನು ಹೋಂಡಾ ಕಂಪನಿಯು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 20,565 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.38 ರಷ್ಟು ಕುಸಿತವನ್ನು ಕಂಡಿದೆ. ಇನ್ನು ಹೊಸ ಹೋಂಡಾ ಹೈನೆಸ್ ಸಿಬಿ350 ಆನಿವರ್ಸರಿ ಎಡಿಷನ್ ನಾಳೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಸ್ಪೆಷಲ್ ಎಡಿಷನ್ ಮಾದರಿಯು ಬಿಡುಗಡೆಯ ಸಂದರ್ಭದಲ್ಲಿ ಇದರ ಮಾಹಿತಿಗಳು ಬಹಿರಂಗವಾಗಲಿದೆ.


Click it and Unblock the Notifications