Just In
- 23 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಕ್ಷಿಣ ಭಾರತದ ರಾಜ್ಯಗಳಲ್ಲಿನ ದ್ವಿಚಕ್ರ ವಾಹನ ಮಾರಾಟದಲ್ಲಿ ಹೋಂಡಾ ಹೊಸ ಮೈಲಿಗಲ್ಲು
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ ನಂತರ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿನ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

ಹೋಂಡಾ ಬೈಕ್ ಮಾರಾಟದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದಲೇ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬಂದಿದ್ದು, ಕಳೆದ 20 ವರ್ಷಗಳಲ್ಲಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬರೋಬ್ಬ 1.50 ಕೋಟಿ ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ. 2001ರಿಂದ 2016ರ ಅವಧಿಯಲ್ಲಿ 75 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಹೋಂಡಾ ಕಂಪನಿಯು 2017ರಿಂದ ಇದುವರೆಗೆ ಅಂದರೆ ಕಳೆದ 5 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಬೇಡಿಕೆಯೊಂದಿಗೆ 1.50 ಕೋಟಿ ಯುನಿಟ್ ಮಾರಾಟ ಮೈಲಿಗಲ್ಲು ಸಾಧಿಸಿದೆ.

ಗ್ರಾಹಕರ ಬೇಡಿಕೆ ಅನುಸಾರವಾಗಿ ಹಲವಾರು ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಹೋಂಡಾ ಕಂಪನಿಯು ಕಾಲಕಾಲಕ್ಕೆ ತಕ್ಕಂತೆ ಉತ್ಪನ್ನಗಳ ಉನ್ನತೀಕರಣ ಮತ್ತು ಹಲವಾರು ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಹೋಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಇದೀಗ ಆಕ್ಟಿವಾ ಸರಣಿ ಸ್ಕೂಟರ್ ಹೆಚ್ಚಿನ ಬೇಡಿಕೆ ಹೊಂದಿದ್ದು, ಇತ್ತೀಚೆಗೆ ಆಕ್ಟಿವಾ ಸ್ಕೂಟರ್ ಮಾದರಿಯು ದೇಶಾದ್ಯಂತ 2.50 ಕೋಟಿ ಯುನಿಟ್ ಮಾರಾಟದ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಹೋಂಡಾ ಕಂಪನಿಯು ಆಕ್ಟಿವಾ 6ಜಿ ಸ್ಕೂಟರ್ ಆವೃತ್ತಿಯ ಖರೀದಿ ಮೇಲೆ ಫೆಬ್ರುವರಿ ಅವಧಿಯಲ್ಲಿ ಆಕರ್ಷಕ ಬಡ್ಡಿದರದಲ್ಲಿ ಗರಿಷ್ಠ ಸಾಲಸೌಲಭ್ಯ, ಕ್ಯಾಶ್‌ಬ್ಯಾಕ್ ಆಫರ್ ಮತ್ತು ಅತಿ ಕಡಿಮೆ ಡೌನ್‌ಪೇಮೆಂಟ್ ಆಯ್ಕೆಗಳನ್ನು ನೀಡುತ್ತಿದ್ದು, ಹೊಸ ಆಕ್ಟಿವಾ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಆಯ್ದ ಡೀಲರ್ಸ್‌ಗಳಲ್ಲಿ ಹೊಸ ಸ್ಕೂಟರ್ ಮೇಲೆ ಹಲವಾರು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಹೋಂಡಾ ಕಂಪನಿಯ ಹೊಸ ಆಫರ್‌ನಲ್ಲಿ ಆಕ್ಟಿವಾ ಸ್ಕೂಟರ್ ಖರೀದಿ ಮೇಲೆ ಶೇ. 6.5 ಬಡ್ಡಿದರದಲ್ಲಿ ಶೇ. 100ರಷ್ಟು ಸಾಲಸೌಲಭ್ಯ ನೀಡುತ್ತಿದ್ದು, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಕ್ ಕಾರ್ಡ್ ಬಳಕೆ ಮಾಡುವ ಗ್ರಾಹಕರಿಗೆ ರೂ.5 ಸಾವಿರ ಕ್ಯಾಶ್‌ಬ್ಯಾಕ್ ಕೂಡಾ ಲಭ್ಯವಿದೆ.

ಹಾಗೆಯೇ ಹೊಸ ಸ್ಕೂಟರ್ ಖರೀದಿಗಾಗಿ ಅತಿ ಕಡಿಮೆ ಡೌನ್‌ಪೇಮೆಂಟ್ ಆಯ್ಕೆ ನೀಡಿರುವ ಹೋಂಡಾ ಕಂಪನಿಯು ರೂ. 2,499 ನಿಗದಿಪಡಿಸಿದ್ದು, ಮೊದಲ ಬಾರಿಗೆ ಆಕ್ಟಿವ್ 6ಜಿ ಮಾದರಿಯ ಮೇಲೆ ಅತಿಹೆಚ್ಚು ಆಫರ್ ನೀಡಲಾಗುತ್ತಿದೆ.

ಬಿಎಸ್-6 ಎಮಿಷನ್ ಜಾರಿ ನಂತರ ಆಕ್ಟಿವಾ 6ಜಿ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಸ್ಕೂಟರ್ ಮಾದರಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ವಿವಿಧ ಮಾದರಿಯ ಬಣ್ಣಗಳ ಆಯ್ಕೆಗಳನ್ನು ಹೊಂದಿರುವುದು ಮತ್ತಷ್ಟು ಬೇಡಿಕೆಗೆ ಕಾರಣವಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬೆಲೆ, ತಾಂತ್ರಿಕ ಅಂಶಗಳಲ್ಲಿ ಪ್ರತಿ ಸ್ಪರ್ಧಿ ಸ್ಕೂಟರ್ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಆಕ್ಟಿವಾ ಸ್ಕೂಟರ್ ಮಾದರಿಯು ದೇಶದ ಜನಪ್ರಿಯ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದ್ದು, ಇತ್ತೀಚೆಗೆ 20ನೇ ವರ್ಷದ ಸ್ಪೆಷಲ್ ಎಡಿಷನ್ ಕೂಡಾ ಪಡೆದುಕೊಂಡಿತ್ತು.

ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಮಾದರಿಗಳ ಜೊತೆಗೆ ಸ್ಪೆಷಲ್ ಎಡಿಷನ್‌ನಲ್ಲೂ ಮಾರಾಟಗೊಳ್ಳುತ್ತಿರುವ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ. 84,414ಕ್ಕೆ ಮತ್ತು ಡಿಲಕ್ಸ್ ಮಾದರಿಯು ರೂ. 87,421 ಬೆಲೆ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

20ನೇ ವರ್ಷದ ಸಂಭ್ರಮಕ್ಕಾಗಿ ಬಿಡುಗಡೆಯಾಗಿರುವ ಸ್ಪೆಷಲ್ ಎಡಿಷನ್ ಮಾದರಿಯು ಆರಂಭಿಕವಾಗಿ ರೂ. 87,138ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 89,144 ಬೆಲೆ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಒಟ್ಟು 8 ಬಣ್ಣಗಳ ಆಯ್ಕೆ ನೀಡಿದೆ.