ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಕಬೀರಾ ಮೊಬಿಲಿಟಿ ಕಂಪನಿಯು ಶೀಘ್ರದಲ್ಲೇ ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಫೆಬ್ರವರಿ 15ರಂದು ಯೂಟ್ಯೂಬ್‌ನಲ್ಲಿ ಆನ್‌ಲೈನ್ ಕಾರ್ಯಕ್ರಮದ ಮೂಲಕ ಈ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಕಬೀರಾ ತನ್ನ ಕಬೀರಾ ಕೆಎಂ 4000 ಎಲೆಕ್ಟ್ರಿಕ್ ಬೈಕ್ ಅನ್ನು ಫೆಬ್ರವರಿ 15ರಂದು ಬಿಡುಗಡೆಗೊಳಿಸಲಿದೆ. ಕಂಪನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಕಬೀರಾ ಕೆಎಂ 4000 ಎಲೆಕ್ಟ್ರಿಕ್ ಬೈಕಿನ ವಿನ್ಯಾಸವು ಯಮಹಾ ಎಫ್‌ ಝಡ್‌ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗಿದೆ. ಈ ಬೈಕ್ ಡ್ಯುಯಲ್ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿರುವ ಡ್ಯುಯಲ್ ರೇರ್ ಡಿಸ್ಕ್ ಬ್ರೇಕ್ ಹೊಂದಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಬಿಡುಗಡೆಯ ಸಂದರ್ಭದಲ್ಲಿ ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಲಿದೆ. ಕಬೀರಾ ಕಂಪನಿಯು ಇತ್ತೀಚೆಗೆ ಕೆಎಂ 3000 ಹಾಗೂ ಕೆಎಂ 4000 ಎಲೆಕ್ಟ್ರಿಕ್ಬೈಕುಗಳಿಗಾಗಿ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಈ ಎರಡೂ ಬೈಕ್‌ಗಳನ್ನು ಪೂರ್ತಿಯಾಗಿ ಭಾರತದಲ್ಲಿ ಉತ್ಪಾದಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಶ್ರೇಣಿಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲವೆಂದು ಹೇಳಿರುವ ಕಬೀರಾ ಮೊಬಿಲಿಟಿ ಇವು ಹೈಸ್ಪೀಡ್ ಬೈಕ್‌ಗಳೆಂದು ತಿಳಿಸಿದೆ. ಕಾಂಬಿ ಬ್ರೇಕ್‌ಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್‌ಗಳು ಕ್ಲಾಸ್ ರೇಂಜ್‌ನಲ್ಲಿ ಉತ್ತಮವಾಗಿವೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುವ ಈ ಬೈಕುಗಳು ಪೆಟ್ರೋಲ್ ಎಂಜಿನ್ ಬೈಕುಗಳಂತೆಯೇ ಕಾಣುತ್ತವೆ. ಈ ಬೈಕ್‌ಗಳಿಗೆ ರೋಡ್ ಸೈಡ್ ಅಸಿಸ್ಟೆನ್ಸ್ ನೀಡಲಾಗುವುದು. ಈ ಬೈಕ್ ಅಗ್ನಿ ನಿರೋಧಕ ಬ್ಯಾಟರಿ ಪ್ಯಾಕ್‌, ಪಾರ್ಕ್ ಅಸಿಸ್ಟ್ ಸೇರಿದಂತೆ ಹಲವಾರು ಸ್ಮಾರ್ಟ್ ಫೀಚರ್'ಗಳನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಡೆಲ್ಟಿವ್ ಬಿಎಲ್‌ಡಿಸಿ ಮೋಟರ್ ಹೊಂದಿರುವ ಈ ಬೈಕುಗಳ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 80-120 ಕಿ.ಮೀಗಳಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಪೂರ್ತಿಯಾಗಿ ಚಾರ್ಜ್ ಆದ ನಂತರ 150 ಕಿ.ಮೀಗಳವರೆಗೆ ಚಲಿಸಲಿದೆ. ಕೆಎಂ 3000 ಬೈಕ್, ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಆಗಿದ್ದರೆ, ಕೆಎಂ 4000 ಇ-ಸ್ಟ್ರೀಟ್ ಬೈಕ್ ಆಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಕಬೀರಾ ಮೊಬಿಲಿಟಿ ಕಂಪನಿಯು 2018ರಿಂದ ಎಲೆಕ್ಟ್ರಿಕ್ ಬೈಕುಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ಈ ವರ್ಷ ಅನೇಕ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಜನಪ್ರಿಯವಾಗಲು ಬಯಸಿದೆ. ಇದಕ್ಕಾಗಿ ಕಂಪನಿಯು ಇ-ಕಾಮರ್ಸ್ ಹಾಗೂ ಡೀಲರ್'ಶಿಪ್'ಗಳನ್ನು ಅವಲಂಬಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಕಬೀರಾ ಮೊಬಿಲಿಟಿ ಕಂಪನಿಯು ಮುಂಬರುವ ದಿನಗಳಲ್ಲಿ ತನ್ನ ಮಾರಾಟಗಾರರನ್ನು ದೇಶಾದ್ಯಂತ ವಿಸ್ತರಿಸಲು ಬಯಸಿದೆ. ಭವಿಷ್ಯದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬೈಕುಗಳನ್ನು ಬಿಡುಗಡೆಗೊಳಿಸಲು ಬಯಸಿದೆ. ಗೋವಾದಲ್ಲಿ ಹೆಡ್ ಆಫೀಸ್ ಹೊಂದಿರುವ ಕಂಪನಿಯು ಗೋವಾ ಹಾಗೂ ಕರ್ನಾಟಕದ ಧಾರವಾಡದಲ್ಲಿ ವಾಹನಗಳನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಬೀರಾ ಎಲೆಕ್ಟ್ರಿಕ್ ಬೈಕ್

ಕಂಪನಿಯು ಸದ್ಯಕ್ಕೆ ಕೈಗೆಟುಕುವ ಬೆಲೆಯ ಸುಸ್ಥಿರ ಎಲೆಕ್ಟ್ರಿಕ್ ಬೈಕುಗಳನ್ನು ಉತ್ಪಾದಿಸುವತ್ತ ಗಮನ ಹರಿಸಿದೆ. ಕಂಪನಿಯ ಆರ್ ಅಂಡ್ ಡಿ ತಂಡವು ಹೊಸಉತ್ಪನ್ನಕ್ಕಾಗಿ 2 ವರ್ಷ ಸಂಶೋಧನೆ ನಡೆಸಿದೆ. ಕಂಪನಿಯ ಹೊಸ ಬೈಕುಗಳು ಎಷ್ಟರ ಮಟ್ಟಿಗೆ ಜನಪ್ರಿಯವಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Kabira Mobility to launch electric bike soon in Indian market. Read in Kannada.
Story first published: Monday, February 8, 2021, 13:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X