ಪ್ರತಿ ಚಾರ್ಜ್‌ಗೆ 100ಕಿ.ಮೀ ಮೈಲೇಜ್ ಹೊಂದಿರುವ ಬಜೆಟ್ ಇವಿ ಬೈಕ್ ಬಿಡುಗಡೆ ಮಾಡಿದ ಕೊಮಾಕಿ
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು ವಿವಿಧ ಮಾದರಿಯ ಹೊಸ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಕೊಮಾಕಿ ಕಂಪನಿಯು ಸಹ ವಿವಿ ಎಲೆಕ್ಟ್ರಿಕ್ ವಾಹನಗಳೊಂದಿಗೆ ಆಟೋ ಉದ್ಯಮದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಇವಿ ವಾಹನ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ.

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ದೆಹಲಿ ಮೂಲದ ಕೊಮಾಕಿ ಕಂಪನಿಯು ಕೂಡಾ ವಿವಿಧ ಮಾದರಿಯ ಮೂರು ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜೊತೆಗೆ ಒಂದು ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದೆಹಲಿಯಲ್ಲಿ ಇತ್ತೀಚೆಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಎಂಎಕ್ಸ್3 ಎನ್ನುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಸಾಮಾನ್ಯ ಮಾದರಿಯ 125 ಸಿಸಿ ಬೈಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಎಂಎಕ್ಸ್3 ಇವಿ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ವಿವಿಧ ರೈಡಿಂಗ್ ಮೋಡ್‌ಗಳಿಗೆ ಅನುಗುಣವಾಗಿ 85 ಕಿ.ಮೀ ನಿಂದ 100 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಇವಿ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 95 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಹೊಸ ಬೈಕ್ ಮಾದರಿಯು ಒಂದು ಬಾರಿ ಪೂರ್ಣ 3 ರಿಂದ ನಾಲ್ಕು ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಒಂದು ಬಾರಿ ಚಾರ್ಜಿಂಗ್ ಮಾಡಲು 1.5 ಯುನಿಟ್ ವಿದ್ಯುತ್ ಬಳಕೆ ಮಾಡುತ್ತದೆ.

ಹೀಗಾಗಿ ಒಂದು ಬಾರಿ ಚಾರ್ಜ್ ಮಾಡಲು ವಿವಿಧ ಪ್ರದೇಶಕ್ಕೆ ಮತ್ತು ಯುನಿಟ್ ದರಗಳಿಗೆ ಅನುಗುಣವಾಗಿ ಗರಿಷ್ಠ ರೂ.20 ವೆಚ್ಚ ಮಾಡಿದ್ದಲ್ಲಿ 100 ಕಿ.ಮೀ ಮೈಲೇಜ್ ಹಿಂಪಡೆದುಕೊಳ್ಳಬಹುದಾಗಿದ್ದು, ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಉಳಿತಾಯವಾಗಲಿದೆ.

ಇನ್ನು ಕೊಮಾಕಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೊಮಾಕಿ ಟಿಎನ್95 ಸ್ಕೂಟರ್, ಕೊಮಾಕಿ ಎಂ5 ಬೈಕ್ ಮತ್ತು ಕೊಮಾಕಿ ಎಸ್ಇ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕೊಮಾಕಿ ಟಿಎನ್95 ಸ್ಕೂಟರ್ ಮಾದರಿಯು ಕಂಪನಿಯು ಹೈ ಎಂಡ್ ಪ್ರೀಮಿಯಂ ಮಾದರಿಯಾಗಿದೆ.

ಹಾಗೆಯೇ ಕೊಮಾಕಿ ಎಸ್ಇ ಸ್ಕೂಟರ್ ಮಾದರಿಯು ಕೂಡಾ ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಭಾರೀ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಸದ್ಯ ಕೆಲವೇ ನಗರಗಳಲ್ಲಿ ಮಾತ್ರ ಮಾರಾಟ ಹೊಂದಿರುವ ಕಂಪನಿಯು ಶೀಘ್ರದಲ್ಲೇ ಪ್ರಮುಖ ನಗರಗಳಲ್ಲಿ ವಾಹನ ಮಾರಾಟಕ್ಕೆ ಸಿದ್ದವಾಗುತ್ತಿದೆ.


Click it and Unblock the Notifications








