ಲಾಕ್‌ಡೌನ್ ಹಿನ್ನಲೆಯಲ್ಲಿ ಬೈಕ್‌ಗಳ ವಾರಂಟಿ ವಿಸ್ತರಿಸಿದ ಕೆಟಿಎಂ ಮತ್ತು ಹಸ್ಕ್‌ವರ್ನಾ
ಭಾರತದಲ್ಲಿ ಬಜಾಜ್ ಆಟೋ ಕಂಪನಿಯೊಂದಿಗೆ ಸಹಭಾಗೀತ್ವ ಹೊಂದಿರುವ ಕೆಟಿಎಂ ಮತ್ತು ಹಸ್ಕ್‌ವರ್ನಾ ಕಂಪನಿಗಳು ತಮ್ಮ ವಿವಿಧ ದ್ವಿಚಕ್ರ ವಾಹನಗಳ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ಹೆಚ್ಚಿಸಿದ್ದು, ಲಾಕ್‌ಡೌನ್ ಅವಧಿಯಲ್ಲಿ ಮುಗಿದುಹೋಗಿರುವ ವಾರಂಟಿಗಳನ್ನು ಮುಂದಿನ ಎರಡು ತಿಂಗಳ ಅವಧಿಗೆ ವಿಸ್ತರಿಸಿದೆ.

ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಳ್ಳಲಿರುವ ವಾಹನಗಳ ವಾರಂಟಿ ಅವಧಿಯನ್ನು ಬಹುತೇಕ ವಾಹನ ತಯಾಕರ ಕಂಪನಿಗಳು ವಿಸ್ತರಣೆ ಮಾಡಿದ್ದು, ಹೊಸ ವಾಹನಗಳ ನಿಗದಿತ ಅವಧಿಯ ಸೇವೆಗಳನ್ನು ಪಡೆಯಲು ಲಾಕ್‌ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಲಾಗುತ್ತಿದೆ. ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ.

ಆದರೆ ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳಲಿರುವ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳದ ವಾಹನಗಳ ವಾರಂಟಿ ಆಫರ್ ಮುಗಿದುಹೋಗಲಿದ್ದು, ವಾರಂಟಿ ಅವಧಿ ಮುಕ್ತಾಯದಿಂದ ಉಚಿತ ಸೇವೆಗಳನ್ನು ಕಳೆದುಕೊಳ್ಳಲಿರುವ ಗ್ರಾಹಕರಿಗೆ ಕೆಟಿಎಂ ಮತ್ತು ಹಸ್ಕ್‌ವರ್ನಾ ಸೇರಿದಂತೆ ಬಹುತೇಕ ವಾಹನ ತಯಾರಕ ಕಂಪನಿಗಳು ವಾರಂಟಿ ವಿಸ್ತರಿಸಿ ಮಹತ್ವದ ನಿರ್ಧಾರ ಪ್ರಕಟಿಸಿವೆ.

ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ವಾರಂಟಿ ಮುಕ್ತಾಯವಾಗುವುದರಿಂದ ಗ್ರಾಹಕರ ಸೇವೆಗಳು ಕಡಿತವಾಗುವುದನ್ನು ತಪ್ಪಿಸಲು ಗ್ರಾಹಕರಿಗೆ ಹೆಚ್ಚುವರಿಯಾಗಿ ಎರಡು ತಿಂಗಳ ಕಾಲ ವಾರಂಟಿ ಅವಧಿಯನ್ನು ಘೋಷಿಸಲಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯಗೊಳ್ಳಬೇಕಿರುವ ಹೊಸ ಕಾರುಗಳ ವಾರಂಟಿ ಅವಧಿಯನ್ನು ಜುಲೈ 31ರ ತನಕ ಮುಂದೂಡಲಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ವಾರಂಟಿ ಮುಕ್ತಾಯಗೊಳ್ಳುವುದನ್ನು ತಪ್ಪಿಸಲು ವಾರಂಟಿ ವಿಸ್ತರಿಸಲಾಗಿದೆ. ವಾರಂಟಿ ಅವಧಿ ವಿಸ್ತರಣೆಯಾಗಿರುವುದರಿಂದ ವಾರಂಟಿ ಪ್ಯಾಕೇಜ್‌ನಲ್ಲಿರುವ ಸೇವೆಗಳನ್ನು ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಪಡೆದುಕೊಳ್ಳಬಹುದಾಗಿದ್ದು, ವಾರಂಟಿ ಅವಧಿಯನ್ನು ವಿಸ್ತರಿಸಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನು ಪರ್ಫಾಮೆನ್ಸ್ ಬೈಕ್ ಮಾದರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರಿಯಾದ ಕೆಟಿಎಂ ಕಂಪನಿಯು ತನ್ನ ಸಹಭಾಗಿತ್ವದ ಕಂಪನಿಯಾದ ಬಜಾಜ್ ಆಟೋ ಜೊತೆಗೂಡಿ ಹೊಸ ಟ್ವಿನ್ ಸಿಲಿಂಡರ್ ಎಂಜಿನ್ ಪ್ರೇರಿತ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳ ಅಭಿವೃದ್ದಿಗೆ ಮುಂದಾಗಿದ್ದು, ಹೊಸ ಯೋಜನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 125 ಆರ್‌ಸಿ 200, ಆರ್‌ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಜೊತೆಗೆ 490ಸಿಸಿ ವಿಭಾಗದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

390ಸಿಸಿ ನಂತರ 790ಸಿಸಿ ಬೈಕ್ ಮಾದರಿಗಳನ್ನು ಹೊಂದಿರುವ ಕೆಟಿಎಂ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ 490ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ಯೋಜನೆಗೆ ಪೂರಕವಾಗಿ ಈಗಾಗಲೇ ಪುಣೆಯಲ್ಲಿರುವ ಬಜಾಜ್ ಆಟೋ ಬೈಕ್ ಉತ್ಪಾದನಾ ಘಟಕದಲ್ಲಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮಾದರಿಗಳಿಗೆ ಟ್ವಿನ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಿದೆ.


Click it and Unblock the Notifications








