ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ 2021ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಕೆಟಿಎಂ ಕಳೆದ ತಿಂಗಳು 4,454 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

2021ರ ಆಗಸ್ಟ್ ತಿಂಗಳಿನಲ್ಲಿ ಕೆಟಿಎಂ ಕಂಪನಿಯು 4,389 ಯೂನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಾಸಿಕ ಮಾರಾಟದಲ್ಲಿ ಶೇ.1.48 ರಷ್ಟು ಹೆಚ್ಚಳವನ್ನು ಕಂಡಿದೆ. ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಮಾರಾಟದ ವಿಷಯದಲ್ಲಿ, ಕಂಪನಿಯ ಮಾರಾಟವು ತೀವ್ರವಾಗಿ ಕುಸಿತವನ್ನು ಕಂಡಿದೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಟಿಎಂ ಕಂಪನಿಯು 7,377 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು 2021ರ ಸೆಪ್ಟೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.39.62 ರಷ್ಟು ಕುಸಿತವನ್ನು ಕಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಕೆಟಿಎಂ 200 ಸರಣಿಯ(ಡ್ಯೂಕ್ ಮತ್ತು ಆರ್‌ಸಿ) ಬಗ್ಗೆ ಹೇಳುವುದಾದರೆ, 2021ರ ಸೆಪ್ಟೆಂಬರ್ ತಿಂಗಳಿನಲ್ಲಿ 2,326 ಯುನಿಟ್‌ಗಳನ್ನು ಮಾರಾಟ ಮಾಡಿತು, ಆದರೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ತಿಂಗಳಿನಲ್ಲಿ 2,842 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.18.16 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಇನ್ನು ಕೆಟಿಎಂ 250 ಡ್ಯೂಕ್ ಮತ್ತು ಆರ್‌ಸಿ 250 ಬಗ್ಗೆ ಹೇಳುವುದಾದರೆ, ಕಳೆದ ತಿಂಗಳು ಈ ಮಾದರಿಗಳ 1,173 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಟಿಎಂ ಕಂಪನಿಯು ಕೆಟಿಎಂ 250 ಡ್ಯೂಕ್ ಮತ್ತು ಆರ್‌ಸಿ 250 ಮಾದರಿಗಳ 1,126 ಯೂನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,4.17 ಹೆಚ್ಚಳವಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಕೆಟಿಎಂ 125 ಸರಣಿಯ ಹೆಸರು, ಇದರಲ್ಲಿ ಡ್ಯೂಕ್ 125 ಮತ್ತು ಆರ್‌ಸಿ 125 ಮಾದರಿಗಳಿವೆ. ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಕೆಟಿಎಂ 125 ಸರಣಿಯ 582 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 2,217 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಳಿಸಿದರೆ ಶೇ.73.75 ರಷ್ಟು ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಈ ಪಟ್ಟಿಯಲ್ಲಿ ಕೊನೆಯದಾಗಿ ಕೆಟಿಎಂ 390 ಸರಣಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ 390 ಡ್ಯೂಕ್, ಅಡ್ವೆಂಚರ್ ಮತ್ತು ಆರ್‌ಸಿ 390 ಸೇರಿವೆ. ಕಳೆದ ತಿಂಗಳು ಕಂಪನಿಯು 90 ಸರಣಿಯ ಒಟ್ಟು 373 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 1,192 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,68.71 ರಷ್ಟು ಕುಸಿತವಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಮತ್ತೊಂದೆಡೆ, ಕಂಪನಿಯ ರಫ್ತುಗಳ ಬಗ್ಗೆ ಹೇಳುವುದಾದರೆ, ಕಳೆದ ತಿಂಗಳು ಕೆಟಿಎಂ ಇಂಡಿಯಾ ಒಟ್ಟು 3,693 ಯುನಿಟ್ ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. ಇನ್ನು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 2,856 ಯೂನಿಟ್ ಗಳನ್ನು ರಫ್ಟು ಮಾಡಲಾಗಿತ್ತು, ಇದನ್ನು ಕಳೆದ ತಿಂಗಳ ರಫ್ತಿಗೆ ಶೇ.29.31 ರಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಕೆಟಿಎಂ ತನ್ನ ಬಹುನಿರೀಕ್ಷಿತ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳನ್ನು ಭಾರತೀಯ ಮಾರುಕಟ್ತೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕೆಟಿಎಂ ಆರ್‌ಸಿ 200 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.09 ಲಕ್ಷಗಳಾದರೆ, ಕೆಟಿಎಂ ಆರ್‌ಸಿ 125 ಬೈಕಿನ ಬೆಲೆಯು ರೂ.1.82 ಲಕ್ಷಗಳಾಗಿದೆ. ಕೆಟಿಎಂ ತನ್ನ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳ ಖರೀದಿಗಾಗಿ ಅಧಿಕೃತ ಕೆಟಿಎಂ ಡೀಲರ್‌ಶಿಪ್‌ಗಳು ಬುಕ್ಕಿಂಗ್ ಆರಂಭಿಸಿದೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕ್ಕೊಳ್ಳಬಹುದು.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಕೆಟಿಎಂ ಬೈಕ್‌ಗಳು ಹೊಸ ಚಾಸಿಸ್, ಕ್ಲಾಸ್ ಲೀಡಿಂಗ್ ಕಾರ್ಯಕ್ಷಮತೆ, ನವೀಕರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ಗ್ರ್ಯಾಂಡ್ ಪ್ರಿಕ್ಸ್-ಪ್ರೇರಿತ ಸ್ಟೈಲಿಂಗ್‌ನೊಂದಿಗೆ ಪ್ರಮುಖ ಅಪ್‌ಡೇಟ್ ನೀಡಲಾಗಿದೆ. ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಅನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಟಿಎಂ ಇಂಡಿಯಾ ಹೇಳಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಇದರಲ್ಲಿ ಹೊಸ ಕೆಟಿಎಂ ಆರ್‌ಸಿ 200 ಬೈಕ್ ಡೀಲರ್ ಬಳಿ ಕಾಣಿಸಿಕೊಂಡಿದೆ. 2022ರ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ ಎಂದು ನಿರೀಕ್ಷಿಸುತ್ತೇವೆ, ಇದರಿಂದ ಶೀಘ್ರದಲ್ಲೇ ಕೆಟಿಎಂ ಬೈಕ್‌ಗಳ ವಿತರಣೆಯನ್ನು ಪ್ರಾರಂಭಿಸಬಹುದು.

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ನ್ಯೂ ಜನರೇಷನ್ 022ರ ಕೆಟಿಎಂ ಆರ್‌ಸಿ 200 ಬೈಕ್ ಹೊಸ ಹೊಂದಾಣಿಕೆ ಹ್ಯಾಂಡಲ್‌ಬಾರ್‌ಗಳು, ಎಲ್‌ಸಿಡಿ ಡ್ಯಾಶ್‌ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ 9.5 ಲೀಟರ್‌ನಿಂದ 13.7 ಲೀಟರ್‌ಗಳಿಗೆ ಹೆಚ್ಚಳ ಮಾಡಿದ್ದಾರೆ, ಇದರೊಂದಿಗೆ ಹೆಡ್‌ಲ್ಯಾಂಪ್ ಮತ್ತು ದೊಡ್ಡ ಏರ್‌ಬಾಕ್ಸ್ ಅನ್ನು ಪಡೆದುಕೊಂಡಿದೆ. ಇಂಡಿಯಾ-ಸ್ಪೆಕ್ 2022ರ ಕೆಟಿಎಂ ಆರ್‌ಸಿ 200 ಅಂತಾರಾಷ್ಟ್ರೀಯ ಆವೃತ್ತಿಯಂತೆ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ವ್ಯವಸ್ಥೆಯನ್ನು ಒಳಗೊಂಡಿದೆ. ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 200 ಅಪೆಕ್ಸ್ ಬಿಗ್ ಪಿಸ್ಟನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಹೊಸ WP ಅಪೆಕ್ಸ್ ಶಾಕ್ ಅಬ್ಸಾರ್ಬರ್ ಒಳಗೊಂಡಿದೆ,

ಸೆಪ್ಟೆಂಬರ್ ತಿಂಗಳಿನಲ್ಲಿ 4,454 ಬೈಕ್‌ಗಳನ್ನು ಮಾರಾಟ ಮಾಡಿದ KTM India

ಇನ್ನು ಕೆಟಿಎಂ ಆರ್‌ಸಿ 125 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನ ಹಿಂದಿನ ಮಾದರಿಗೆ ಹೋಲಿಸಿದರೆ ಕಡಿಮೆ ಉದ್ದವನ್ನು ಹೊಂದಿದೆ. ಬದಲಾದ ಆಯಾಮಗಳಿಗೆ ಕಾರಣ ಹೊಸ ವಿನ್ಯಾಸ; ಹೊಸ ತಲೆಮಾರಿನ ಆರ್‌ಸಿ ಸರಣಿಯು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ. ಈ ನ್ಯೂ ಜನರೇಷನ್ ಬೈಕ್‌ಗಳು ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

More from DriveSpark

Article Published On: Thursday, October 21, 2021, 10:23 [IST]
English summary
Ktm india model wise sales september 2021 exports details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+