490ಸಿಸಿ ಬೈಕ್ ವಿಭಾಗದಲ್ಲಿ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ ಕೆಟಿಎಂ
ಪರ್ಫಾಮೆನ್ಸ್ ಬೈಕ್ ಮಾದರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರಿಯಾದ ಕೆಟಿಎಂ ಕಂಪನಿಯು ತನ್ನ ಸಹಭಾಗಿತ್ವದ ಕಂಪನಿಯಾದ ಬಜಾಜ್ ಆಟೋ ಜೊತೆಗೂಡಿ ಹೊಸ ಟ್ವಿನ್ ಸಿಲಿಂಡರ್ ಎಂಜಿನ್ ಪ್ರೇರಿತ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳ ಅಭಿವೃದ್ದಿಗೆ ಮುಂದಾಗಿದ್ದು, ಹೊಸ ಯೋಜನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 125 ಆರ್‌ಸಿ 200, ಆರ್‌ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಜೊತೆಗೆ 490ಸಿಸಿ ವಿಭಾಗದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

390ಸಿಸಿ ನಂತರ 790ಸಿಸಿ ಬೈಕ್ ಮಾದರಿಗಳನ್ನು ಹೊಂದಿರುವ ಕೆಟಿಎಂ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ 490ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ.

ಹೊಸ ಯೋಜನೆಗೆ ಪೂರಕವಾಗಿ ಈಗಾಗಲೇ ಪುಣೆಯಲ್ಲಿರುವ ಬಜಾಜ್ ಆಟೋ ಬೈಕ್ ಉತ್ಪಾದನಾ ಘಟಕದಲ್ಲಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮಾದರಿಗಳಿಗೆ ಟ್ವಿನ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಿದೆ.

ಸಿಂಗಲ್ ಸಿಲಿಂಡರ್ ವೈಶಿಷ್ಟ್ಯತೆ ಹೊಂದಿರುವ 390 ಬೈಕ್ ಮಾದರಿಗಳಿಂತಲೂ ಸಾಕಷ್ಟು ಭಿನ್ನತೆ ಹೊಂದಲಿರುವ 490 ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳು 390 ನಂತರ ಅಪ್‌ಗ್ರೆಡ್ ಹೊಂದಲು ಬಯಸುವ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ಡ್ಯೂಕ್, ಆರ್‌ಸಿ, ಸ್ಪೋಟ್ ಮತ್ತು ಅಡ್ವೆಂಚರ್ ಮಾದರಿಗಳು ನಿರ್ಮಾಣಗೊಳ್ಳಲಿವೆ.

ಹೊಸ ಯೋಜನೆ ಕುರಿತಂತೆ ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಕೆಟಿಎಂ ಮುಖ್ಯಸ್ಥ ಸ್ಟೀಫನ್ ಪಿಯರೆ ಅವರು ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳ್ಳಲಿರುವ 490 ಸಿಸಿ ಎಂಜಿನ್ ಸಾಮರ್ಥ್ಯದ ಹೊಸ ಬೈಕ್‌ಗಳು ಭಾರತೀಯ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಎಲ್ಲಾ ಗುಣವೈಶಿಷ್ಟ್ಯತೆ ಹೊಂದಿವೆ ಎಂದಿದ್ದಾರೆ.

ಹೊಸ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿ ಉತ್ಪಾದನೆ ಮಾಡಲಾದ ಮೊದಲ ಬೈಕ್ ಉತ್ಪನ್ನವನ್ನು 2022 ರ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದಿರುವ ಸ್ಟೀಫನ್ ಪಿಯರೆ ಅವರು ಹೊಸ ಬೈಕ್‌ಗಳು 790 ಬೈಕ್ ಮಾದರಿಗಳಿಗೆ ವಿನ್ಯಾಸ ಪಡೆದುಕೊಂಡಿವೆ ಎನ್ನುವ ಮಹತ್ವದ ಸುಳಿವು ನೀಡಿದ್ದಾರೆ.

ಮತ್ತೊಂದು ಪ್ರಮುಖ ವಿಚಾರ ಎಂದರೆ ಕೆಟಿಎಂ ಹೊಸ ಬೈಕ್ ಉತ್ಪಾದನಾ ಘಟಕವನ್ನು ಚೀನಾ ಮಾರುಕಟ್ಟೆಯಲ್ಲಿ ಪಾಲುದಾರ ಕಂಪನಿಯಾದ ಸಿಎಫ್ ಮೊಟೊ ಕೂಡಾ ಬಳಕೆ ಮಾಡಲಿಕೊಳ್ಳಲಿದ್ದು, ಸಿಎಫ್ ಮೊಟೊ ಕಂಪನಿಯ ಭಾರತದಲ್ಲಿನ ಕಾರ್ಯಾಚರಣೆಗೆ ಇದು ಸಹಕಾರಿಯಾಗಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇನ್ನು ಡ್ಯೂಕ್ 790 ಸೂಪರ್ ಬೈಕ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಉತ್ಸುಕವಾಗಿರುವ ಕೆಟಿಎಂ ಕಂಪನಿಯು 790 ಅಡ್ವೆಂಚರ್ ಬೈಕ್ ಮಾದರಿಯನ್ನು ಸಹ ಬಿಡುಗಡೆ ಮಾಡುತ್ತಿದ್ದು, ಹೊಸ ಅಡ್ವೆಂಚರ್ ಬೈಕ್ ಮಾದರಿಯು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಪರ್ಫಾಮೆನ್ಸ್ ಬೈಕ್ ಪ್ರಿಯರ ಬೇಡಿಕೆಯೆಂತೆ ಭಾರತದಲ್ಲಿ ಸೂಪರ್ ಬೈಕ್ ಮಾರಾಟವನ್ನು ಹೆಚ್ಚಿಸುವತ್ತ ಮಹತ್ವದ ಯೋಜನೆ ರೂಪಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ವರ್ಷ ಡ್ಯೂಕ್ 790 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಆಫ್ ರೋಡ್ ಆವೃತ್ತಿಯಾದ 750 ಅಡ್ವೆಂಚರ್ ಬೈಕ್ ಬಿಡುಗಡೆಗೆ ಉತ್ಸುಕವಾಗಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮೂಲಕ ಸೂಪರ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಅಡ್ವೆಂಚರ್ ಟೂರರ್ ಬೈಕ್ ಮಾದರಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಆಫ್ ರೋಡ್ ಜೊತೆಗೆ ದಿನನಿತ್ಯದ ಸವಾರಿಗೂ ಈ ಬೈಕ್‌ಗಳು ಉತ್ತಮವಾಗಿರುವುದೇ ಬೇಡಿಕೆ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.


Click it and Unblock the Notifications








