ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಾಲ್ಕು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ KTM, Honda, Yamaha ಹಾಗೂ Piaggio ಕಂಪನಿಗಳು ಮೈತ್ರಿ ಮಾಡಿಕೊಂಡಿವೆ ಎಂದು ವರದಿಯಾಗಿದೆ. ಈ ಮೈತ್ರಿಯನ್ನು ಈಗ ಔಪಚಾರಿಕಗೊಳಿಸಲಾಗಿದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಈ ಎಲ್ಲಾ ನಾಲ್ಕು ಕಂಪನಿಗಳು ಈಗ ಒಪ್ಪಂದಕ್ಕೆ ಸಹಿ ಹಾಕಿವೆ. ಯಾವ ಕಾರಣಕ್ಕೆ ಈ ನಾಲ್ಕು ಪ್ರಮುಖ ಕಂಪನಿಗಳ ಮಹಾ ಮೈತ್ರಿ ಮಾಡಿ ಕೊಂಡಿವೆ ಎಂಬ ಕುತೂಹಲ ಮೂಡುವುದು ಸಹಜ. ಈ ಲೇಖನದಲ್ಲಿ ಈ ನಾಲ್ಕು ಕಂಪನಿಗಳ ಮೈತ್ರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೋಡೋಣ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕಂಡು ಬರುತ್ತಿರುವ ಏರಿಕೆಯೇ ಇದಕ್ಕೆ ಸಾಕ್ಷಿ. ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಹಲವು ಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಉಂಟಾಗಿದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದೇ ಹೇಳಬಹುದು.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಚಾರ್ಜಿಂಗ್ ಕೇಂದ್ರಗಳಂತಹ ಮೂಲ ಸೌಕರ್ಯಗಳು ಇನ್ನೂ ಎಲ್ಲೆಡೆ ಲಭ್ಯವಿಲ್ಲ ಎಂಬುದು ಸ್ಪಷ್ಟ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೆಲವು ಕಂಪನಿಗಳು ಸಹ ಈ ಕೆಲಸದಲ್ಲಿ ನಿರತವಾಗಿವೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಕೆಲವು ಕಂಪನಿಗಳು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ, ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಒದಗಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದೇ ರೀತಿಯ ಕಾರ್ಯಕ್ಕಾಗಿ ಈ ನಾಲ್ಕು ಕಂಪನಿಗಳು ಮಹಾ ಮೈತ್ರಿ ಮಾಡಿಕೊಂಡಿವೆ. ಈ ಕಂಪನಿಗಳು ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಬಹುದಾದ ಬ್ಯಾಟರಿಗಳನ್ನು ಒದಗಿಸುವ ಬ್ಯಾಟರಿ ಕೇಂದ್ರಗಳನ್ನು ರಚಿಸುವ ಸಲುವಾಗಿ ಮೈತ್ರಿ ಮಾಡಿಕೊಂಡಿವೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಈ ಕಂಪನಿಗಳು ಬದಲಾಯಿಸಬಹುದಾದ ಬ್ಯಾಟರಿಗಳ ಮೋಟಾರ್‌ಸೈಕಲ್ ಒಕ್ಕೂಟವನ್ನು ಮೊದಲು ಯುರೋಪಿಯನ್ ಮಾರುಕಟ್ಟೆಯಲ್ಲಿ ತಂದವು. ಈಗ ಈ ಸೇವೆಯನ್ನು ವಿಶ್ವದ ಇತರ ಭಾಗಗಳಿಗೆ ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಈ ನಾಲ್ಕು ಕಂಪನಿಗಳು ಒಂದು ತಂಡವನ್ನು ರಚಿಸಿವೆ. ಈ ತಂಡವು ಜನರು ಹೆಚ್ಚಾಗಿ ಇರುವ ಹಾಗೂ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಬಳಕೆಯಲ್ಲಿರುವ ಪ್ರದೇಶಗಳನ್ನು ಗುರುತಿಸುತ್ತದೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ನಂತರ ಆ ಪ್ರದೇಶಗಳಲ್ಲಿ ಬದಲಾಯಿಸಬಹುದಾದ ಬ್ಯಾಟರಿ ಕೇಂದ್ರಗಳನ್ನು ಸ್ಥಾಪಿಸಲು ನೆರವಾಗುತ್ತದೆ. ಎಲ್ಲಾ ರೀತಿಯ ಎಲೆಕ್ಟ್ರಿಕ್ ಮೊಪೆಡ್‌, ಎಲೆಕ್ಟ್ರಿಕ್ ಸ್ಕೂಟರ್‌, ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳ ಬ್ಯಾಟರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಮಾಡಲಾಗುತ್ತದೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಈ ಎಲ್ಲಾ ನಾಲ್ಕು ಕಂಪನಿಗಳು ಜನರನ್ನು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಉತ್ತೇಜಿಸುವ ಸಲುವಾಗಿ ಈ ಪ್ರಯತ್ನಕ್ಕೆ ಕೈ ಹಾಕಿವೆ. ಚಾರ್ಜಿಂಗ್ ಕೇಂದ್ರಗಳ ಕೊರತೆಯಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಭಾರತದಂತಹ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣವು ಕಡಿಮೆಯಾಗಿದೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಆದರೆ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣವು ಹಿಂದಿಗಿಂತ ಹೆಚ್ಚಾಗಿದೆ ಎಂಬುದು ಗಮನಾರ್ಹ. ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು KTM, Honda, Yamaha ಹಾಗೂ Piaggio ಕಂಪನಿಗಳು ಮೈತ್ರಿ ಮಾಡಿಕೊಂಡಿವೆ. ಈ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಬದಲಾಯಿಸಬಹುದಾದ ಬ್ಯಾಟರಿ ಕೇಂದ್ರಗಳನ್ನು ಪರಿಚಯಿಸುತ್ತಿವೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ಇದರ ಜೊತೆಗೆ ತಮ್ಮ ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಮೊದಲೇ ಹೇಳಿದಂತೆ ಚಾರ್ಜಿಂಗ್ ಕೇಂದ್ರಗಳ ಕೊರತೆಯಿಂದಾಗಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಕ್ರಮ ಕೈಗೊಳ್ಳುತ್ತಿವೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ದೆಹಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುತ್ತಿವೆ. ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್ ಬಂಕ್ ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸಿದ್ದತೆ ನಡೆಸುತ್ತಿವೆ. ಇವಿ ಚಾರ್ಜಿಂಗ್ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಕೊಂಡ ನಂತರ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಸ್ವಾಪಬಲ್ ಬ್ಯಾಟರಿ ಒದಗಿಸುವ ಸಲುವಾಗಿ ಮಹಾ ಮೈತ್ರಿ ಮಾಡಿಕೊಂಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳು

ದೆಹಲಿ, ಗುಜರಾತ್ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿವೆ. ಈ ನೀತಿಯನ್ವಯ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ. ಜೊತೆಗೆ ರಸ್ತೆ ತೆರಿಗೆಯಿಂದ ವಿನಾಯಿತಿ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಾಗುತ್ತದೆ. ಸ್ಟಾರ್ಟ್ ಅಪ್ ಕಂಪನಿಗಳಿಂದ ಹಿಡಿದು ಖ್ಯಾತ ದ್ವಿಚಕ್ರ ವಾಹನ ಕಂಪನಿಗಳವರೆಗೆ ಹಲವು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಇಂಧನ ಬೆಲೆ ಏರಿಕೆಯು ಸಹ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಂತೆ ಮಾಡಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Major two wheeler companies tie up to provide swappable battery details
Story first published: Wednesday, September 8, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X