ಭಾರತದ ಅತಿ ವೇಗದ ಆರ್‌ಇ ಇಂಟರ್‌ಸೆಪ್ಟರ್ 650 ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್ ತಂಡ!

ಪರ್ಫಾಮೆನ್ಸ್ ಉದ್ದೇಶಗಳಿಗಾಗಿ ಪ್ರತ್ಯೇಕ ವಾಹನಗಳ ಬಳಕೆಯು ಇತ್ತೀಚೆಗೆ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಂತ್ರ ರೇಸಿಂಗ್ ತಂಡವು ತನ್ನದೇ ಆದ ಹೊಸ ತಂತ್ರಜ್ಞಾನಗಳೊಂದಿಗೆ ಸಾಮಾನ್ಯ ವಾಹನಗಳನ್ನೇ ರೇಸಿಂಗ್ ಉದ್ದೇಶಗಳಿಗೆ ಬಳಕೆಗೆ ನೆರವಾಗುವಂತೆ ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ಆಟೋಮೊಟಿವ್ ಉದ್ಯಮದಲ್ಲಿ ಸಾಕಷ್ಟು ಅನುಭವಗಳನ್ನು ಹೊಂದಿರುವ ಮಂತ್ರ ರೇಸಿಂಗ್ ತಂಡವು ಹೈಸ್ಪೀಡ್ ಬೈಕ್ ಮತ್ತು ಟ್ಯೂನಿಂಗ್‌ನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಮಂತ್ರ ರೇಸಿಂಗ್ ತಂಡವು ಇತ್ತೀತೆಗೆ ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಯು ಅಭಿವೃದ್ಧಿಪಡಿಸಿ ಹೊಸ ಸಂಚಲವನ್ನು ಮೂಡಿಸಿದೆ.

ಮಂತ್ರ ರೇಸಿಂಗ್ ಅಭಿವೃದ್ಧಿಪಡಿಸಿರುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಡ್ರೈವ್‌ಸ್ಪಾರ್ಕ್ ತಂಡವು ಅಹ್ವಾಹನದ ಮೇರೆಗೆ ಭಾಗಿಯಾಗಿತ್ತು. ಈ ವೇಳೆ ಅನುಭವಿ ಡ್ರ್ಯಾಗ್ ರೇಸರ್ ಮತ್ತು ಹಿಲ್ ಕ್ಲೈಂಬ್ ಚಾಂಪಿಯನ್ ಬಾಬಾ ಸತಾಗೋಪನ್ ಮತ್ತು ನಾಲ್ಕು ಬಾರಿ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಆದ ಹೇಮಂತ್ ಮುದ್ದಪ್ಪ ಅವರ ನಡೆಸದ ಬೈಕ್ ರೇಸಿಂಗ್ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು.

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಕಾರ್ಯಕ್ಷಮತೆ ಪರೀಕ್ಷಿಸಲು ಮಂತ್ರ ರೇಸಿಂಗ್‌ ತಂಡವು ತನ್ನದೇ ಆದ ಉನ್ನತೀಕರಿಸಿದ ಎಂಜಿನ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಅಳವಡಿಸಿಲಿದ್ದು, ಮಂತ್ರ ರೇಸಿಂಗ್ ಜೋಡಣೆ ಮಾಡಿರುವ ತಾಂತ್ರಿಕ ಅಂಶಗಳೊಂದಿಗೆ ಬೈಕ್ ಕಾರ್ಯಕ್ಷತೆಯಲ್ಲಿ ದುಪ್ಟಟ್ಟು ಹೆಚ್ಚಳವಾಗಲು ಸಹಕಾರಿಯಾಗಿದೆ.

ಭಾರತದ ಅತಿ ವೇಗದ ಆರ್‌ಇ ಇಂಟರ್‌ಸೆಪ್ಟರ್ 650 ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್ ತಂಡ!

ಗ್ರಾಹಕರ ಬೇಡಿಕೆಯೆಂತೆ ಮಂತ್ರ ರೇಸಿಂಗ್ ಕಂಪನಿಯು ಸ್ಟೇಜ್ I ಸ್ಟ್ರೀಟ್, ಸ್ಟೇಜ್ I ಸ್ಟ್ರೀಟ್ ಪ್ಲಸ್, ಸ್ಟೇಜ್ II ಸ್ಪೋರ್ಟ್, ಸ್ಟೇಜ್ II ಸ್ಪೋರ್ಟ್ ಪ್ಲಸ್ ಎಂಬ ನಾಲ್ಕು ಮಾದರಿಯ ರೇಸಿಂಗ್ ಕಿಟ್ ಪ್ಯಾಕೇಜ್‌ಗಳನ್ನು ಅಳವಡಿಸಲಿದ್ದು, ರೇಸಿಂಗ್ ಪ್ಯಾಕೇಜ್ ಅಳವಡಿಕೆ ನಂತರ ಇಂಟರ್‌ಸೆಪ್ಟರ್ 650 ಬೈಕ್ ಕೇವಲ 5.53 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳಬಲ್ಲ ಶಕ್ತಿ ಹೊಂದಿದೆ.

ಕ್ವಾರ್ಟರ್ ಮೈಲಿ 13.93 ಸೆಕೆಂಡುಗಳಲ್ಲಿ 174 ಕಿಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಖಾತ್ರಿಪಡಿಸಲಿದ್ದು, ಅದರಲ್ಲೂ ಹೊಸ ಬೈಕಿ ತೂಕ ಕಡಿತವು ಬೈಕ್ ಪರ್ಫಾಮೆನ್ಸ್ ಅನ್ನು ಉತ್ತಮವಾಗಿ ನಿಭಾಯಿಸಲು ಪ್ರಮುಖ ಕಾರಣವಾಗಿದೆ. ಹೊಸ ಬೈಕಿನ ಕಾರ್ಯಕ್ಷಮತೆ ಅಪ್‌ಗ್ರೇಡ್ ಪ್ಯಾಕೇಜ್‌ಗಳನ್ನು ಖರೀದಿಸಲು ಬಯಸುವ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ವಿವಿಧ ಜಾಲತಾಣಗಳ ಮೂಲಕ ಮಂತ್ರ ರೇಸಿಂಗ್ [email protected] ತಂಡವನ್ನು ಸಂಪರ್ಕಿಸಬಹುದು.

Most Read Articles

Kannada
English summary
Fastest Royal Enfield Interceptor 650 in India is equipped with Mantra Racing’s performance parts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X