Just In
Don't Miss!
- Lifestyle
ಭಾನುವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೀರೋ ಗ್ಲ್ಯಾಮರ್ 100 ಮಿಲಿಯನ್ ಎಡಿಷನ್
ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಗ್ಲ್ಯಾಮರ್ 100 ಮಿಲಿಯನ್ ಎಡಿಷನ್ ಬೈಕನ್ನು ಭಾರತೀಯ ಮಾರುಕಟೆಯಲ್ಲಿ ಬಿಡುಗಡೆಗೊಳಿಸಿದೆ. ಹೀರೋ ಗ್ಲ್ಯಾಮರ್ ಕಂಪನಿಯ 100 ಮಿಲಿಯನ್ ಎಡಿಷನ್ ಸರಣಿಗೆ ಸೇರ್ಪಡೆಗೊಂಡ ಮತ್ತೊಂದು ಮಾದರಿಯಾಗಿದೆ.

ಹೀರೋ ಮೋಟೊಕಾರ್ಪ್ ಇತ್ತೀಚೆಗೆ 100 ಮಿಲಿಯನ್(10 ಕೋಟಿ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಯುಮಿಟ್ ಗಳನ್ನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ 100 ಮಿಲಿಯನ್ ಉತ್ಪಾದನಾ ಮೈಲಿಗಲ್ಲಿನ ಸಂಭ್ರಮಕ್ಕಾಗಿ ಈ ಹೊಸ ಗ್ಲ್ಯಾಮರ್ 100 ಮಿಲಿಯನ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಆಕರ್ಷಕ ಕೆಂಪು ಮತ್ತು ಬಿಳಿ ಡ್ಯುಯಲ್ ಟೋನ್ ಬಣ್ಣ ಸಂಯೋಜನೆಯನ್ನು ಹೊಂದಿರುವ ಹೊಸ ಗ್ಲ್ಯಾಮರ್ 100 ಮಿಲಿಯನ್ ಎಡಿಷನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಪೆಷಲ್ ಎಡಿಷನ್ ಗ್ಲ್ಯಾಮರ್ ಬೈಕ್ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ರೂಪಾಂತರಗಳಲ್ಲಿ ಲಭ್ಯವಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಹೊಸ ಹೀರೋ ಗ್ಲ್ಯಾಮರ್ 100 ಮಿಲಿಯನ್ ಎಡಿಷನ್ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಡ್ರಮ್ ವೆರಿಯೆಂಟ್ ಬೆಲೆಯು ರೂ.73,700 ಗಳಾದರೆ. ಶೇಷ ಬಣ್ಣ ಸಂಯೋಜನೆಯಲ್ಲಿನ ಡಿಸ್ಕ್ ಬ್ರೇಕ್ ವೆರಿಯೆಂಟ್ ಬೆಲೆಯು ರೂ,77,200 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಹೀರೋ ಗ್ಲಾಮರ್ 100 ಮಿಲಿಯನ್ ಲಿಮಿಟೆಡ್ ಎಡಿಷನ್ ಕೆಂಪು ಮತ್ತು ಬಿಳಿ ಡ್ಯುಯಲ್-ಟೋನ್ ಬಣ್ಣ ಸಂಯೋಜನೆಯನ್ನು ಹೊಂದಿದೆ, ಅದು ಕಂಪನಿಯ ಲೋಗೋದ ಬಣ್ಣ ಸಂಯೋಜನೆಗೆ ಹೊಂದಿಕೆಯಾಗುತ್ತದೆ ಮತ್ತು ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು ಸಹಕಾರಿಯಾಗಿರುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಇದರ ಇಂಧನ ಟ್ಯಾಂಕ್‌ನಲ್ಲಿರುವ ‘100 ಮಿಲಿಯನ್ ಲಿಮಿಟೆಡ್ ಎಡಿಶನ್' ಲೋಗೊಗೆ ಪ್ರೀಮಿಯಂ ಟಚ್ ಅನ್ನು ನೀಡಿದೆ. ಈ ಬೈಕಿನ ಮಾಲೀಕರಿಗೆ ತಾನು ಸ್ಪೆಷಲ್ ಎಡಿಷನ್ ನಲ್ಲಿ ಸವಾರಿ ಮಾಡುತ್ತಿದ್ದಾರೆ ಎಂಬುದನ್ನು ಇದು ನೆನಪಿಸುತ್ತದೆ.

ಬ್ಲ್ಯಾಕ್ ಔಟ್ ಎಂಜಿನ್, ಎಕಾಸ್ಟ್, ಮಫ್ಲರ್ ಹೀಟ್ ಶಿಲ್ಡ್ ಮತ್ತು ಅಲಾಯ್ ವ್ಜೀಲ್ ಗಳು ಮಿಂಚಿನ ಸ್ಪೋರ್ಟ್‌ನೆಸ್ ಅನ್ನು ಹೊಂದಿದೆ.ಕಾಸ್ಮೆಟಿಕ್ ನವೀಕರಣಗಳನ್ನು ಹೊರತುಪಡಿಸಿ ಹೀರೋ ಗ್ಲ್ಯಾಮರ್ 100 ಮಿಲಿಯನ್ ಎಡಿಷನ್ ನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಸ್ಪೆಷಲ್ ಎಡಿಷನ್ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಅದೇ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಇನ್ನು ಈ ಹೀರೋ ಗ್ಲ್ಯಾಮರ್ ಬೈಕ್ ಎಲ್ಇಡಿ ಡಿಆರ್ಎಲ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ. ಹೀರೋ ಗ್ಲ್ಯಾಮರ್ ಬ್ರ್ಯಾಂಡ್ ನಿಂದ ಜನಪ್ರಿಯ ಪ್ರೀಮಿಯಂ ಕಮ್ಯೂಟರ್ ಬೈಕ್ ಆಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಶೈನ್ ಮತ್ತು ಎಸ್‌ಪಿ 125 ಬೈಕುಗಳಿಗೆ ಪೈಪೋಟಿ ನೀಡುತ್ತದೆ.