100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಪ್ಯಾಶನ್ ಪ್ರೊ ಬೈಕಿನ ಹೊಸ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಹೀರೋ ಪ್ಯಾಶನ್ ಪ್ರೊ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಮ್ಯೂಟರ್ ಬೈಕ್ ಆಗಿದೆ.

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಹೀರೋ ಪ್ಯಾಶನ್ ಪ್ರೊ ಬೈಕಿನ ಬೆಲೆಯ ಎಕ್ಸ್ ಶೋರೂಂ ಪ್ರಕಾರ ರೂ.67,608 ದಿಂದ ರೂ.69,808 ಗಳಾಗಿದೆ. ಹೊಸ ಟಿವಿಸಿಯಲ್ಲಿ ವಿವರವಾದ ಪ್ಯಾಶನ್ ಪ್ರೊ ಖರೀದಿದಾರರಿಗೆ 'ಚಲೋ ಅಪ್ನಿ ಚಾಲ್' ಎಂಬುವುದನ್ನು ತಿಳಿಸಿದ್ದಾರೆ. ಅಂದರೆ ಸಾಮಾನ್ಯರಿಂದ ದೂರವಿರಲು ಮತ್ತು ತಮ್ಮದೇ ಆದ ದಾರಿಯನ್ನು ಹಿಂಬಾಲಿಸಲು ಹೊಸ ಮಾನದಂಡಗಳನ್ನು ನಿಗದಿಪಡಿಸಿ ಎಂದು ಟಿವಿಸಿಯಲ್ಲಿ ಹೇಳಿದ್ದಾರೆ.

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ತಿಂಗಳ ಆರಂಭದಲ್ಲಿ 10 ಕೋಟಿ ಯುನಿಟ್ ಗಳ ಉತ್ಪಾದನೆಯ ಸಂಭ್ರಮಾಚರಣೆಯಿಂದಾಗಿ ಹೀರೋ ಮೊಟೊಕಾರ್ಪ್ ಸ್ಪೆಷಲ್ ಎಡಿಷನ್ ಅನ್ನು ಪರಿಚಯಿಸಿತು. ಇವು ಎಕ್ಟ್ರೀಮ್ 160 ಆರ್, ಪ್ಯಾಶನ್ ಪ್ರೊ, ಗ್ಲಾಮರ್, ಡೆಸ್ಟಿನಿ 125, ಮತ್ತು ಮೆಸ್ಟ್ರೋ ಎಡ್ಜ್ 110 ಮಾದರಿಗಳಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಬಿಎಸ್-6 ಪ್ಯಾಶನ್ ಪ್ರೊ ಬೈಕ್ ಡ್ರಮ್ ಬ್ರೇಕ್ ಮತ್ತು ಫ್ರಂಟ್ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಹೀರೋ ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ನವೀಕರಿಸಿದ ಹೆಡ್‍‍ಲ್ಯಾಂಪ್‍ ಮತ್ತು ಟೇಲ್‍‍‍ಲೈ‍‍ಟ್‍‍ಗಳನ್ನು ಹೊಂದಿದೆ.

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಹೊಸ ಪ್ಯಾಶನ್ ಪ್ರೊ ಬೈಕಿನಲ್ಲಿ ಟೇಲ್ ವಿಭಾಗವು ಹಿಂದಿನ ಮಾದರಿಗಿಂತ ಹೆಚ್ಚು ನಯವಾಗಿದೆ ಮತ್ತು ಬಾಡಿ ಪ್ಯಾನೆಲ್‍ಗಳು ಆಕರ್ಷಕವಾಗಿದೆ. ಪ್ಯಾಶನ್ ಪ್ರೊ ಬೈಕಿನಲ್ಲಿರುವ ಮಸ್ಕ್ಲರ್ ಫ್ಯೂಯಲ್ ಟ್ಯಾಂಕ್‍ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಪ್ಯಾಶನ್ ಪ್ರೊ ಬೈಕ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಹೀರೋ ಪ್ಯಾಶನ್ ಬೈಕಿ‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದೆ.

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೊಸ ಕ್ಲಸ್ಟರ್ ಮೈಲೇಜ್ ಮತ್ತು ಇಂಧನ ದಕ್ಷತೆಯ ಅಂಕಿ ಅಂಶಗಳನ್ನು ಒಳಗೊಂಡಂತೆ ಹಲವಾರು ಇತರ ಮಾಹಿತಿಗಳನ್ನು ಒದಗಿಸುತ್ತದೆ. ಹೀರೋ ಪ್ಯಾಶನ್ ಬೈಕಿನಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಫ್ರಂಟ್ ಸಸ್ಪೆಂಷನ್ ಅನ್ನು 15 ಎಂಎಂ ಅಷ್ಟು ಹೆಚ್ಚಿಸಿದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಹೊಸ ಬೈಕಿನಲ್ಲಿ ಆಟೋ ಸೈಲ್ ಪಂಕ್ಷನ್ ಅನ್ನು ಹೊಂದಿದೆ. ಇದು ಟ್ರಾಫಿಕ್‍‍ನಲ್ಲಿ ಸುಲಭವಾಗಿ ಸವಾರಿ ಮಾಡಲು ಸಹಕಾರಿಯಾಗಿದೆ. ಪ್ಯಾಶನ್ ಪ್ರೊ ಬೈಕಿನಲ್ಲಿ ಬಿಎಸ್-6, 110 ಸಿಸಿ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

100 ಮಿಲಿಯನ್ ಸಂಭ್ರಮ: ಪ್ಯಾಶನ್ ಪ್ರೊ ಬೈಕಿನ ಟಿವಿಸಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೀರೋ ಪ್ಯಾಶನ್ ಪ್ರೊ ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಹೀರೋ ಪ್ಯಾಶನ್ ಪ್ರೊ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿದೆ.

Article Published On: Monday, February 15, 2021, 12:32 [IST]
English summary
2021 Hero Passion Pro New TVC. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+