ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಜಪಾನ್ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹೋಂಡಾ ಕಂಪನಿಯು ಹೊಸ ಅಡ್ವೆಂಚರ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ.

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಮತ್ತು ಮಾಹಿತಿಯನ್ನು ಹೋಂಡಾ ಕಂಪನಿಯು ಬಹಿರಂಗಪಡಿಸಿಲ್ಲ.ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಂಡಾ ಕಂಪನಿಯು ಎನ್‌ಎಕ್ಸ್200 ಎಂಬ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದ್ದರು. ಇದರಿಂದ ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಹೋಂಡಾ ಎನ್‌ಎಕ್ಸ್200 ಆಗಿರಬಹುದು ಎಂದು ಹೇಳಲಾಗುತ್ತಿದೆ. ಹೋಂಡಾ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಬೈಕ್ ಆಗಿರಬಹುದು. ಹೋಂಡಾ ಕಂಪನಿಯು ಈ ಹೊಸ ಎನ್‌ಎಕ್ಸ್200 ಬೈಕನ್ನು ಆಗಸ್ಟ್ 19 ರಂದು ಬಿಡುಗಡೆ ಮಾಡುವ ಸಾಧ್ಯತೆಗಳಿದೆ.

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಮುಂಬರು ಹೊಸ ಹೋಂಡಾ ಅಡ್ವೆಂಚರ್ ಬೈಕ್ ಹಾರ್ನೆಟ್ 2.0 ಮಾದರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ಹೋಂಡಾ ಎನ್‌ಎಕ್ಸ್200 ಬೈಕಿನ ವಿನ್ಯಾಸ ಮತ್ತು ಸ್ಟೈಲಿಂಗ್ ಅನ್ನು ಹೋಂಡಾ ಸಿಎಕ್ಸ್-02 ಕಾನ್ಸೆಪ್ಟ್ ಮತ್ತು ಸಿಬಿಎಫ್-190 ಟಿಆರ್ ಮಾದರಿಗಳಂತೆ ಇರಬಹುದು.

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಟೀಸರ್ ವೀಡಿಯೋದಲ್ಲಿ, ಹೊಸ ಹೋಂಡಾ ಎನ್‌ಎಕ್ಸ್200 ಬೈಕ್ ಎಲ್ಇಡಿ ಹೆಡ್ ಲೈಟ್ ಮತ್ತು ನಕಲ್-ಗಾರ್ಡ್ ಇಂಟಿಗ್ರೇಟೆಡ್ ಫ್ರಂಟ್ ಟರ್ನ್ ಇಂಡಿಕೇಟರ್ ಗಳನ್ನು ಮುಂಭಾಗದಲ್ಲಿ ಹೊಂದಿದೆ ಎಂದು ತಿಳಿಸುತ್ತದೆ. ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಸೆಮಿ-ಫೇರಿಂಗ್ ವಿನ್ಯಾಸವು ಕಾಣಬಹುದು.

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕ್ ಸ್ಪ್ಲಿಟ್ ಸ್ಟೈಲ್ ಸೀಟುಗಳು ಮತ್ತು ಎರಡು ಪೀಸ್ ಪಿಲಿಯನ್ ಗ್ರ್ಯಾಬ್ ರೇಲ್ ನೀಡುವ ಸಾಧ್ಯತೆಯಿದೆ. ಈ ಮಾದರಿಯು ತನ್ನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಅನ್ನು ಹೋಂಡಾ ಹಾರ್ನೆಟ್ 2.0 ನೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ.

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಇದು ಹೊಸ ಡೈಮಂಡ್ ಫ್ರೇಮ್ ಚಾಸಿಸ್ ಮೇಲೆ 184.4 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಬಹುದು. ಹೋಂಡಾ ಇಕೋ ಟೆಕ್ನಾಲಜಿ (ಎಚ್‌ಇಟಿ) ಯೊಂದಿಗೆ ಹೋಂಡಾದ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್ ಇಂಜೆಕ್ಷನ್ (ಪಿಜಿಎಂ-ಎಫ್‌ಐ) ಸಿಸ್ಟಂ ಅನ್ನು ಹೊಂದಿರಲಿದೆ

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಇದು ಬೈಕಿನ ಮೈಲೇಜ್ ಅನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಈ ಎಂಜಿನ್ 8,200 ಆರ್‌ಪಿಎಂನಲ್ಲಿ 17.2 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ಹೋಂಡಾ ಎನ್‌ಎಕ್ಸ್200 ಬೈಕ್ 17 ಇಂಚಿನ ಅಲಾಯ್ ವ್ಹೀಲ್ ಗಳ ಜೊತೆಗೆ ಫ್ಯಾಟ್ 110 ಎಂಎಂ ಫ್ರಂಟ್ ಮತ್ತು 140 ಎಂಎಂ ಹಿಂದಿನ ಟೈರ್‌ಗಳನ್ನು ಹೊಂದಿರಬಹುದು.

ಇನ್ನು ಈ ಹೊಸ ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿರಬಹುದು.

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವಂಚರ್ ಬೈಕಿನ ಟೀಸರ್ ಬಿಡುಗಡೆ

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಸಿಂಗಲ್ ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಹೊಂದಿರಲಿದೆ. ಹೊಸ ಹೋಂಡಾ ಅಡ್ವೆಂಚರ್ ಬೈಕಿನ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹುರಂಗವಾಗಬಹುದು.

Most Read Articles

Kannada
English summary
Honda NX200 Adventure Bike Teased. Read In Kannada.
Story first published: Monday, August 2, 2021, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X