ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಜನಪ್ರಿಯ ದ್ವಿಚಕ ವಾಹನ ತಯಾರಕ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾವಾ 42 ಬೈಕನ್ನು ನವೀಕರಿಸುವಲ್ಲಿ ನಿರತರಾಗಿದ್ದಾರೆ. ಇದರ ಭಾಗವಾಗಿ ಭಾರತದಲ್ಲಿ ಹೊಸ ಜಾವಾ 42 ಬೈಕ್ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡೆಸಿದೆ. ಈ ಸ್ಪೈ ಚಿತ್ರಗಳಲ್ಲಿ ಕಂಡುಬಂದಂತೆ ಹೊಸ ಜಾವಾ 42 ಬೈಕ್ ಕೆಲವು ನವೀಕರಣಗಳನ್ನು ಒಳಗೊಂಡಿದೆ. ಇದರಲ್ಲಿ ಹೊಸ ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್ ಈ ಎಂಟ್ರಿ ಲೆವೆಲ್ ಜಾವಾ 42 ಬೈಕಿನಲ್ಲಿ ಕಂಡುಬಂದಿದೆ. ಈ ಹೊಸ ವ್ಹೀಲ್ ಗಳನ್ನು ಟ್ಯೂಬ್‌ಲೆಸ್ ಟೈರ್‌ಗಳಿಂದ ಸುತ್ತುವರಿಯಬಹುದು. ಇನ್ನು ಇದರ್ ಬದಲಾವಣೆಗಳು ಕೇವಲ ವ್ಹಿಲ್ ಗಳಿಗೆ ಮಾತ್ರ ಸೀಮಿತವಾಗಿಲ್ಲ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕಿನ ಎಕ್ಸಾಸ್ಟ್ ಪೈಪ್, ಮುಂಭಾಗ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಸೆಟಪ್, ಬ್ಲ್ಯಾಕ್ ಹೆಡ್‌ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ ಹೌಸಿಂಗ್‌ಗಳಂತಹ ಯುನಿಟ್ ಗಳು ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿವೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಸಾಂಪ್ರದಾಯಿಕ ಕ್ರೋಮ್ ಸೆಟಪ್ ಬದಲಿಗೆ ಎಂಜಿನ್ ಮತ್ತು ಗೇರ್ ಬಾಕ್ಸ್ ಸೆಟಪ್ ಅನ್ನು ಸಹ ಬ್ಲ್ಯಾಕ್-ಔಟ್ ಬಣ್ಣದಿಂದ ಕೂಡಿದ್ದು, ಜಾವಾ 42 ಆಲ್-ಬ್ಲ್ಯಾಕ್ ಥೀಮ್ ರೆಟ್ರೊ ಬೈಕಿನಂತೆ ಕಂಡು ಬರುತ್ತಿದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕಿನಲ್ಲಿ ವಿಶೇಷವಾಗಿ ಪಿಲಿಯನ್‌ಗೆ ಸೀಟಿನ ಕೆಳಗಿರುವ ಫೋಮ್‌ನ ಗುಣಮಟ್ಟವನ್ನು ಸುಧಾರಿಸಲು ಜಾವಾ ಮುಂದಾಗಿದೆ. ಆದರೆ ಚಿತ್ರಗಳ ಯಾವುದೇ ಬದಲಾವಣೆಗಳನ್ನು ಕಂಡುಬಂದಿಲ್ಲ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕಿನಲ್ಲಿ ಅದೇ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 42 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿರುವಂತೆಯೇ ಮುಂಭಾಗಕ್ಕೆ 18-ಇಂಚು ಮತ್ತು ಹಿಂಭಾಗಕ್ಕೆ 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕ್ ಆರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ, ಇದರಲ್ಲಿ 2 ಗ್ಲೋಸ್ ಮತ್ತು 4 ಮ್ಯಾಟ್ ಥೀಮ್‌ಗಳಿವೆ. ಇನ್ನು ಈ ಹೊಸ ಜಾವಾ 42 ಬೈಕ್ ಸಿಂಗಲ್-ಚಾನೆಲ್ ಎಬಿಎಸ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್

ಜಾವಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾವಾ 42 ಬೈಕ್ ಹೆಚ್ಚಾಗಿ ಕಾಸ್ಮೆಟಿಕ್ ಅಪ್ಡೇಟ್ ಗಳಿಗೆ ಸೀಮಿತಗೊಳಿಸುವ ನಿರೀಕ್ಷೆಯಿದೆ. ಜಾವಾ 42 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Saturday, January 23, 2021, 17:47 [IST]
English summary
Jawa Forty Two With Black Engine, Black Alloys Spied. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+