ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಪುಣೆ ಮೂಲದ Kinetic ಗ್ರೂಪ್ Luna ಎಂಬ ಜನಪ್ರಿಯ ಹೆಸರನ್ನು ಮತ್ತೆ ಪುನರುಜ್ಜೀವನಗೊಳಿಸಲು ಯೋಜಿಸುತ್ತಿದ್ದೇವೆ ಎಂದು ಕಳೆದ ವರ್ಷ ಘೋಷಿಸಿದ್ದರು, ಇದೀಗ ಈ ಐಕಾನಿಕ್ Luna ಮಾದರಿಯನ್ನು ಎಲೆಕ್ಟ್ರಿಕ್ ಮೊಪೆಡ್ ರೂಪದಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಈ ಹೊಸ Kinetic Luna ಎಲೆಕ್ಟ್ರಿಕ್ ಮೊಪೆಡ್ ಈ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

80-90ರ ದಶಕದ ಜನರಿಗೆ ‘ಚಲ್‌ ಮೇರಿ ಲೂನಾ' ಎಂಬ ಲೂನಾ ದ್ವಿಚಕ್ರ ವಾಹನದ ಜಾಹಿರಾತು ಪರಿಚಯವಿರುತ್ತದೆ. Luna ಹೆಸರು ಕೇಳಿದರೆ ಥಟ್ ಅಂತ ಮನಸ್ಸಿಗೆ ‘ಚಲ್‌ ಮೇರಿ ಲೂನಾ' ಎಂಬ ಜಾಹಿರಾತು ಮನಸ್ಸಿಗೆ ಬರುತ್ತದೆ. ಈ ಜಾಹಿರಾತು ಅಷ್ಟು ಜನಪ್ರಿಯವಾಗಿತ್ತು. Kinetic Luna ಮೊಪೆಡ್ ಅನ್ನು ಸೈಕಲ್‌ ರೀತಿ ಪೆಡಲ್‌ ತುಳಿದು ಚಾಲು ಮಾಡಬೇಕಿತ್ತು. ಆರ್ಥಿಕವಾಗಿ ಮಧ್ಯಮ ವರ್ಗದ ಜನರು ಹೆಚ್ಚಾಗಿ ಬಳಸುತ್ತಿದ್ದರು. ಅದರಲ್ಲಿಯು ಹಳ್ಳಿಗಳಲ್ಲಿ ಲೂನಾ ಭಾರೀ ಜನಪ್ರಿಯತೆ ಪಡೆದಿತ್ತು. ಇದೀಗ Luna ಮಾದರಿಯನ್ನು ಹೊಸ ರೂಪದಲ್ಲಿ ಮತ್ತೊಮ್ಮೆ ರಸ್ತೆಗಿಳಿಯಲು Kinetic ಗ್ರೂಪ್ ಸಜ್ಜಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಆದರೆ ಹೊಸ Luna ಮೊಪೆಡ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತದೆ. Luna ಮೊಪೆಡ್ ಕಾಲಾಂತರದಲ್ಲಿ ಹೊಸ ವಾಹನಗಳ ಮುಂದೆ ಮಂಕಾಗಿ ಮಾರುಕಟ್ಟೆಯಿಂದ ಮಾಯವಾಗಿತ್ತು. ಆದರೆ ದಶಕಗಳ ಬಳಿಕ ಮತ್ತೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ಲೂನಾ ಸಜ್ಜಾಗಿದೆ. ಈ Kinetic ಗ್ರೂಪ್ ತ್ರಿಚಕ್ರ ವಾಹನ ಹಾಗೂ ಇ-ರಿಕ್ಷಾಗಳನ್ನು ಉತ್ಪಾದಿಸುವ ಕೈನೆಟಿಕ್ ಗ್ರೂಪ್ ನೂತನ Luna ವನ್ನು ಮಾರುಕಟ್ಟೆಗೆ ತರಲಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಇನ್ನು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಇದರಿಂದ Kinetic ಕೂಡ ತನ್ನ ಐಕಾನಿಕ್ Luna ಮಾದರಿಯನ್ನು ಎಲೆಕ್ಟ್ರಿಕ್ ಮೊಪೆಡ್ ರೂಪದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಐಕಾನಿಕ್ ಹೆಸರಿನಲ್ಲಿ ಬಿಡುಗಡೆಗೊಳಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ಹೊಂದಿರಬಹುದು.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

Kinetic Luna 1972ರಲ್ಲಿ ಪಿಯಾಜಿಯೊ Piaggio Ciao ನೊಂದಿಗೆ ಕಾರ್ಯಚರಣೆಯನ್ನು ಪ್ರಾರಂಭಿಸಿತು. ಈ Kinetic Luna ಮಾದರಿಯ ಉತ್ಪಾದನೆಯು 2000 ರ ದಶಕದ ಆರಂಭದಲ್ಲಿ ಕೊನೆಗೊಂಡಿತು. ಇದು ಒಂದು ಸಣ್ಣ, 50 ಸಿಸಿ ಮೊಪೆಡ್ ಆಗಿದ್ದು, ಇದನ್ನು ಸವಾರಿ ಮಾಡಲು ಬಹಳ ಸುಲಭವಾಗಿತ್ತು. ಆರಾಮದಾಯಕ ಮತ್ತು ಆರ್ಥಿಕ, ದೈನಂದಿನ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಎಲೆಕ್ಟ್ರಿಕ್ ಲೂನಾ ಮೂಲ ವಿನ್ಯಾಸದ ಆಕರ್ಷಣೆಯನ್ನು ಕೆಲವು =ಮಾರ್ಡನ್ ಸ್ಪರ್ಶಗಳನ್ನು ಸಂರಕ್ಷಿಸುತ್ತದೆ. ಮುಂಬರುವ ಇ-ಮೊಪೆಡ್ ನಲ್ಲಿ 1 kW ಎಲೆಕ್ಟ್ರಿಕ್ ಮೋಟಾರ್‌ ಅನ್ನು ನೀಡಬಹುದು.ಈ ಪವರ್‌ಟ್ರೇನ್ 80 ಕಿಮೀ ವರೆಗಿನ ರೇಂಜ್ ಅನ್ನು ನೀಡುತ್ತದೆ. ಇನ್ನು ಈ Kinetic Luna ಎಲೆಕ್ಟ್ರಿಕ್ ಮೊಪೆಡ್ 25 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. 25 ಕಿ.ಮೀ ಟಾಪ್ ಸ್ಪೀಡ್ ಇರುವದರಿಂಡ ಈ ಎಲೆಕ್ಟ್ರಿಕ್ ಮೊಪೆಡ್ ವಾಹನಕ್ಕೆ ನೋಂದಣಿ ಅಗತ್ಯವಿಲ್ಲ,

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಇದರ ಜೊತೆ ಡ್ರೈವಿಂಗ್ ಲೈಸನ್ಸ್ ಕೂಡ ಅಗತ್ಯವಿಲ್ಲ.Kinetic Luna ಎಲೆಕ್ಟ್ರಿಕ್ ಮೊಪೆಡ್ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಅಂದಾಜು ರೂ.50,000 ಗಳು ಇರಬಹುದು. ಅಲ್ಲದೇ Kinetic Luna ಎಲೆಕ್ಟ್ರಿಕ್ ಮೊಪೆಡ್ ಅನ್ನು commercial ಮತ್ತು personal ಎಂಬ ಎರಡು ವೆರಿಯೆಂಟ್ ಗಳಲ್ಲಿ ಬಿಡುಗಡೆಗೊಳಿಸಬಹುದು.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

commercial ವೆರಿಯೆಂಟ್ ನಲ್ಲಿ ಸ್ಟೇರೆಂಜ್ ಬಾಕ್ಸ್ ಅನ್ನು ಸಹ ನೀಡಬಹುದು. ಇವುಗಳನ್ನು ಹೊರತುಪಡಿಸಿ, ಇದು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ಗಳನ್ನು ಸಹ ನೀಡಬಹುದು, ಇದರಿಂದ ಗ್ರಾಹಕರಿಗೆ ಚಾರ್ಜಿಂಗ್ ಮಾಡಲು ಹೆಚ್ಚು ಅನುಕೂಲಕರವಾಗಿಸುತ್ತದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೆಚ್ಚಾಗಿ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ಗಳನ್ನು ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

ಹೊಸ Kinetic Luna ಎಲೆಕ್ಟ್ರಿಕ್ ಮೊಪೆಡ್ ಮಾದರಿಯು ಎಲೆಕ್ಟ್ರಿಕ್ ಸೆಲ್ಫ್-ಸ್ಟಾರ್ಟ್, ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜರ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ನೀಡಬಹುದು ಎಂದು ನಿರೀಕ್ಷಿಸುತ್ತೇವೆ. Gemopai Miso ಭಾರತದಲ್ಲಿ ಮಾರಾಟವಾಗುತ್ತಿರುವ ಬ್ಯಾಟರಿ ಶಕ್ತಿಯ ಮೂಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಮೊಪೆಡ್ ಆಗಿದೆ.

ಎಲೆಕ್ಟ್ರಿಕ್ Luna ಉತ್ಪಾದನೆಯು ಮಹಾರಾಷ್ಟ್ರದ ಅಹ್ಮದ್‌ನಗರ್ ನಲ್ಲಿರುವ Kinetic ಸಂಸ್ಥೆಯ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. 300 ಎಕರೆಗಳಲ್ಲಿ ಹರಡಿರುವ ಈ ಘಟಕದಲ್ಲಿ ತಲಾ 65,000 ಚದರ ಅಡಿ ವಿಸ್ತೀರ್ಣದ ನಾಲ್ಕು ಶೆಡ್‌ಗಳನ್ನು ಒಳಗೊಂಡಿದೆ. ಈ ಉತ್ಪಾದನಾ ಘಟಕದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಬಗ್ಗಿಗಳನ್ನು ಉತ್ಪಾದಿಸಲಾಗುತ್ತದೆ.

ಎಲೆಕ್ಟ್ರಿಕ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ Kinetic Luna

Kinetic Luna ಎಲೆಕ್ಟ್ರಿಕ್ ಮೊಪೆಡ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೇವಲ ಒಂದು ಪ್ರತಿಸ್ಪರ್ಧಿ ಇರುತ್ತದೆ, ಇದು Gemopai Miso ಆಗಿದೆ. ಈ ಮಾದರಿಗೆ Kinetic Luna ಎಲೆಕ್ಟ್ರಿಕ್ ಮೊಪೆಡ್ ಉತ್ತಮ ಪೈಪೋಟಿಯನ್ನು ನೀಡುತ್ತದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕೈಕ ಮೊಪೆಡ್ ಟಿವಿಎಸ್ ಎಕ್ಸ್‌ಎಲ್ 100, ಆದರೆ ಇದು ಐಸಿ-ಇಂಜಿನ್ ವಾಹನವಾಗಿದೆ. ಇದು ಎಲೆಕ್ಟ್ರಿಕ್ ಮಾದರಿಯಲ್ಲ

Most Read Articles

Kannada
English summary
New kinetic luna electric moped to be launch this year range details
Story first published: Saturday, August 21, 2021, 20:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X