ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ..

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಇದೇ ತಿಂಗಳು 15ರಂದು ಜಾಗತಿಕ ಮಾರುಕಟ್ಟೆಗಳಿಗಾಗಿ ಬಿಡುಗಡೆಗೊಳ್ಳಲಿದ್ದು, ಹೊಸ ಎಲೆಕ್ಟ್ರಿಕ್ ಮಾದರಿಯು ಆಟೋ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಲ್ಲಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಅಗಸ್ಟ್ 15ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿರುವ ಬಿಡುಗಡೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಆಸಕ್ತ ಗ್ರಾಹಕರು ಕೂಡಾ ಭಾಗಿಯಾಗಬಹುದಾಗಿದ್ದು, ಅಧಿಕೃತ ವೆಬ್ ತಾಣದಲ್ಲಿಯೇ ಕಾರ್ಯಕ್ರಮ ಲೈವ್ ವೀಕ್ಷಣೆ ಮಾಡಬಹುದಾಗಿದೆ. ಪ್ರತಿ ಬಾರಿ ಹೊಸ ವಾಹನಗಳ ಬಿಡುಗಡೆ ವೇಳೆ ಮಾಧ್ಯಮ ಸಂಸ್ಥೆಗಳೊಂದಿಗೆ ಮಾತ್ರ ವರ್ಚುವಲ್ ಸಂವಾದದ ಮೂಲಕ ಬಿಡುಗಡೆ ಮಾಡುತ್ತಿದ್ದ ಇತರೆ ವಾಹನ ಕಂಪನಿಗಳಿಂತಲೂ ಭಿನ್ನವಾಗಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕೋವಿಡ್ ಪರಿಣಾಮ ವರ್ಚುವಲ್ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ದಿನದಂದೆ ಅಧಿಕೃತ ಹೆಸರು ಮತ್ತು ತಾಂತ್ರಿಕ ಅಂಶಗಳನ್ನು ಅನಾವರಣಗೊಳಿಸಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಟೀಸರ್ ಚಿತ್ರಗಳ ಮೂಲಕ ಈಗಾಗಲೇ ಹಲವಾರು ಮಾಹಿತಿ ಹಂಚಿಕೊಂಡಿದ್ದು, ಮಾಹಿತಿಗಳ ಪ್ರಕಾರ ಹೊಸ ಸ್ಕೂಟರ್ ಸೀರಿಸ್ ಎಸ್ ಹೆಸರಿನಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಸೀರಿಸ್ ಎಸ್ ಮಾದರಿಯಲ್ಲೇ ಮತ್ತೆರಡು ವೆರಿಯೆಂಟ್ ಪರಿಚಯಿಸಬಹುದಾಗಿದ್ದು, ಎಸ್1 ಮತ್ತು ಎಸ್1 ಪ್ರೊ ವೆರಿಯೆಂಟ್‌ಗಳನ್ನು ನೀಡಬಹುದಾಗಿದೆ. ವೆರಿಯೆಂಟ್‌ಗಳ ಆಧಾರದ ಮೇಲೆ ಬ್ಯಾಟರಿ ಪ್ಯಾಕ್, ಮೈಲೇಜ್ ರೇಂಜ್ ಮತ್ತು ಬೆಲೆಗಳು ನಿರ್ಧಾರಗೊಳ್ಳಲಿವೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಹೊಸ ಇವಿ ಸ್ಕೂಟರಿನಲ್ಲಿ ಓಲಾ ಕಂಪನಿಯು ಪ್ರತಿಸ್ಪರ್ಧಿ ಇವಿ ಸ್ಕೂಟರ್ ಮಾದರಿಗಳಿಂತಲೂ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ನೀಡಿದ್ದು, ಹೊಸ ಸ್ಕೂಟರ್ ಮೈಲೇಜ್, ಫೀಚರ್ಸ್ ಮತ್ತು ಬೆಲೆಯಲ್ಲೂ ಗ್ರಾಹಕರನ್ನು ಸೆಳೆಯಲಿದೆ. ಓಲಾ ಕಂಪನಿಯು ಹೊಸ ಸ್ಕೂಟರ್‌ನಲ್ಲಿ ಆಧುನಿಕ ತಂತ್ರಜ್ಞಾನ ಪ್ರೇರಿತ ಹಲವು ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮುಂಗಡ ಪಾವತಿಸಿದ್ದಾರೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ರೂ. 499 ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ ಕೇವಲ 24 ಗಂಟೆಗಳ ಅವಧಿಯಲ್ಲೇ 1 ಲಕ್ಷ ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದು, ಹೊಸ ಸ್ಕೂಟರ್‌ನಲ್ಲಿ ಓಲಾ ಕಂಪನಿಯು ವೆರಿಯೆಂಟ್‌ಗಳಿಗೆ ಎರಡು ಮಾದರಿಯ ಬ್ಯಾಟರಿ ಪ್ಯಾಕ್ ನೀಡುವ ಸಾಧ್ಯತೆಗಳಿವೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಸಿಂಗಲ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 140 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಡ್ಯುಯಲ್ ಬ್ಯಾಟರಿ ಬ್ಯಾಕ್ಅಪ್ ಹೊಂದಿರುವ ಮಾದರಿಯಿಂದ ಗರಿಷ್ಠ 240 ಕಿ.ಮೀ ಮೈಲೇಜ್ ಪಡೆಯಬಹುದಾಗಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಓಲಾ ಹೊಸ ಸ್ಕೂಟರ್ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹತ್ತು ಹೊಸ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಇದರಲ್ಲಿ ಪ್ಯಾಸ್ಟೆಲ್ ರೆಡ್, ಯೆಲ್ಲೊ, ಬ್ಲ್ಯೂ, ವೈಟ್, ಮೆಟಾಲಿಕ್ ಸಿಲ್ವರ್, ರೋಜ್ ಗೋಲ್ಡ್, ಪಿಂಕ್, ಮ್ಯಾಟೆ ಬ್ಲ್ಯಾಕ್, ಬ್ಲ್ಯೂ ಮತ್ತು ಗ್ರೆ ಬಣ್ಣಗಳ ಆಯ್ಕೆಯು ಪ್ರಮುಖವಾಗಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿರುವ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯದ ಮೇಲೆ ವಿಶೇಷ ಆಸಕ್ತಿ ವಹಿಸಿರುವ ಓಲಾ ಕಂಪನಿಯು ದೇಶದ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ವಿಸ್ತರಿಸುತ್ತಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಎಲೆಕ್ಟ್ರಿಕ್ ವಾಹನಗಳಿಗೆ ಹೋಂ ಚಾರ್ಜರ್ ಸೌಲಭ್ಯ ಹೊರತುಪಡಿಸಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗುತ್ತಿದ್ದು, ಹೈಪರ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಗಂಟೆಗೆ ನೂರಾರು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಒಂದೇ ಅವಧಿಯಲ್ಲೇ ಚಾರ್ಜ್ ಮಾಡಬಹುದಾಗಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಓಲಾ ಕಂಪನಿಯು ಆರಂಭಿಕವಾಗಿ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ಮಹಾನಗರಗಳ ಜೊತೆಗೆ ಆಯ್ದ ಟೈರ್ 1, ಟೈರ್ 2 ನಗರಗಳಲ್ಲಿ ಮಾರಾಟಕ್ಕೆ ಚಾಲನೆ ನೀಡಿಲಿದ್ದು, ತದನಂತರ ಹಂತ-ಹಂತವಾಗಿ ಸ್ಕೂಟರ್ ಮಾರಾಟವನ್ನು ದೇಶಾದ್ಯಂತ ಪ್ರಮುಖ ನಗರಗಳಿಗೆ ವಿಸ್ತರಿಸಲಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭಿಸಿದ ನಂತರ ದೇಶದ ಪ್ರಮುಖ 1 ಸಾವಿರಕ್ಕೂ ಹೆಚ್ಚು ನಗರಗಳಿಂದ ಓಲಾ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಸಲ್ಲಿಕೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಓಲಾ ಸ್ಕೂಟರ್ ಕೇವಲ ನಗರಗಳಿಗೆ ಮಾತ್ರ ಗ್ರಾಮೀಣ ಭಾಗದಲ್ಲೂ ಸದ್ದುಮಾಡಲಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಸದ್ಯ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳ ಬ್ಯಾಟರಿ ಪ್ಯಾಕ್, ಚಾರ್ಜಿಂಗ್ ಸಮಸ್ಯೆ, ಕಡಿಮೆ ಬ್ಯಾಟರಿ ರೇಂಜ್ ಕಾರಣಗಳಿಗೆ ಇವಿ ವಾಹನಗಳು ಕೇವಲ ಮಾಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ವಾಹನಗಳಂತೆ ಜನಪ್ರಿಯತೆ ಸಾಧಿಸಲು ಓಲಾ ನಿರ್ಮಾಣದಂತ ಬಜೆಟ್ ಬೆಲೆಯ ಆಕರ್ಷಕ ಬೆಲೆ ಆಫರ್ ಹೊಂದಿರುವ ಸ್ಕೂಟರ್‌ಗಳ ಅವಶ್ಯವಿದೆ.

ಈ ತಿಂಗಳು 15ರಂದು ಬಿಡುಗಡೆಯಾಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ರಮದಲ್ಲಿ ನೀವು ಕೂಡಾ ಭಾಗಿಯಾಗಿ

ಒಂದರಿಂದ ಒಂದೂವರೆ ಲಕ್ಷಕ್ಕೂ ಅಧಿಕ ಬೆಲೆ ಹೊಂದಿರುವ ಹಲವಾರು ಸದ್ಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಚಾರವಾಗಿ ಗ್ರಾಹಕರನ್ನು ಸೆಳೆಯಲು ವಿಫಲವಾಗುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಅನ್ನು ಕಂಪನಿಯು ರೂ. 1 ಲಕ್ಷದಿಂದ ರೂ.1.20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಮಾಡುತ್ತಿದೆ.

Most Read Articles

Kannada
English summary
Ola electric scooter launch debut on august 15 you can attend the launch event
Story first published: Thursday, August 12, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X