ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಪ್ರಪಂಚದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸೇರಿದೆ. ಪ್ರತಿ ವರ್ಷ ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಇತ್ತೀಚೆಗಷ್ಟೇ 2020 ರಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿತ್ತು. ಈ ಅಂಕಿ ಅಂಶಗಳು ವಾಹನ ಸವಾರರನ್ನು ಬೆಚ್ಚಿ ಬೀಳಿಸುತ್ತವೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಕರೋನಾ ವೈರಸ್ ಹರಡ ಬಾರದು ಎಂಬ ಕಾರಣಕ್ಕೆ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು. ಆದರೂ ಕಳೆದ ವರ್ಷ ಸುಮಾರು 1.20 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಇತರ ಸಂದರ್ಭಗಳಿಗಿಂತ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಕೇಂದ್ರ ಸರ್ಕಾರವು ಅಧಿಕೃತವಾಗಿ ಬಿಡುಗಡೆಗೊಳಿಸಿರುವ ಈ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಭಾರತದಲ್ಲಿ ಪ್ರತಿ ದಿನ ಸರಾಸರಿ 328 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 3.92 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಿಳಿಸಿದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸದಾಗಿ ಬಿಡುಗಡೆಯಾಗುವ ಎಲ್ಲಾ ಕಾರುಗಳಲ್ಲಿ ಕಡ್ಡಾಯವಾಗಿ ಏರ್ ಬ್ಯಾಗ್'ಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರವು ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ. ಕಾರುಗಳಲ್ಲಿ ಅಳವಡಿಸಲಾಗುವ ಏರ್ ಬ್ಯಾಗ್'ಗಳು ಅಪಘಾತಕ್ಕೀಡಾದಾಗ ಪ್ರಯಾಣಿಕರನ್ನು ಸಾವಿನ ದವಡೆಯಿಂದ ಕಾಪಾಡುತ್ತವೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಇದುವರೆಗೂ ಕಾರುಗಳಲ್ಲಿ ಮಾತ್ರ ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಶೀಘ್ರದಲ್ಲೇ ಬೈಕ್ ಹಾಗೂ ಸ್ಕೂಟರ್‌ಗಳಲ್ಲಿಯೂ ಏರ್‌ಬ್ಯಾಗ್‌ಗಳನ್ನು ನೀಡಲಾಗುವುದು. ಇಟಲಿ ಮೂಲದ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ (Piaggio) ಗ್ರೂಪ್ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸಲು ಏರ್‌ಬ್ಯಾಗ್‌ಗಳನ್ನು ಅಭಿವೃದ್ಧಿಪಡಿಸಲು ಆಟೋಮೋಟಿವ್ ಸುರಕ್ಷತೆ ಒದಗಿಸುವ ಆಟೋಲಿವ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ಸುರಕ್ಷತೆಯನ್ನು ಒದಗಿಸುವ ಸಲುವಾಗಿ ಏರ್‌ಬ್ಯಾಗ್‌ಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಈ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಏರ್‌ಬ್ಯಾಗ್‌ಗಳನ್ನು ದ್ವಿಚಕ್ರ ವಾಹನದ ಫ್ರೇಮ್ ನಲ್ಲಿ ಅಳವಡಿಸಲಾಗುವುದು. ಈ ಏರ್‌ಬ್ಯಾಗ್‌ಗಳು ಅಪಘಾತವಾದ ಕೆಲವೇ ಮಿಲಿ ಸೆಕೆಂಡ್‌ಗಳಲ್ಲಿ ತೆರೆದುಕೊಂಡು ವಾಹನ ಸವಾರರ ಪ್ರಾಣ ಉಳಿಸುತ್ತವೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಆಟೋಲಿವ್ ಈಗಾಗಲೇ ಸುಧಾರಿತ ಸಿಮ್ಯುಲೇಶನ್ ಉಪಕರಣಗಳೊಂದಿಗೆ ಇಂತಹ ಏರ್‌ಬ್ಯಾಗ್‌ಗಳ ಆರಂಭಿಕ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. ಕಂಪನಿಯು ತನ್ನ ಉತ್ಪನ್ನಗಳ ಪೂರ್ಣ ಪ್ರಮಾಣದ ಕ್ರ್ಯಾಶ್ ಟೆಸ್ಟ್'ಗಳನ್ನು ಸಹ ನಡೆಸಿದೆ. ಪಿಯಾಜಿಯೊ ಕಂಪನಿಯ ಜೊತೆಗಿನ ಪಾಲುದಾರಿಕೆಯಿಂದ ಆಟೋಲಿವ್ ಕಂಪನಿಯು ಏರ್‌ಬ್ಯಾಗ್ ಅನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಕಂಪನಿಯು ಮುಂಬರುವ ದಿನಗಳಲ್ಲಿ ಇದನ್ನು ವಾಣಿಜ್ಯೀಕರಣಗೊಳಿಸಲಿದೆ. ಈ ಬಗ್ಗೆ ಮಾತನಾಡಿರುವ ಆಟೋಲಿವ್‌ನ ಕಂಪನಿಯ ಸಿಇಒ ಹಾಗೂ ಅಧ್ಯಕ್ಷ ಮೈಕೆಲ್ ಬ್ರಾಟ್, ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಾವು 2030ರ ವೇಳೆಗೆ ವರ್ಷಕ್ಕೆ 1,00,000 ಜೀವಗಳನ್ನು ಉಳಿಸುವ ಗುರಿಯನ್ನು ಹೊಂದಿದ್ದು, ಅದರತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ವ್ಯಾಪಕವಾದ ನಗರೀಕರಣ ಹಾಗೂ ಸುಲಭವಾಗಿ ಕೈಗೆಟಕುತ್ತಿರುವುದರಿಂದ ದ್ವಿಚಕ್ರ ವಾಹನಗಳ ಜನಪ್ರಿಯತೆಯು ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಇದರ ಜೊತೆಗೆಕರೋನಾ ವೈರಸ್ ಹರಡ ಬಹುದು ಎಂಬ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆಯ ಬದಲು ಸ್ವಂತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಇದು ಸಹ ದ್ವಿಚಕ್ರ ವಾಹನಗಳನ್ನು ಅಗ್ಗದ ಸಾರಿಗೆ ಆಯ್ಕೆಯನ್ನಾಗಿ ಮಾಡಿದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಈಗ ಬಿಡುಗಡೆಯಾಗುತ್ತಿರುವ ಸ್ಕೂಟರ್‌ ಹಾಗೂ ಬೈಕ್'ಗಳಲ್ಲಿ ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಂ (ABS) ಆ್ಯಂಟಿ ಸ್ಲಿಪ್ ರೆಗ್ಯುಲೇಷನ್ (ASR) ನಂತಹ ವಿವಿಧ ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ನೀಡಲಾಗುತ್ತದೆ. ಇನ್ನು ಕೆಲವು ದ್ವಿಚಕ್ರ ವಾಹನಗಳಲ್ಲಿ ಟ್ರಾಕ್ಷನ್ ಕಂಟ್ರೋಲ್, ಸ್ಟೆಬಿಲಿಟಿ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಕಾಲ್ ಸಿಸ್ಟಂನಂತಹ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಈ ಎಲ್ಲಾ ಫೀಚರ್ ಗಳು ಸ್ಕೂಟರ್ ಹಾಗೂ ಬೈಕ್ ಸವಾರರಿಗೆ ಅಲ್ಪ ಪ್ರಮಾಣದ ಸುರಕ್ಷತೆ ನೀಡಿದರೆ, ಏರ್‌ಬ್ಯಾಗ್‌ಗಳ ಸೇರ್ಪಡೆಯು ಮತ್ತಷ್ಟು ಸುರಕ್ಷತೆಯನ್ನು ಒದಗಿಸುತ್ತದೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಏರ್ ಬ್ಯಾಗ್ ಅಳವಡಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹೋಂಡಾ ಮೋಟಾರ್ ಸೈಕಲ್ಸ್ ಕಂಪನಿಯು ಕೆಲವು ವರ್ಷಗಳ ಹಿಂದೆ ವಿಶ್ವದಲ್ಲಿ ಮೊದಲ ಬಾರಿಗೆ ಬೈಕಿನಲ್ಲಿ ಏರ್‌ಬ್ಯಾಗ್ ಸಿಸ್ಟಂ ಪ್ರದರ್ಶಿಸಿತು. ಈ ಏರ್‌ಬ್ಯಾಗ್‌ಗಳು ಅಪಘಾತವಾದಾಗ ಸವಾರನಿಗೆ ಹಾನಿಯಾಗದಂತೆ ರಕ್ಷಿಸುತ್ತವೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಇನ್ನು ಪಿಯಾಜಿಯೊ ಕಂಪನಿಯು ತನ್ನ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಪಿಯಾಜಿಯೊ ಕಂಪನಿಯು ಬ್ಯಾಟರಿ ಚಾಲಿತ ಈ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷದ ಆರಂಭದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿತ್ತು. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಟಿಕ್ ಟಾಕ್‌ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸಲಾಗಿತ್ತು.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಒನ್ ಎಲೆಕ್ಟ್ರಿಕ್ ಸ್ಕೂಟರ್ ಕಾಂಪ್ಯಾಕ್ಟ್ ಸ್ಕೂಟರ್ ಆಗಿದ್ದರೂ ಆರಾಮದಾಯಕ ಸವಾರಿಯನ್ನು ನೀಡಲು ಸಮತಟ್ಟಾದ ಹಾಗೂ ವಿಶಾಲವಾದ ಫುಟ್‌ರೆಸ್ಟ್ ಅನ್ನು ಹೊಂದಿದೆ. ಒನ್ ಎಲೆಕ್ಟ್ರಿಕ್ ಸ್ಕೂಟರ್ ಈ ಸೆಗ್ ಮೆಂಟಿನಲ್ಲಿ ಜೆಟ್ ಹೆಲ್ಮೆಟ್ ಅನ್ನು ಸಂಗ್ರಹಿಸಲು ಸಾಕಷ್ಟು ದೊಡ್ಡ ಕಂಪಾರ್ಟ್ಮೆಂಟ್ ಹೊಂದಿರುವ ಏಕೈಕ ಸ್ಕೂಟರ್ ಎಂದು ಹೇಳಲಾಗಿದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಪಿಯಾಜಿಯೊ ತ್ರಿಚಕ್ರ ವಾಹನ ಕಾರ್ಗೊ ಸೆಗ್ ಮೆಂಟಿನಲ್ಲಿ ಪೆಟ್ರೋಲ್ ಆವೃತ್ತಿಯನ್ನು ನೀಡುವ ಏಕೈಕ ಕಂಪನಿಯಾಗಿದೆ. ಸಿಎನ್‌ಜಿ ವಾಹನಗಳಿಗೆ ಹೆಚ್ಚು ಬೇಡಿಕೆ ಇರುವ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಈ ಪೆಟ್ರೋಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಶೀಘ್ರದಲ್ಲೇ ದ್ವಿಚಕ್ರ ವಾಹನಗಳಲ್ಲೂ ಕಾಣಿಸಿಕೊಳ್ಳಲಿವೆ ಜೀವ ರಕ್ಷಕ ಏರ್‌ಬ್ಯಾಗ್‌ಗಳು

ಪಿಯಾಜಿಯೊ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿದೆ. ಇದರ ಭಾಗವಾಗಿ ಕಂಪನಿಯು ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಿದೆ. ಪಿಯಾಜಿಯೊ ಕಂಪನಿಯು ಸದ್ಯಕ್ಕೆ ಬಹುತೇಕ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 725 ಕ್ಕೂ ಹೆಚ್ಚು ವಾಹನ ಮಾರಾಟಗಾರರನ್ನು ಮತ್ತು 1,100 ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳನ್ನು ಹೊಂದಿದೆ.

Most Read Articles

Kannada
English summary
Piaggio and autoliv companies to develop airbags for two wheelers details
Story first published: Wednesday, November 10, 2021, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X