ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿಗಳ ನಡುವಿನ ಪೈಪೋಟಿಯೂ ಹೆಚ್ಚುತ್ತಿದೆ. ಇದರ ನಡುವೆ Bajaj Auto ಕಂಪನಿಯ ಮುಖ್ಯಸ್ಥ ರಾಜೀವ್ ಬಜಾಜ್ ನೀಡಿರುವ ಹೇಳಿಕೆ ಗೊಂದಲ ಸೃಷ್ಟಿಸಿದೆ. ಅವರ ಈ ಹೇಳಿಕೆಗೆ Ola ಕಂಪನಿ ಸಿಇಒ ಭವಿಶ್ ಅಗರ್ವಾಲ್ ತಿರುಗೇಟು ನೀಡಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

Bajaj Auto ಕಂಪನಿಯ ಹೊಸ Pulsar 250 ಬೈಕಿನ ಬಿಡುಗಡೆ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಜೀವ್ ಬಜಾಜ್, ನಾವು BET (Bajaj, Royal Enfield, TVS) ಚಾಂಪಿಯನ್‌ಗಳು ಉತ್ತಮ ದಾಖಲೆಯನ್ನು ಹೊಂದಿದ್ದೇವೆ. ಚಾಂಪಿಯನ್‌ಗಳು ಬೆಳಗಿನ ಉಪಾಹಾರಕ್ಕಾಗಿ OATS (Ola Electric, Ather, Tork Motors, SmartE) ತಿನ್ನುತ್ತೇವೆ ಎಂದು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಈ ಹೇಳಿಕೆ ನೀಡುವ ರಾಜೀವ್ ಬಜಾಜ್ ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆಗೆ Ola Electric ಸಿ‌ಇಒ ಭವಿಶ್ ಅಗರ್ವಾಲ್ ಹಾಗೂ Ather Energy ಕಂಪನಿಯ ಸಿ‌ಇಒ ತರುಣ್ ಮೆಹ್ತಾ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಬಜಾಜ್ ಅವರ ಈ ಹೇಳಿಕೆಗೆ ಭವಿಶ್ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಟ್ವಿಟರ್ ಬಳಕೆದಾರರ ಟ್ವೀಟ್ ಅನ್ನು ಫೈರ್ ಎಮೋಜಿಯೊಂದಿಗೆ ರಿಟ್ವೀಟ್ ಮಾಡಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಫ್ಯಾಕ್ಟರಿಯಿಂದ ಒಂದೇ ಒಂದು ಸ್ಕೂಟರ್ ತೆಗೆಯದೇ ಓಲಾ 90 ಸಾವಿರ ಸ್ಕೂಟರ್ ಮಾರಾಟ ಮಾಡಿದೆ ಎಂಬ ರಾಜೀವ್ ಬಜಾಜ್ ಹೇಳಿಕೆಯನ್ನು ಟ್ವಿಟರ್ ಬಳಕೆದಾರರೊಬ್ಬರು ಲೇವಡಿ ಮಾಡಿದ್ದಾರೆ. Ather ಕಂಪನಿಯು ಜುಲೈ ತಿಂಗಳಿನಲ್ಲಿಯೇ 1,300 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಆದರೆ Bajaj ಕಂಪನಿಯು 2020ರ ಜನವರಿ ತಿಂಗಳಿನಿಂದ 2021ರ ಜುಲೈ ತಿಂಗಳವರೆಗೆ ಕೇವಲ 3,300 ಯುನಿಟ್ Chetak ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡಿದೆ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಇದರಿಂದ Bajaj ಕಂಪನಿಯು ಸ್ಪರ್ಧೆಯಿಂದ ಹೊರಗುಳಿದಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ರಾಜೀವ್ ಬಜಾಜ್ ಹೇಳಿಕೆಗೆ Ather Energy ಸಿಇಒ ತರುಣ್ ಮೆಹ್ತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸ್ಮೈಲ್ ಎಮೋಜಿ ಹಾಕಿರುವ ಅವರು, ಒಪ್ಪಿಕೊಳ್ಳಬೇಕು, ರಾಜೀವ್ ಬಜಾಜ್ ಅವರ OATS ಹಾಗೂ BET ಹೇಳಿಕೆಯು ಇಂದು ನನ್ನ ದಿನವನ್ನು ಮಾಡಿದೆ. ಈ ಉದ್ಯಮದಲ್ಲಿ ಎಂದಿಗೂ ನೀರಸ ಕ್ಷಣವಿಲ್ಲ ವೆಂದು ಟ್ವೀಟ್ ಮಾಡಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಇದೇ ವೇಳೆ Ather Energy ಕಂಪನಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಪ್ರತಿಕ್ರಿಯೆ ನೀಡಿದೆ. ಓಟ್ಸ್ ಪ್ಯಾಕೆಟ್ ಚಿತ್ರದೊಂದಿಗೆ Ather Energy ಟ್ವೀಟ್ ಮಾಡಿ, ಜೀವನವನ್ನು ಕ್ರಿಯಾತ್ಮಕವಾಗಿಸಲು ಹಾಗೂ ಉತ್ತಮಗೊಳಿಸಲು ನಾವು ನಮ್ಮ ಹೊಸ ಉತ್ಪನ್ನಗಳನ್ನು ಆರಂಭಿಸುತ್ತಿದ್ದೇವೆ. OATS ಚಾಂಪಿಯನ್ಸ್‌ಗಾಗಿ ತಜ್ಞರು ಶಿಫಾರಸು ಮಾಡಿದ್ದಾರೆ ಎಂದು ಪೋಸ್ಟ್ ಮಾಡಿದೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಓಲಾ ಸ್ಕೂಟರ್ ಡೆಲಿವರಿ ಬಗ್ಗೆ

ವ್ಯಂಗ್ಯದ ಕಾಮೆಂಟ್ ಹೊರತುಪಡಿಸಿ, ರಾಜೀವ್ ಬಜಾಜ್ ರವರು, ಇದುವರೆಗೂ ಒಂದೇ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿತರಿಸದೇ ಇರುವ ಬಗ್ಗೆ Ola Electric ಕಂಪನಿಗೂ ಟಾಂಗ್ ನೀಡಿದ್ದಾರೆ. ಬುಕ್ಕಿಂಗ್ ಮಾಡಿರುವ ಸ್ಕೂಟರ್ ಗಳ ವಿತರಣೆಗಾಗಿ ಗ್ರಾಹಕರನ್ನು ಕಾಯುವಂತೆ ಮಾಡುವುದು ಸ್ಟಾರ್ಟಪ್‌ಗಳ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಈ ಕಂಪನಿಗಳಿಗೆ ಹೋಲಿಸಿದರೆ ಬಜಾಜ್‌ನಂತಹ ಕಂಪನಿಗಳು ನಗದು ಹರಿವಿನ ಮಾದರಿಯನ್ನು ಅನುಸರಿಸುತ್ತವೆ. Bajaj ಕಂಪನಿಯು 75 ವರ್ಷಗಳಷ್ಟು ಹಳೆಯದಾಗಿದ್ದು, ತನ್ನ ಪ್ರಯಾಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ. ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಆದರೆ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಸಾಂಪ್ರದಾಯಿಕ ವಾಹನಗಳಿಗೆ ಪರ್ಯಾಯವಾಗುವ ಸಾಧ್ಯತೆಗಳಿವೆ. ಇಂಧನ ಬೆಲೆ ಏರಿಕೆಯಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚುತ್ತಿದೆ. ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಯೋಜನೆಗಳಿಂದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೆಚ್ಚಳ ಕಂಡು ಬರುತ್ತಿದೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಆದರೆ ಇವಿ ಬ್ಯಾಟರಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಸೇರಿದಂತೆ ಮೂಲ ಸೌಕರ್ಯವನ್ನು ನಿರ್ಮಿಸುವ ವಿಷಯದಲ್ಲಿ ಇನ್ನೂ ಬಹು ದೂರ ಸಾಗಬೇಕಾಗಿದೆ. ಭಾರತದಲ್ಲಿ ಸಬ್ಸಿಡಿ ಹಾಗೂ ತೆರಿಗೆ ರಿಯಾಯಿತಿಗಳ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಆದರೂ ಜನರು ಎಲೆಕ್ಟ್ರಿಕ್ ವಾಹನ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ದೂರ ಚಲಿಸುವುದಿಲ್ಲ ಎಂಬುದು ಇದರ ಪ್ರಮುಖ ಕಾರಣ. ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದರಿಂದಲೂ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳ ಬಗ್ಗೆ ವ್ಯಂಗ್ಯವಾಡಿದ Bajaj ಕಂಪನಿ ಮುಖ್ಯಸ್ಥ

ಚಾರ್ಜ್ ಮುಗಿದ ನಂತರ ಎಲೆಕ್ಟ್ರಿಕ್ ವಾಹನಗಳನ್ನು ಎಲ್ಲಿ ಚಾರ್ಜ್ ಮಾಡುವುದು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹಲವು ಗಂಟೆಗಳು ಬೇಕಾಗುತ್ತವೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನವನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 3 ರಿಂದ 9 ಗಂಟೆಗಳು ಬೇಕಾಗುತ್ತವೆ. ಆದರೆ ಹಲವಾರು ಜನರು ಇಷ್ಟು ಅವಧಿ ಕಾಯಲು ಬಯಸುವುದಿಲ್ಲ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಇನ್ನೂ ಶೈಶವಾವಸ್ಥೆಯಲ್ಲಿದೆ.

Most Read Articles

Kannada
English summary
Rajiv bajaj comments on electric startup companies creates controversy details
Story first published: Saturday, October 30, 2021, 14:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X