ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ಭಾರತದ ಅತಿದೊಡ್ಡ ಬೈಕ್ ಟ್ಯಾಕ್ಸಿ ಕಂಪನಿಯಾದ ರ್‍ಯಾಪಿಡೋ ತನ್ನ ಸೇವೆಯಲ್ಲಿ 100 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸೇರ್ಪಡೆಗೊಳಿಸಿಕೊಂಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಸೇವೆ ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ಕಂಪನಿಯು ತನ್ನ ಸೇವೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪಡೆಯಲು ಜಿಪ್ ಎಲೆಕ್ಟ್ರಿಕ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಗ್ಗಿಸಲು ಈಗ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ಕ್ಯಾಬ್ ಕಂಪನಿಗಳು ಸಹ ತಮ್ಮ ಸೇವೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆಗೊಳಿಸಿಕೊಳ್ಳುತ್ತಿವೆ. ಈಗ ರ್‍ಯಾಪಿಡೋ ಕಂಪನಿಯು ಸಹ ತನ್ನ ಸೇವೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ರ್‍ಯಾಪಿಡೋ ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುತ್ತದೆ. ರ್‍ಯಾಪಿಡೋ ಕಂಪನಿಯು ದೇಶದಲ್ಲಿ 10 ದಶಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಗ್ರಾಹಕರಿಂದಾಗಿ, ಕಂಪನಿಯು ದೇಶದ ಅತಿದೊಡ್ಡ ಬೈಕ್ ಟ್ಯಾಕ್ಸಿ ಕಂಪನಿಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ಇದರ ಜೊತೆಗೆ ಕಂಪನಿಯು 15ಕ್ಕೂ ಹೆಚ್ಚು ಚಾಲಕ ಪಾಲುದಾರರನ್ನು ಸಹ ಬಳಸಿಕೊಳ್ಳುತ್ತಿದೆ. ರ್‍ಯಾಪಿಡೋ ಕಂಪನಿಯು 2015ರಲ್ಲಿ ಬೈಕ್ ಟ್ಯಾಕ್ಸಿ ಪರಿಕಲ್ಪನೆಯನ್ನು ಭಾರತದಲ್ಲಿ ಆರಂಭಿಸಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ನಗರಗಳ ಮೂಲೆ ಮೂಲೆಗೂ ಸಂಚಾರ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಕಂಪನಿಯನ್ನು ಆರಂಭಿಸಲಾಯಿತು. ಕಂಪನಿಯು ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಪುಣೆ ಸೇರಿದಂತೆ 100ಕ್ಕೂ ಹೆಚ್ಚು ನಗರಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ಲಾಕ್‌ಡೌನ್ ಅವಧಿಯಲ್ಲಿ ರ್‍ಯಾಪಿಡೋ ಕಂಪನಿಯು ಬಿಗ್ ಬಾಸ್ಕೆಟ್, ಬಿಗ್ ಬಜಾರ್, ಸ್ಪೆನ್ಸರ್'ನಂತಹ ಚಿಲ್ಲರೆ ಮಾರಾಟ ಮಳಿಗೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ರ್‍ಯಾಪಿಡೋ ಕಂಪನಿಯು 90ಕ್ಕೂ ಹೆಚ್ಚು ನಗರಗಳಲ್ಲಿ ವಿತರಣಾ ಸೇವೆಗಳನ್ನು ನೀಡುತ್ತದೆ. ವಿತರಣಾ ಸೇವೆಯನ್ನು ಒದಗಿಸಲು ಕಂಪನಿಯು ತನ್ನಲ್ಲಿರುವ 70%ನಷ್ಟು ಚಾಲಕರನ್ನು ಬಳಸಿಕೊಳ್ಳುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ಕಂಪನಿಯು ತನ್ನ ವಿತರಣಾ ಸೇವೆಗಳನ್ನು ವಿಸ್ತರಿಸಲು ಗ್ರೋಫರ್ಸ್, ಡಂಜೊ, ಫ್ರೆಶ್‌ಹೋಮ್‌ ಕಂಪನಿಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ರ್‍ಯಾಪಿಡೋ ಕಂಪನಿಯು ಕಳೆದ ವರ್ಷವಷ್ಟೇ ಆಟೋ ಟ್ಯಾಕ್ಸಿ ಸೇವೆಯನ್ನು ಆರಂಭಿಸಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ರ್‍ಯಾಪಿಡೋ ಕಂಪನಿಯು 25 ನಗರಗಳಲ್ಲಿ ಆಟೋ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದೆ. ಕಂಪನಿಯು ಆಟೋ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದ ಕೇವಲ 5 ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಆಟೋ ಟ್ಯಾಕ್ಸಿ ಸವಾರಿಗಳನ್ನು ಪೂರ್ಣಗೊಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ರ್‍ಯಾಪಿಡೋ ಕಂಪನಿಯು ಆಟೋ ಸೇವೆಗಾಗಿ 70,000ಕ್ಕೂ ಹೆಚ್ಚು ಆಟೋ ಡ್ರೈವರ್‌ಗಳನ್ನು ನೇಮಿಸಿಕೊಂಡಿದೆ. ಮುಂದಿನ ಆರು ತಿಂಗಳಲ್ಲಿ 5 ಲಕ್ಷ ಹೊಸ ಚಾಲಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ರ್‍ಯಾಪಿಡೋ ಕಂಪನಿಯು ಮಹಿಳಾ ಸಬಲೀಕರಣದ ಬಗ್ಗೆಯೂ ಗಮನ ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಸೇವೆಯಲ್ಲಿ ತರಬೇತಿ ಪಡೆದ ಮಹಿಳಾ ಚಾಲಕರನ್ನು ನೇಮಿಸಿಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕವೂ ಬೈಕ್ ಟ್ಯಾಕ್ಸಿ ಸೇವೆ ನೀಡಲಿದೆ ರ್‍ಯಾಪಿಡೋ

ರ್‍ಯಾಪಿಡೋ ಆಟೋ ಟ್ಯಾಕ್ಸಿ ಮೂಲಕ ನಗರ ಸಾರಿಗೆಯಲ್ಲಿ ಸುರಕ್ಷಿತವಾದ ಕೈಗೆಟಕುವ ಬೆಲೆಯ ಸೇವೆಗಳನ್ನು ಒದಗಿಸುತ್ತದೆ. ಹೈದರಾಬಾದ್, ಚೆನ್ನೈ ಹಾಗೂ ದೆಹಲಿಯಂತಹ ನಗರಗಳಲ್ಲಿ ಟ್ಯಾಕ್ಸಿ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕಂಪನಿ ವರದಿ ಮಾಡಿದೆ.

Most Read Articles

Kannada
English summary
Rapido adds 100 electric scooters to its fleet. Read in Kannada.
Story first published: Thursday, March 25, 2021, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X