ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಬೈಕ್ ಟ್ಯಾಕ್ಸಿ ಕಂಪನಿಯಾದ ರ್‍ಯಾಪಿಡೋ ತನ್ನ ಚಾಲಕ ಪಾಲುದಾರರಿಗಾಗಿ ವಿವಿಧ ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ. ಕಂಪನಿಯು ಹೆಲ್ಪ್ ಫಾರ್ ಹೆಲ್ಮೆಟ್ ಹೀರೋಸ್ ಎಂಬ ವಿಶೇಷ ಯೋಜನೆಯನ್ನು ಘೋಷಿಸಿದೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ವಿಮೆ, ಲಸಿಕೆ, ಸಾಲ ಕಾರ್ಯಕ್ರಮ, ವೈದ್ಯಕೀಯ ಸೌಲಭ್ಯ ಸೇರಿದಂತೆ ಚಾಲಕ ಪಾಲುದಾರರಿಗಾಗಿ ಒಟ್ಟು 7 ವಿಶೇಷ ಯೋಜನೆಗಳನ್ನು ರ್‍ಯಾಪಿಡೋ ಘೋಷಿಸಿದೆ. ಈ ವಿಶೇಷ ಯೋಜನೆಯನ್ನು ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಚಾಲಕ ಪಾಲುದಾರರಿಗೆ ನೆರವಾಗಲು ಘೋಷಿಸಲಾಗಿದೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಈ ಯೋಜನೆಯಿಂದ ಸುಮಾರು 1.5 ಮಿಲಿಯನ್ ಚಾಲಕ ಪಾಲುದಾರರು ಹಾಗೂ ಅವರ ಕುಟುಂಬಗಳಿಗೆ ಸಹಾಯವಾಗಲಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಪ್ರಸ್ತುತ ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಬಾಡಿಗೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿದೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಕರೋನಾ ವೈರಸ್ ಹಾವಳಿಯಿಂದಾಗಿ ಅಸಂಖ್ಯಾತ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರ್‍ಯಾಪಿಡೋ ಕಂಪನಿಯು ಹೆಲ್ಪ್ ಫಾರ್ ಹೆಲ್ಮೆಟ್ ಹೀರೋಸ್ ಯೋಜನೆಯನ್ನು ಆರಂಭಿಸಿದೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಕೋವಿಡ್ ವಿಮೆ:

ರ್‍ಯಾಪಿಡೋ ತನ್ನ ಚಾಲಕ ಪಾಲುದಾರರಿಗಾಗಿ ರೂ.117ಗಳ ಆರಂಭಿಕ ಪ್ರೀಮಿಯಂ ಹೊಂದಿರುವ ಕೋವಿಡ್ 19 ವಿಮೆಯನ್ನು ಘೋಷಿಸಿದೆ. ಈ ವಿಮೆಯ ಮೂಲಕ ಚಾಲಕ ಪಾಲುದಾರರು ರೂ.2 ಲಕ್ಷದಿಂದ ರೂ.3 ಲಕ್ಷಗಳವರೆಗೆ ಪ್ರಯೋಜನ ಪಡೆಯಬಹುದು. ಈ ವಿಮೆ ಚಾಲಕ ಪಾಲುದಾರರಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೂ ಅನ್ವಯಿಸುತ್ತದೆ ಎಂಬುದು ಗಮನಾರ್ಹ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಔಷಧ ಖರೀದಿಯಲ್ಲಿ ರಿಯಾಯಿತಿ :

ಅಪೊಲೊ ಫಾರ್ಮಸಿ ಸಹಭಾಗಿತ್ವದಲ್ಲಿ ಚಾಲಕ ಪಾಲುದಾರರಿಗೆ ರಿಯಾಯಿತಿ ದರದಲ್ಲಿ ಔಷಧಿಗಳನ್ನು ನೀಡಲು ರ್‍ಯಾಪಿಡೋ ನಿರ್ಧರಿಸಿದೆ. ದೇಶದಾದ್ಯಂತವಿರುವ ಯಾವುದೇ ಅಪೊಲೊ ಫಾರ್ಮಸಿಯಲ್ಲಿ ರ್‍ಯಾಪಿಡೋ ಗುರುತಿನ ಚೀಟಿ ತೋರಿಸಿ ಈ ರಿಯಾಯಿತಿ ಪಡೆಯಬಹುದು.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಈ ಯೋಜನೆಯಡಿಯಲ್ಲಿ ರ್‍ಯಾಪಿಡೋ ಚಾಲಕ ಪಾಲುದಾರರಿಗೆ ಔಷಧಿ ಹಾಗೂ ಇನ್ನಿತರ ಕೆಲವು ವೈದ್ಯಕೀಯ ವಸ್ತುಗಳು 5%ನಿಂದ 15% ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಸಾಲ:

ತನ್ನ ಪಾಲುದಾರರಿಗೆ ಸಾಲ ಒದಗಿಸಲು ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರರಾಗಲು ರ್‍ಯಾಪಿಡೋ ನಿರ್ಧರಿಸಿದೆ. ಈ ಸಾಲವನ್ನು 1.5%ನಷ್ಟು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಇದರನ್ವಯ ರೂ.8 ಸಾವಿರವರೆಗಿನ ಸಾಲವನ್ನು ಮಾತ್ರ ಪಡೆಯಬಹುದು. ಈ ಸಾಲವನ್ನು ಮೂರು ಮಾಸಿಕ ಕಂತುಗಳಲ್ಲಿ ಮರು ಪಾವತಿಸಬೇಕಾಗುತ್ತದೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ರದ್ದತಿಗಳ ಸಂಖ್ಯೆಯಲ್ಲಿ ಹೆಚ್ಚಳ:

ಗ್ರಾಹಕರ ಬುಕ್ಕಿಂಗ್ ಅನ್ನು ಈ ಹಿಂದೆ ಎರಡು ಬಾರಿ ಮಾತ್ರ ರದ್ದುಗೊಳಿಸಲು ಅವಕಾಶ ನೀಡಲಾಗುತ್ತಿತ್ತು. ರ್‍ಯಾಪಿಡೋ ಈ ಸಂಖ್ಯೆಯನ್ನು ಈಗ ಐದಕ್ಕೆ ಹೆಚ್ಚಿಸಿದೆ. ಗ್ರಾಹಕರು ನಿರ್ದಿಷ್ಟ ಟ್ರಿಪ್ (ಬುಕ್ಕಿಂಗ್) ಅನ್ನು ಸತತವಾಗಿ ಐದು ಬಾರಿ ರದ್ದುಗೊಳಿಸಬಹುದು.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ವಿದ್ಯುತ್ ವಾಹನ ಬಾಡಿಗೆ:

ದೀರ್ಘಾವಧಿ ಹಾಗೂ ಪ್ರತಿಷ್ಠಿತ ಪಾಲುದಾರರ ಆಧಾರದ ಮೇಲೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ಉದ್ದೇಶಿಸಿರುವುದಾಗಿ ರ್‍ಯಾಪಿಡೋ ಕಂಪನಿ ಘೋಷಿಸಿದೆ.

ಚಾಲಕ ಪಾಲುದಾರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ ರ್‍ಯಾಪಿಡೋ

ಬೈಕ್'ಗಳ ಅಸಮರ್ಪಕ ಕಾರ್ಯ ಹಾಗೂ ಸೇವೆಯಲ್ಲಿ ನೆರವು ನೀಡುವುದನ್ನು ಮುಂದುವರಿಸುವುದಾಗಿ ರ್‍ಯಾಪಿಡೋ ಕಂಪನಿ ತಿಳಿಸಿದೆ. ಕರೋನಾ ವೈರಸ್'ನಿಂದ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ಕಂಪನಿ ನೀಡುತ್ತಿರುವ ಈ ಯೋಜನೆಗಳು ತನ್ನ ಚಾಲಕ ಪಾಲುದಾರರಿಗೆ ಖಂಡಿತವಾಗಿಯೂ ನೆರವಾಗಲಿದೆ ಎಂಬುದು ರ್‍ಯಾಪಿಡೋ ಕಂಪನಿಯ ಆಶಾ ಭಾವನೆ.

Most Read Articles

Kannada
English summary
Rapido announces comprehensive care program for its driver partners. Read in Kannada.
Story first published: Saturday, June 26, 2021, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X