ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್ ಅನ್ನು ಇತ್ತೀಚೆಗೆ ಮರು-ಪರೀಕ್ಷಿಸಲಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಕ್ರೂಸರ್ 650 ಬೈಕಿನ ಜೊತೆಗೆ ಮತ್ತೆರಡು ಬೈಕುಗಳಿರುವುದನ್ನು ಕಾಣಬಹುದು. ಆ ಇತರ ಎರಡು ಇತರ 650 ಬೈಕುಗಳು ಕ್ಲಾಸಿಕ್ ಅಥವಾ ಮೆಟಿಯೊರ್ 650 ಆಗಿರುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯ 650 ಟ್ವಿನ್ ಬೈಕುಗಳು ಭಾರತವೂ ಸೇರಿದಂತೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದ ಹಿನ್ನೆಲೆಯಲ್ಲಿ ಕಂಪನಿಯು ಈ ಸೆಗ್ ಮೆಂಟಿನಲ್ಲಿ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಅವುಗಳಲ್ಲಿ 650 ಕ್ರೂಸರ್ ಬೈಕ್ ಸಹ ಸೇರಿದ್ದು, ಈ ಬೈಕ್ ಅನ್ನು ಹಲವಾರು ದಿನಗಳಿಂದ ಪರೀಕ್ಷಿಸಲಾಗುತ್ತಿದೆ.

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ಕ್ರೂಸರ್ 650 ಬೈಕಿನೊಂದಿಗೆ ಕಂಡು ಬಂದ ಇತರ ಎರಡು ಮಾದರಿಗಳ ಬಗ್ಗೆ ಹೇಳುವುದಾದರೆ, ಕ್ಲಾಸಿಕ್ 650 ಬೈಕ್ ವಿಭಿನ್ನ ಸವಾರಿ, ಫುಟ್‌ಪೆಗ್ ಪ್ಲೇಸ್‌ಮೆಂಟ್ ಜೊತೆಗೆ ದೊಡ್ಡದಾದ ಹಾಗೂ ವಿಶಾಲವಾದ ಪಿಲಿಯನ್ ಸೀಟುಗಳನ್ನು ಹೊಂದಿದೆ. ಕ್ರೂಸರ್ 650 ಟ್ವಿನ್ ಎಕ್ಸಾಸ್ಟ್ ಕ್ರೋಮ್ ಫಿನಿಶಿಂಗ್ ಹೊಂದಿದ್ದರೆ, ಇತರ ಎರಡು ಮಾದರಿಗಳು ಕಪ್ಪು ಫಿನಿಶಿಂಗ್ ಹೊಂದಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ವೀಡಿಯೊದಲ್ಲಿ ಕಂಡು ಬರುವ ಈ ಬೈಕುಗಳು 120 - 130 ಕಿ.ಮೀ ವೇಗದಲ್ಲಿ ಸಾಗಿವೆ. 650 ಕ್ರೂಸರ್ ಬೈಕ್ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ಸರ್ಕ್ಯುಲರ್ ಹೆಡ್‌ಲ್ಯಾಂಪ್‌, ರೇರ್ ವೀವ್ ಮಿರರ್‌, ಟಿಯರ್‌ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್‌, ಟರ್ನ್ ಇಂಡಿಕೇಟರ್, ವೈಡ್ ಹ್ಯಾಂಡಲ್‌ಬಾರ್‌ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ಇದರ ಜೊತೆಗೆ ದೊಡ್ಡ ವಿಂಡ್‌ಸ್ಕ್ರೀನ್, ಡ್ಯುಯಲ್ ಮೆಟಾಲಿಕ್ ಎಕ್ಸಾಸ್ಟ್, ವೈಡ್ ರೇರ್ ಫೆಂಡರ್‌ಗಳನ್ನು ನೀಡಲಾಗಿದೆ. ಆರಾಮದಾಯಕ ಸವಾರಿಗಾಗಿ ಫಾರ್ವರ್ಡ್ ಸೆಟ್ ಫುಟ್‌ಪೆಗ್‌ಗಳನ್ನು ನೀಡಲಾಗಿದೆ. ಸ್ಪ್ಲಿಟ್ ಸೀಟುಗಳು ಪಿಲಿಯನ್ ಬ್ಯಾಕ್‌ರೆಸ್ಟ್‌ಗಳನ್ನು ಹೊಂದಿದ್ದು, ಹಿಂಭಾಗದ ಲಗೇಜ್‌ಗಾಗಿ ಪ್ರತ್ಯೇಕ ಬಾರ್'ಗಳನ್ನು ಸಹ ನೀಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ಇನ್ನು ಈ ಬೈಕಿನಲ್ಲಿ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 650 ಟ್ವಿನ್ ಬೈಕುಗಳಲ್ಲಿರುವ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಆದರೆ ಪವರ್ ಹಾಗೂಟಾರ್ಕ್ ಅಂಕಿ ಅಂಶಗಳನ್ನು ಕ್ರೂಸರ್ ಬೈಕಿನ ಅನುಸಾರ ಸರಿಹೊಂದಿಸಬಹುದು.

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

650 ಟ್ವಿನ್ ಬೈಕುಗಳಲ್ಲಿರುವ 648 ಸಿಸಿ ಡ್ಯುಯಲ್ ಸಿಲಿಂಡರ್ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯ ಹೊಸ ಮಾದರಿಗಳಂತೆ ಈ ಬೈಕಿನಲ್ಲಿಯೂ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಂ ನೀಡುವ ಸಾಧ್ಯತೆಗಳಿವೆ. ಇದರ ಜೊತೆಗೆ ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಸ್ಲೀಪರ್ ಕ್ಲಚ್ ಅಸಿಸ್ಟ್ ನೀಡುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ತಲೆಮಾರಿನ ಹಲವಾರು ಬೈಕುಗಳನ್ನು ನಿರಂತರವಾಗಿ ಬಿಡುಗಡೆಗೊಳಿಸಲು ಮುಂದಾಗಿದೆ.ಈ ಚಿತ್ರಗಳನ್ನು ರಾಯಲ್ ಬೆಂಗಳೂರು ರಾಜ್'ರವರಿಂದ ಪಡೆಯಲಾಗಿದೆ.

Most Read Articles

Kannada
English summary
Royal Enfield 650 cruiser bike spied with other two bikes. Read in Kannada.
Story first published: Tuesday, February 23, 2021, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X