ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕ್‌ಗಳನ್ನು ಹೊಸ ಆವೃತ್ತಿಗಳೊಂದಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಟ್ವಿನ್ ಬೈಕ್‌ ಮಾದರಿಗಳಲ್ಲಿ ಸಾಕಷ್ಟು ಹೊಸ ನವೀಕರಣಗಳನ್ನು ಪರಿಚಯಿಸಲಾಗಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಟ್ವಿನ್ 650 ಬೈಕ್ ಮಾದರಿಗಳಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಶೀಘ್ರದಲ್ಲೇ ಹೊಸ ಬೈಕ್‌ಗಳ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಸಾಫ್ಟ್ ಪ್ಯಾನಿಯರ್ಸ್ ನೀಡಿರುವುದು ಗಮನಸೆಳೆಯುತ್ತಿದೆ. ಮೇಕ್ ಇಟ್ ಇವರ್ಸ್ ಆಯ್ಕೆ ಮೂಲಕ ಹೊಸ ಆಕ್ಸೆಸರಿಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಸ್ಟೀಲ್ ಪ್ಯಾನಿಯರ್ಸ್ ಜೊತೆಗೆ ಸಾಫ್ಟ್ ಪ್ಯಾನಿಯರ್ಸ್‌ಗಳನ್ನು ಸಹ ಬಿಡುಗಡೆ ಮಾಡಿರುವುದು ಗ್ರಾಹಕರ ಆಯ್ಕೆ ಹೆಚ್ಚಿಸಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

2021ರ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕ್‌ಗಳು ಹೊಸ ಆಕ್ಸೆಸರಿಸ್ ಪ್ಯಾಕೇಜ್ ಜೊತೆಗೆ ವಿವಿಧ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದ್ದು, ಜಿ‍ಟಿ650 ಕೆಫೆ-ರೇಸರ್ ಬೈಕಿನ ಆರಂಭಿಕ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.2.91 ಲಕ್ಷಗಳಾದರೆ, ಇದರ ಕಸ್ಟಮ್ ಬಣ್ಣದ ಮಾದರಿಗೆ ರೂ.2.99 ಲಕ್ಷಗಳಾಗಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಮಿಸ್ಟರ್ ಕ್ಲೀನ್ ಬಣ್ಣದ ಮಾದರಿಯ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಬಣ್ಣಗಳ ಹೊರತಾಗಿ, ಎರಡು ಬೈಕ್‌ಗಳು ಬ್ರ್ಯಾಂಡ್‌ನ ಮೇಕ್-ಇಟ್-ಯುವರ್ಸ್ ಕಸ್ಟಮೈಸ್ ಕಾರ್ಯಕ್ರಮದ ಭಾಗವಾಗಿದೆ. ಫಾಕ್ಟಿರಿಯಿದಲೇ ಗ್ರಾಹಕರು ತಮ್ಮ ಬೈಕಿನಲ್ಲಿ ತಮಗೆ ಇಷ್ಟವಿರುವಂತಹ ಮಾಡಿಫೈ ಅನ್ನು ಮಾಡಿಸಬಹುದಾಗಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಇದರಲ್ಲಿ ವಿವಿಧ ಸೀಟುಗಳ ಆಕಾರಗಳು, ಟೂರಿಂಗ್ ಮೀರರ್, ಫ್ಲೈಸ್ಕ್ರೀನ್‌ಗಳು ಮತ್ತು ಸಂಪ್ ಗಾರ್ಡ್‌ಗಳು ಮತ್ತು ಇತರ ಉಪಕರಣಗಳನ್ನು ಹೊಂದಿವೆ. ಹೊಸ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳಲ್ಲಿ ಹಿಂದಿನ ಮಾದರಿಗಳಲ್ಲಿ ಇದ್ದ ಅದೇ, 649ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಒಳಗೊಡಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಹೊಸ ಬೈಕಿನ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಇನ್ನು ಎರಡು ಟ್ವಿನ್ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಗ್ಯಾಸ್ ಚಾರ್ಜ್ಡ್ ಶಾಕ್ ಗಳು 5-ಹಂತದ ಹೊಂದಾಣಿಕೆಯೊಂದಿಗೆ ಪ್ರಿ-ಲೋಡ್ ಡ್ಯಾಂಪಿಂಗ್‌ಗಾಗಿ ನಿರ್ವಹಿಸುತ್ತವೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಹೊಸ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಈ ಬೈಕ್‌ಗಳಲ್ಲಿ 18 ಇಂಚಿನ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ. ಎರಡು ಬೈಕ್‌ಗಳ ವಿನ್ಯಾಸವು ಬದಲಾಗದೆ ಉಳಿದಿದೆ. ಇದು ಒಂದೇ ಮಾದರಿಯ ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು, ಟ್ವಿನ್ ಎಕ್ಸಾಸ್ಟ್ ಸೆಟಪ್, ಸಿಂಗಲ್-ಪೀಸ್ ಫ್ಲಾಟ್ ಸೀಟ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

ಹೊಸ ಇಂಟರ್‍‍ಸೆಪ್ಟರ್ 650 ಬೈಕ್ ಉತ್ತಮ ಸೀಟಿಂಗ್ ಪೊಷಿಷನ್ ಅನ್ನು ಹೊಂದಿದೆ. ಇನ್ನು ಕಾಂಟಿನೆಂಟಲ್ ಜಿಟಿ 650 ಅದರ ಉದ್ದವಾದ ಟ್ಯಾಂಕ್ ವಿನ್ಯಾಸ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ಟ್ವಿನ್ 650 ಮೋಟಾರ್‌ಸೈಕಲ್ ಆವೃತ್ತಿಗಳಿಗೆ ಸಾಫ್ಟ್ ಪ್ಯಾನಿಯರ್ಸ್ ಬಿಡುಗಡೆ

2021ರ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಆದರೆ ಈ ಟ್ವಿನ್ ಬೈಕಿನಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ನೀಡಲಾಗಿಲ್ಲ. ಆದರೆ ಕಸ್ಟಮೈಸ್ ಮಾಡಲು ಒಂದು ಆಯ್ಕೆಯನ್ನು ಸಹ ಕಂಪನಿಯು ಒದಗಿಸಿದೆ.

Most Read Articles

Kannada
English summary
Royal Enfield Introduces Soft Panniers For The 650 Twins. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X