ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳು ಭಾರತದಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲಿಯೂ ಮಾರಾಟವಾಗುತ್ತವೆ. ಥೈಲ್ಯಾಂಡ್ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ರಾಯಲ್ ಎನ್‌ಫೀಲ್ಡ್ ಕಂಪನಿಯು ಈಗ ಜಪಾನ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ತನ್ನ ಮೊದಲ ಶೋರೂಂ ಅನ್ನು ಜಪಾನ್‌ನಲ್ಲಿ ತೆರೆದಿದೆ. ಅಲ್ಲಿ ಕಂಪನಿಯು ಐದು ಮಾದರಿಗಳನ್ನು ಮಾರಾಟ ಮಾಡಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಪಿಸಿಐ ಲಿಮಿಟೆಡ್ ಅನ್ನು ಜಪಾನ್‌ನಲ್ಲಿ ತನ್ನ ಅಧಿಕೃತ ಮಾರಾಟಗಾರಗಾಗಿ ಆಯ್ಕೆ ಮಾಡಿಕೊಂಡಿದೆ.

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ಟೋಕಿಯೊದಲ್ಲಿ ಈ ಶೋರೂಂ ತೆರೆಯಲಾಗಿದೆ. ಈ ಶೋರೂಂನಲ್ಲಿ ಬೈಕ್ ಮಾರಾಟದ ಜೊತೆಗೆ ಬಿಡಿಭಾಗಗಳನ್ನು ಮಾರಾಟ ಮಾಡಲಾಗುವುದು. ಜೊತೆಗೆ ಬೈಕುಗಳ ಸರ್ವೀಸ್ ಸಹ ಮಾಡಲಾಗುವುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ವಿಶ್ವದ 60 ದೇಶಗಳಿಗೆ ಬೈಕ್‌ಗಳನ್ನು ರಫ್ತು ಮಾಡುತ್ತದೆ. ಕಂಪನಿಯು ಚೆನ್ನೈ ಹಾಗೂ ಅರ್ಜೆಂಟೀನಾದ ಬ್ಯೂನಸ್ ಐರಿಸ್'ನಲ್ಲಿ ಬೈಕುಗಳನ್ನು ಅಸೆಂಬಲ್ ಮಾಡುತ್ತದೆ.

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ಇದರಿಂದ ಆ ದೇಶಗಳ ಸುತ್ತಮುತ್ತಲಿರುವ ದೇಶಗಳಿಗೆ ಸಮಂಜಸವಾದ ಬೆಲೆಯಲ್ಲಿ ಬೈಕುಗಳನ್ನು ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಜಪಾನ್'ನಲ್ಲಿ ಬುಲೆಟ್ 500, ಕ್ಲಾಸಿಕ್ 500, ಹಿಮಾಲಯನ್ 411 ಸಿಸಿ ಹಾಗೂ ಇಂಟರ್ ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650 ಬೈಕುಗಳನ್ನು ಬಿಡುಗಡೆಗೊಳಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ಮುಂಬರುವ ದಿನಗಳಲ್ಲಿ ಕಂಪನಿಯು ಜಪಾನಿನ ಮಾರುಕಟ್ಟೆಯಲ್ಲಿ ಮತ್ತಷ್ಟು ಬೈಕುಗಳನ್ನು ಬಿಡುಗಡೆಗೊಳಿಸಲು ಬಯಸಿದೆ. ಈ ಬಗ್ಗೆ ಮಾತನಾಡಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯ ಬಿಸಿನೆಸ್ ಹೆಡ್ ವಿಮಲ್ ಸಾಂಬ್ಲಿ, ಜಪಾನ್ ಪ್ರಪಂಚದಾದ್ಯಂತವಿರುವ ಬೈಕ್ ಸವಾರರಿಗೆ ವಿಶೇಷ ಸ್ಥಳವಾಗಿದೆ ಎಂದು ಹೇಳಿದರು.

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ಪಿಸಿಐ ಲಿಮಿಟೆಡ್ ಜೊತೆಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಜಪಾನ್‌ನಲ್ಲಿ ದೊಡ್ಡದಾದ ಹಾಗೂ ಅತ್ಯುತ್ತಮವಾದ ಮೋಟಾರ್‌ಸೈಕಲ್ ಸಮುದಾಯವನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಮಿಟಿಯೊರ್ 350 ಬೈಕ್ ಅನ್ನು ಜಪಾನ್'ನಲ್ಲಿ ಬಿಡುಗಡೆಗೊಳಿಸಿಲ್ಲ. ಕಂಪನಿಯು ಈ ಬೈಕ್ ಅನ್ನು ಭಾರತದಲ್ಲಿಬಿಡುಗಡೆಗೊಳಿಸಿದೆ. ಈ ಬೈಕ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಜಪಾನ್'ನಲ್ಲಿ ಮೊದಲ ಶೋರೂಂ ತೆರೆದ ರಾಯಲ್ ಎನ್‌ಫೀಲ್ಡ್

ಕಂಪನಿಯು ಈಗ ಹೊಸ ಪ್ಲಾಟ್‌ಫಾರಂ ಮೇಲೆ ಹಲವಾರು ಬೈಕುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಶೀಘ್ರದಲ್ಲೇ ಕಂಪನಿಯು ಭಾರತದಲ್ಲಿ ಹೊಸ ಹಿಮಾಲಯನ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಸದ್ಯಕ್ಕೆ ಈ ಬೈಕ್ ಅನ್ನು ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Royal Enfield opens its first showroom in Japan. Read in Kannada.
Story first published: Saturday, January 30, 2021, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X