ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೀಪಾವಳಿಯ ಶುಭ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಪ್ರೀ ಅಪ್ರೂವ್ದ್ ದ್ವಿ ಚಕ್ರ ವಾಹನ ಸಾಲ (SBI ಈಸಿ ರೈಡ್ ಲೋನ್) ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಲು ರೂ. 3 ಲಕ್ಷಗಳವರೆಗೆ ಸಾಲ ಪಡೆಯಬಹುದು.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಈ ಯೋಜನೆಯ ಲಾಭ ಪಡೆಯಲು ಗ್ರಾಹಕರು SBI ಬ್ಯಾಂಕಿನ YONO ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್‌ನ ಎಲ್ಲಾ ಅರ್ಹ ಗ್ರಾಹಕರು ಯಾವುದೇ ಶಾಖೆಗೆ ಭೇಟಿ ನೀಡದೆ ತಮ್ಮ ಮನೆಯಿಂದಲೇ YONO ಅಪ್ಲಿಕೇಶನ್ ಮೂಲಕ ದ್ವಿಚಕ್ರ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎಂದು SBI ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈಸಿ ರೈಡ್ ಲೋನ್ ಅಡಿಯಲ್ಲಿ ಗ್ರಾಹಕರು ಗರಿಷ್ಠ ರೂ. 3 ಲಕ್ಷ ಹಾಗೂ ಕನಿಷ್ಠ ರೂ. 20,000 ವರೆಗೆ ಸಾಲ ಪಡೆಯಬಹುದು.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಈ ಸಾಲದ ಗರಿಷ್ಠ ಅವಧಿ ನಾಲ್ಕು ವರ್ಷಗಳಾಗಿದ್ದು, 10.5% ನಷ್ಟು ಬಡ್ಡಿ ವಿಧಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಪ್ರೀ ಅಪ್ರೂವ್ದ್ ಗ್ರಾಹಕರಿಗೆ ದ್ವಿಚಕ್ರ ವಾಹನದ ಆನ್ ರೋಡ್ ಬೆಲೆಯ 85% ವರೆಗೂ ಸಾಲ ನೀಡಲಾಗುತ್ತದೆ. ಮೊದಲೇ ಹೇಳಿದಂತೆ ಈ ಸಾಲದ ಅವಧಿ 48 ತಿಂಗಳುಗಳಾಗಿರುತ್ತದೆ. ಈ ಸಾಲಕ್ಕೆ ಸರಾಸರಿ ಇಎಂಐ ಪ್ರತಿ ಲಕ್ಷಕ್ಕೆ ರೂ. 2,560 ಗಳಾಗಿದೆ. ಸಾಲದ ಮೊತ್ತವನ್ನು ನೇರವಾಗಿ ವಾಹನ ವಿತರಕರ ಖಾತೆಗೆ ಕಳುಹಿಸಲಾಗುತ್ತದೆ.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ನಮ್ಮ ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಇದು ನಮ್ಮ ನಿರಂತರ ಪ್ರಯತ್ನವಾಗಿದೆ ಎಂದು ಎಸ್‌ಬಿಐ ಅಧ್ಯಕ್ಷರಾದ ದಿನೇಶ್ ಖಾರಾ ಹೇಳಿದ್ದಾರೆ. SBI Yono ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಕುರಿತು ಮಾತನಾಡಿದ ಅವರು, ಈ ಅಪ್ಲಿಕೇಶನ್ ಗ್ರಾಹಕರಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಈ ಆ್ಯಪ್ ಅನ್ನು 2017ರ ನವೆಂಬರ್ ನಲ್ಲಿ ಆರಂಭಿಸಲಾಯಿತು. ಈ ಆ್ಯಪ್ ಅನ್ನು 9.80 ಕೋಟಿ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ಆ್ಯಪ್ ಸುಮಾರು 4.20 ಕೋಟಿ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಈ ಅಪ್ಲಿಕೇಶನ್‌ ಮೂಲಕ ಎಸ್‌ಬಿಐ 20 ಕ್ಕೂ ಹೆಚ್ಚು ವಿಭಾಗಗಳಲ್ಲಿ 110 ಇ ಕಾಮರ್ಸ್ ಕಂಪನಿಗಳ ಸೇವೆಗಳನ್ನು ಒದಗಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಬೈಕ್ ಖರೀದಿಸ ಬಯಸುವವರಿಗೆ ಇದು ಸರಿಯಾದ ಸಮಯವಾಗಿದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶದ ಬಹುತೇಕ ಎಲ್ಲಾ ಆಟೋ ಕಂಪನಿಗಳು ತಮ್ಮ ವಾಹನಗಳ ಮೇಲೆ ಹಲವು ಆಫರ್‌ಗಳನ್ನು ನೀಡುತ್ತಿವೆ. ಗ್ರಾಹಕರು ಇದರ ಲಾಭ ಪಡೆದು ಈ ದೀಪಾವಳಿಯಲ್ಲಿ ಮನೆಗೆ ಹೊಸ ಬೈಕ್ ಅನ್ನು ಕೊಂಡೊಯ್ಯ ಬಹುದು. ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ Hero Motocorp, Honda, Bajaj, TVS Motor ಹಾಗೂ Suzuki ಕಂಪನಿಗಳು ತಮ್ಮ ವಾಹನಗಳ ಮೇಲೆ ಹಲವು ಕೊಡುಗೆಗಳನ್ನು ನೀಡುತ್ತಿವೆ.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

Hero Motocorp ಕಂಪನಿಯು ತನ್ನ Splendor Plus, Maestro Edge ವಾಹನಗಳ ಮೇಲೆ ಹಲವು ರಿಯಾಯಿತಿಗಳನ್ನು ನೀಡುತ್ತಿದೆ. ಕಂಪನಿಯು ಕೇವಲ ರೂ. 6,999 ಡೌನ್ ಪೇಮೆಂಟ್‌ ಮಾಡಿ ಬೈಕ್ ಅಥವಾ ಸ್ಕೂಟರ್ ಅನ್ನು ಮನೆಗೆ ಕೊಂಡೊಯ್ಯುವ ಅವಕಾಶವನ್ನು ನೀಡುತ್ತಿದೆ. ಇದಲ್ಲದೇ ಆಯ್ದ ಬೈಕ್ ಹಾಗೂ ಸ್ಕೂಟರ್ ಮಾದರಿಗಳ ಮೇಲೆ ರೂ. 12,500 ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

Honda Motorcycles ಕಂಪನಿಯು ಸಹ ತನ್ನ ವಾಹನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. Honda ದ್ವಿಚಕ್ರ ವಾಹನಗಳ ಮೇಲೆ ಹಬ್ಬದ ಕೊಡುಗೆಯನ್ನು ನವೆಂಬರ್ 30 ರವರೆಗೆ ಪಡೆಯಬಹುದು. ಇಎಂಐ ಮೂಲಕ ಹೋಂಡಾ ಬೈಕ್ ಅಥವಾ ಸ್ಕೂಟರ್ ಖರೀದಿಸುತ್ತಿದ್ದರೆ, SBI ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ಗರಿಷ್ಠ ರೂ. 5,000 ಗಳ ಒಳಪಟ್ಟು ವಾಹನದ ಮೌಲ್ಯದ 5% ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಈ ಕೊಡುಗೆಯನ್ನು Honda Shine 125, Honda SP 125, Activa ಹಾಗೂ Activa 125 ಸ್ಕೂಟರ್ ಗಳ ಮೇಲೆ ನೀಡಲಾಗುತ್ತದೆ. Honda Motorcyclesಕಂಪನಿಯು ವಾಹನ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಡೌನ್‌ಪೇಮೆಂಟ್ ಮತ್ತು ಹೈಪೋಥೆಕೇಶನ್ ಅನ್ನು ಸರಳಗೊಳಿಸಿದೆ. ಗ್ರಾಹಕರು ಈಗ ಯಾವುದೇ ದಾಖಲೆಯ ಹಾರ್ಡ್ ಕಾಪಿಯನ್ನು ಸಲ್ಲಿಸದೆಯೇ ಸ್ಕೂಟರ್ ಖರೀದಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹೋಂಡಾ ದ್ವಿಚಕ್ರ ವಾಹನಗಳ ವಿತರಕರು ಯಾವುದೇ ಭೌತಿಕ ದಾಖಲೆಯನ್ನು (ಹಾರ್ಡ್ ಕಾಪಿ) ಇಲ್ಲದೆ ಆನ್‌ಲೈನ್ ಮತ್ತು ಡಿಜಿಟಲ್ ಮೂಲಕ ಎಲ್ಲಾ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ. ಕಂಪನಿಯು ತನ್ನ ವಾಹನಗಳನ್ನು 0% ಡೌನ್ ಪೇಮೆಂಟ್‌ನಲ್ಲಿ ನೀಡುತ್ತಿದೆ. ಕಂಪನಿಯು ವಾಹನಗಳಿಗೆ 100% ಹಣಕಾಸು ಸೌಲಭ್ಯವನ್ನು ಒದಗಿಸುತ್ತಿದೆ. ಇದಲ್ಲದೆ, ಕಂಪನಿಯು ವಾಹನಗಳ ಆನ್‌ಲೈನ್ ಬುಕ್ಕಿಂಗ್ ಅನ್ನು ಸಹ ಆರಂಭಿಸಿದೆ.

ದ್ವಿಚಕ್ರ ವಾಹನ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹೋಂಡಾ ಆಕ್ಟಿವಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡನೇ ಸ್ಕೂಟರ್ ಹಾಗೂ ಪ್ರತಿ ಮೂರನೇ ದ್ವಿಚಕ್ರ ವಾಹನ ಆಕ್ಟಿವಾ ಆಗಿರುತ್ತದೆ. ಮಾರಾಟದ ವಿಷಯದಲ್ಲಿ ಈ ಸ್ಕೂಟರ್ ಮೊದಲ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ 125 ಸ್ಕೂಟರ್ ಅನ್ನು ಸ್ಟ್ಯಾಂಡರ್ಡ್, ಅಲಾಯ್ ಮತ್ತು ಡಿಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Sbi offers pre approved two wheeler loan upto rs 3 lakhs through yono app details
Story first published: Thursday, November 4, 2021, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X