ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಜನವರಿ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಬೈಕ್‌ಗಳ ಅಂಕಿ ಅಂಶಗಳು ಬಹಿರಂಗವಾಗಿವೆ. ಈ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್, ಹೆಚ್‌ಎಫ್ ಡೀಲಕ್ಸ್, ಹೋಂಡಾ ಸಿಬಿ ಶೈನ್‌ನಂತಹ ಬೈಕುಗಳು ಸ್ಥಾನ ಪಡೆದಿವೆ.

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಟಾಪ್ 10 ಪಟ್ಟಿಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯ ನಾಲ್ಕು, ಹೋಂಡಾ ಕಂಪನಿಯ ಎರಡು ಹಾಗೂ ಇನ್ನಿತರ ಕಂಪನಿಯ ಬೈಕುಗಳು ಸ್ಥಾನ ಪಡೆದಿವೆ. ಹೀರೋ ಸ್ಪ್ಲೆಂಡರ್ ಕಳೆದ ತಿಂಗಳು ದೇಶದಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಕಳೆದ ತಿಂಗಳು ಈ ಬೈಕಿನ 2,25,382 ಯುನಿಟ್'ಗಳು ಮಾರಾಟವಾಗಿವೆ.

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಈ ಬೈಕ್ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿರುವ ಹೆಚ್‌ಎಫ್ ಡೀಲಕ್ಸ್ ಹಿಂದಿನ ತಿಂಗಳು 1,34,860 ಯುನಿಟ್‌ ಮಾರಾಟವನ್ನು ದಾಖಲಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಹೋಂಡಾ ಸಿಬಿ ಶೈನ್ ಬೈಕಿನ 1,16,222 ಯುನಿಟ್'ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿವೆ. 2020ರ ಜನವರಿಯಲ್ಲಿ ಈ ಬೈಕಿನ 66,832 ಯುನಿಟ್'ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಮಾರಾಟಕ್ಕಿಂತ ಈ ವರ್ಷದ ಮಾರಾಟದಲ್ಲಿ 74%ನಷ್ಟು ಹೆಚ್ಚಳವಾಗಿದೆ.

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಬಜಾಜ್ ಪಲ್ಸರ್ ಬೈಕಿನ 97,580 ಯುನಿಟ್'ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿವೆ. ಕಂಪನಿಯು ಈ ಬೈಕಿನ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಇದರ ನಂತರದ ಸ್ಥಾನದಲ್ಲಿರುವ ಹೀರೋ ಪ್ಯಾಶನ್ ಬೈಕಿನ 43,162 ಯುನಿಟ್'ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿವೆ. ಕಳೆದ ವರ್ಷದ ಜನವರಿಯಲ್ಲಿ ಈ ಬೈಕಿನ 26,905 ಯುನಿಟ್'ಗಳು ಮಾರಾಟವಾಗಿದ್ದವು.

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಈ ಬೈಕಿನ ಮಾರಾಟವು ಕಳೆದ ವರ್ಷಕ್ಕಿಂತ ಈ ವರ್ಷ 60%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಈ ಪಟ್ಟಿಯಲ್ಲಿ 40,872 ಯುನಿಟ್'ಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಟಿವಿಎಸ್ ಅಪಾಚೆ ಬೈಕ್ ಜನವರಿ ತಿಂಗಳಿನಲ್ಲಿ 28,456 ಯುನಿಟ್ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷದ ಜನವರಿಯಲ್ಲಿ ಈ ಬೈಕಿನ 23,157 ಯುನಿಟ್'ಗಳು ಮಾರಾಟವಾಗಿದ್ದವು. ಈ ಮೂಲಕ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 23%ನಷ್ಟು ಹೆಚ್ಚಳವಾಗಿದೆ.

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಬಜಾಜ್ ಪ್ಲಾಟಿನಾ ಬೈಕ್ 27,131 ಯುನಿಟ್ ಮಾರಾಟದೊಂದಿಗೆ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೋಂಡಾ ಯೂನಿಕಾರ್ನ್ ಜನವರಿ ತಿಂಗಳಿನಲ್ಲಿ 25,799 ಯುನಿಟ್ ಮಾರಾಟದೊಂದಿಗೆ ಒಂಭತ್ತನೇ ಸ್ಥಾನದಲ್ಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಹೀರೋ ಗ್ಲಾಮರ್ 22,681 ಯುನಿಟ್ ಮಾರಾಟದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಈ ಬೈಕಿನ ಮಾರಾಟವು ಕಳೆದ ವರ್ಷಕ್ಕಿಂತ 44%ನಷ್ಟು ಇಳಿಕೆಯಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಈ ಬೈಕಿನ 40,318 ಯುನಿಟ್'ಗಳು ಮಾರಾಟವಾಗಿದ್ದವು.

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಹೀರೋ ಮೋಟೊಕಾರ್ಪ್ ಕಂಪನಿಯು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿ, ದೇಶದ ಅತಿದೊಡ್ಡ ದ್ವಿಚಕ್ರ ಮಾರಾಟ ಕಂಪನಿಯಾಗಿ ಉಳಿದಿದೆ. ಕಡಿಮೆ ಬೆಲೆ, ಹೆಚ್ಚು ಮೈಲೇಜ್, ಕಡಿಮೆ ನಿರ್ವಹಣೆಯ ಕಾರಣಕ್ಕೆ ಕಂಪನಿಯ ಬೈಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನವರಿ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಗಳನ್ನು ಗಮನಿಸಿದರೆ, ಹೆಚ್ಚು ಮಾರಾಟವಾಗುವ ಬೈಕುಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಕ್ಲಾಸಿಕ್ 350 ಬೈಕ್ ಈ ಪಟ್ಟಿಯಲ್ಲಿರುವ ದುಬಾರಿ ಬೆಲೆಯ ಬೈಕ್ ಆಗಿದೆ.

Most Read Articles

Kannada
English summary
Top selling bikes during January 2021 in domestic market. Read in Kannada.
Story first published: Saturday, February 20, 2021, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X