ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಸ್ಪೀಡ್ ಟ್ರಿಪಲ್ 1200ಆರ್‌ಆರ್(Triumph Speed Triple 1200RR) ಬೈಕನ್ನು ಬಿಡುಗಡೆಗೊಳಿಸಲಿದೆ. ಇದೀಗ ಟ್ರಯಂಫ್ ಕಂಪನಿಯು ತನ್ನ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕಿನ ಹ್ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಈ ಹೊಸ ಟೀಸರ್ ನಲ್ಲಿ ಪ್ರಮುಖ ವಿನ್ಯಾಸದ ಅಂಶಗಳು ಒಂದು ಸುತ್ತಿನ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಒಳಗೊಂಡಿವೆ, ಇದು ಅಲ್ಟ್ರಾ-ಗಾರ್ಜಿಯಸ್ ಎಂವಿ ಅಗಸ್ಟಾ ಸೂಪರ್‌ವೋಲೋಸ್ 800 ಅನ್ನು ನೆನಪಿಸುತ್ತದೆ.ಟೀಸರ್ ಪೆಟ್ರೋಲ್ ಟ್ಯಾಂಕ್ ಕೆಳಗೆ ಇರಿಸಿದ ಕಾರ್ಬನ್ ಫೈಬರ್ ಅಸ್ಸೆಂಟ್ ಗಳ ಲೆ ಬೆಳಕು ಚೆಲ್ಲುತ್ತದೆ, ಹೊಸ ಟೀಸರ್ ವಿಡಿಯೋವು ಬಲ್ಬಸ್ ಫ್ರಂಟ್ ಎಂಡ್ ಮತ್ತು ದೊಡ್ಡದಾದ ಏಕ ವೃತ್ತಾಕಾರದ ಹೆಡ್ ಲ್ಯಾಂಪ್ ಯುನಿಟ್ ಅನ್ನು ಪಡೆಯುತ್ತದೆ, ಇದು ದೊಡ್ಡ ಕೆಫೆ ರೇಸರ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಇನ್ನು ಟ್ಯಾಂಕ್ ಕೆಳಗೆ ಇರಿಸಿದ ಕಾರ್ಬನ್ ಫೈಬರ್ ಅಸ್ಸೆಂಟ್ ಗಳನ್ನು ಹೊಂದಿದೆ, ಜೊತೆಗೆ ಸೀಟಿನ ಮೇಲೆ ಹೊಲಿದ ವಿನ್ಯಾಸವಿದೆ. ಬೈಕ್‌ನಲ್ಲಿ ಎಲೆಕ್ಟ್ರಾನಿಕ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಫೋರ್ಕ್ಸ್ ಮತ್ತು ಟಿಎಫ್ಟಿ ಸ್ಕ್ರೀನ್ ಡ್ಯಾಶ್ ಇರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಹೊಸ ಫೇರ್ಡ್ ಟ್ರಯಂಫ್ ಅನ್ನು ಸ್ಪೀಡ್ ಟ್ರಿಪಲ್ 1200ಆರ್‌ಆರ್ ಎಂದು ಕರೆಯಲಾಗುತ್ತದೆ. ಇದು ಮೊದಲೇ ಇರುವ ಸ್ಪೀಡ್ ಟ್ರಿಪಲ್ 1200ಆರ್‌ಎಸ್‌ನಿಂದ ಸ್ಫೂರ್ತಿ ಪಡೆದಂತೆ ತೋರುತ್ತದೆ. ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ಹಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಭಾರೀ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದೇ ರೀತಿ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಕೂಡ ಅಗ್ರೇಸಿವ್ ಲುಕ್ ಅನ್ನು ಹೊಂದಿರುತ್ತದೆ. ಈ ಬೈಕಿನಲ್ಲಿ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಡ್ಯುಯಲ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಇದರೊಂದಿಗೆ ಈ ಬೈಕ್ ತೀಕ್ಷ್ಣವಾದ ಬೆಲ್ಲಿ ಪ್ಯಾನ್, ಕಾರ್ಬನ್-ಫೈಬರ್ ಫ್ರಂಟ್ ಫೆಂಡರ್, ಹಿಂಭಾಗದ ಸೀಟ್ ಕೌಲ್ ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಕಾಂಪ್ಯಾಕ್ಟ್ ಟೈಲ್ ವಿಭಾಗದಿಂದ ಈ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ನೀಡಿದೆ. ಈ ಹೊಸ ಬೈಕ್ ಎಲ್ಲಾ ಹೊಸ ಅಲ್ಯೂಮಿನಿಯಂ ಚಾಸಿಸ್ ಬಳಸಿ ನಿರ್ಮಿಸಲಾಗಿದ್ದು, ಹಳೆಯ ಮಾದರಿಗಿಂತ 10 ಕಿಲೋಗ್ರಾಂಗಳಷ್ಟು ಹೆಚ್ಚು ಹಗುರವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಇನ್ನು ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಈಗ ಒಟ್ಟು 198 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ ಫುಲ್ ಎಲ್ಇಡಿ ಲೈಟ್ ಹೊರತಾಗಿ, 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಸಹ ಇತರ ಫೀಚರ್ ಗಳೊಂದಿಗೆ ಬರುತ್ತದೆ. ಇದು 5 ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಸ್ವಿಚ್‌ಗಿಯರ್, ಕೀ ಲೆಸ್ ಇಗ್ನಿಷನ್, ಇಂಟಿಗ್ರೇಟೆಡ್ ಗೋಪ್ರೊ ಕಂಟ್ರೋಲ್ಸ್ ಮತ್ತು ಮೈಟ್ರಿಯಂಫ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿದ್..

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನಲ್ಲಿ ಹೊಸ 1160 ಸಿಸಿ ಮೂರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,750 ಆರ್‌ಪಿಎಂನಲ್ಲಿ 178 ಬಿಹೆಚ್‌ಪಿ ಪವರ್ ಮತ್ತು 9000 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಬೈ-ಡೈರಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಪೀಡ್ ಟ್ರಿಪಲ್ ತನ್ನ ಹಿಂದಿನ ಮಾದರಿಗೆ ಹೋಲಿಸಿದರೆ 30 ಬಿಹೆಚ್‌ಪಿ ಪವರ್ ಮತ್ತು 8 ಎನ್ಎಂ ಹೆಚ್ಚು ಟಾರ್ಕ್ ಉತ್ಪಾದಿಸುತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಇನ್ನು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟಾಪ್-ಸ್ಪೆಕ್ ಓಹ್ಲಿನ್ಸ್ ಎನ್ಐಎಕ್ಸ್ 30 ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಎರಡು ಪ್ರಿ-ಲೋಡ್ ಆಗಿ ಸಂಪೂರ್ಣವಾಗಿ ಹೊಂದಿಸಬಹುದಾಗಿದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್, ಕಾರ್ನರಿಂಗ್ ಎಬಿಎಸ್, 6-ಆಕ್ಸಿಸ್ ಐಎಂಯು, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಐಷಾರಾಮಿ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ಸ್,ಟ್ರ್ಯಾಕ್ ಮತ್ತು ರೈಡರ್ ಎಂಬ ರೈಡಿಂಗ್ ಮೋಡ್ ಗಳನ್ನು ಕೂಡ ಒಳಗೊಂಡಿದೆ. ಇನ್ನು ಟ್ರಯಂಫ್ ಮೋಟರ್‌ಸೈಕಲ್ ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಇದೀಗ ಈ ಟ್ರಯಂಫ್ ತನ್ನ ಈ ಹೊಸ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕಿನ ವಿತರಣೆಯನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಪ್ರಾರಂಭಿಸಿದ್ದಾರೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Triumph Speed Triple 1200RR ಬೈಕ್

ಈ ಹೊಸ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಕೂಡ ಅದೇ ರೀತಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ಈ ಹೊಸ ಟ್ರಯಂಫ್ ಬೈಕಿನ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಈ ಬಹುನಿರೀಕ್ಷಿತ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‌ಆರ್ ಬೈಕ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Triumph released new teaser video for speed triple 1200rr ahead of unveil details
Story first published: Wednesday, September 8, 2021, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X